ಸಾರ್ವಜನಿಕರ ಅಹವಾಲು ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು
BP News ಬಳ್ಳಾರಿ, ಆ.05-ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ತಮ್ಮ ಸ್ವ ಗೃಹದ ಕಚೇರಿಯಲ್ಲಿ ಜನತಾದರ್ಶನ ನಡೆಸಿ ವಿವಿಧೆಡೆಯಿಂದ ಆಗಮಿಸಿದ್ದ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.
ನಗರ ಶಾಸಕರಾದ ಜಿ.ಸೋಮಶೇಖರ ರೆಡ್ಡಿ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಪಾಲಣ್ಣ, ನಗರ ಪಾಲಿಕೆ ಸದಸ್ಯರಾದ ತಿಲಕ್ ಕೋನಂಕಿ ಹಾಗೂ ಇನ್ನಿತರರು ಇದ್ದರು.
——
ವರಮಹಾಲಕ್ಷ್ಮಿ ವ್ರತ ಹಿನ್ನೆಲೆ-ಮಹಿಳೆಯರಿಗೆ ಅರಿಶಿನ-ಕುಂಕುಮ ವಿತರಣೆ
BP News ಬಳ್ಳಾರಿ,ಆ.05-ಶ್ರೀ ವರಮಹಾಲಕ್ಷ್ಮಿ ವ್ರತವನ್ನು ಮುಜರಾಯಿ ಇಲಾಖೆಯ ವತಿಯಿಂದ ವಿಶೇಷವಾಗಿ ಆಚರಿಸಲಾಗುತ್ತಿದ್ದು, ಶ್ರೀ ಕನಕದುರ್ಗಮ್ಮ ದೇವಸ್ಥಾನ, ಶ್ರೀ ಕುಮಾರಸ್ವಾಮಿ ದೇವಸ್ಥಾನ, ಶ್ರೀ ಕೋಟೆ ಮಲ್ಲೇಶ್ವರಸ್ವಾಮಿ ದೇವಸ್ಥಾನಗಳಲ್ಲಿ ವರಮಹಾಲಕ್ಷ್ಮೀ ವ್ರತವಾದ ಇಂದು ವಿಶೇಷ ಪೂಜೆಯನ್ನು ನೆರವೇರಿಸಿ, ದೇವಾಲಯಗಳಿಗೆ ಆಗಮಿಸಿದ ಮಹಿಳೆಯರಿಗೆ ಉತ್ತಮ ಗುಣಮಟ್ಟದ ಕಸ್ತೂರಿ ಅರಿಶಿಣ-ಕುಂಕುಮ ಮತ್ತು ಹಸಿರು ಬಳೆಗಳನ್ನು ಗೌರವ ಸೂಚಕವಾಗಿ ನೀಡಲಾಯಿತು.
——
ಯುವಜನೋತ್ಸವಕ್ಕೆ ನಟಿ ಮೇಘನಾ ಗಾಂವ್ಕರ್ ಚಾಲನೆ
BP News ಬಳ್ಳಾರಿ,ಆ.05-ಪ್ರತಿ ವಿದ್ಯಾರ್ಥಿಗಳು ತಮ್ಮ ಜೀವನ ರೂಪಿಸಿಕೊಳ್ಳಲು ಚಾರ್‍ಮಿನಾರ್‍ನಂತೆ ನಾಲ್ಕು ಕಂಬಗಳಂತಿರುವ ತಂದೆ-ತಾಯಿ, ಸ್ನೇಹಿತರು, ಸಂಗಾತಿ ಮತ್ತು ಶಿಕ್ಷಕರು ಅತ್ಯವಶ್ಯಕವಾಗಿರುತ್ತಾರೆÉ ಎಂದು ಕನ್ನಡ ಚಲನಚಿತ್ರÀ ಖ್ಯಾತ ನಟಿ ಹಾಗೂ ಫಿಲಂಫೇರ್ ಪ್ರಶಸ್ತಿ ಪುರಸ್ಕøತರಾದ ಮೇಘನಾ ಗಾಂವ್ಕರ್ ಹೇಳಿದರು.
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ವಿವಿಯ ಎರಡು ದಿನಗಳ ‘ಸಾಂಸ್ಕøತಿಕ ವೈಭವ-ಯುವಜನೋತ್ಸವ 2022’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
——
ಜಾನಪದ ಉಳಿದರೆ ತೊಗಲುಗೊಂಬೆ ಕಲೆ ಉಳಿದೀತು-ಜಿ.ಸೋಮಶೇಖರ್ ರೆಡ್ಡಿ
BP News ಬಳ್ಳಾರಿ, ಅ.5-ಹಿರಿಯರ ಮಾರ್ಗದರ್ಶನದಂತೆ ತೊಗಲುಗೊಂಬೆ ಕಲೆಯನ್ನು ಜಾನಪದ ಕಲೆಯಂತೆ ಉಳಿಸಿ ಬೆಳೆಸಿದರೆ ತೊಗಲುಗೊಂಬೆ ಕಲೆಯೂ ಉಳಿದೀತು ಎಂದು ಶಾಸಕ ಜಿ.ಸೋಮಶೇಖರ್ ರೆಡ್ಡಿ ಹೇಳಿದರು.
ಮುನಿರತ್ನ ಟ್ರಸ್ಟ್ (ರಿ), ಬಳ್ಳಾರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬಳ್ಳಾರಿ ಇವರ ವಿಶೇಷ ಘಟಕ ಯೋಜನೆಯಡಿಯಲ್ಲಿ ಶ್ರೀಕೃಷ್ಣದೇವರಾಯ ತೊಗಲುಗೊಂಬೆ ಪ್ರದರ್ಶನ ಮತ್ತು ಸಾಂಸ್ಕøತಿಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಮಹಾನಗರ ಪಾಲಿಕೆ ಸದಸ್ಯ ಶ್ರೀನಿವಾಸ್ ಮೋತ್ಕರ್ ಇದ್ದರು.
——-
ಹಂಪಿ ವಿವಿ ಪ್ರಕಟಣೆಯಿಂದ ಶೇ 50 ವಿಶೇಷ ರಿಯಾಯಿತಿ ದರದಲ್ಲಿ ಪುಸ್ತಕ ಮಾರಾಟ
BP News ಬಳ್ಳಾರಿ,ಆ.8-ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಣೆಯ ಸಂಬಂಧ ಆಗಸ್ಟ್ 10 ರಿಂದ ಸೆಪ್ಟೆಂಬರ್ 10ರವರೆಗೆ ಕನ್ನಡ ವಿಶ್ವವಿದ್ಯಾಲಯ ಹಂಪಿ ಪ್ರಸಾರಾಂಗವು ಪ್ರಕಟಿಸಿರುವ ಎಲ್ಲಾ ಪ್ರಕಟಣೆಗಳನ್ನು ಶೇ. 50 ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ನಿರ್ದೇಶಕರು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ, ವಿದ್ಯಾರಣ್ಯ 583 276, ಹೊಸಪೇಟೆ ತಾಲ್ಲೂಕು, ವಿಜಯನಗರ ಜಿಲ್ಲೆ, ಮೊಬೈಲ್ ಸಂಖ್ಯೆ: 94492 62647 ಈ ಕರೆಗಳನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದು.
—-
ತುಂಗಭದ್ರ ನದಿಗೆ ಬಹುಮಹಡಿ ಸೇತುವೆ ನಿರ್ಮಾಣಕ್ಕೆ ಮನವಿ
BP News ಬಳ್ಳಾರಿ,ಆ.5-ರಾಜ್ಯ ಹೆದ್ದಾರಿ-289 ತುಂಗಭದ್ರ ಬಲದಂಡೆ ಮೇಲೆ
ಬರುವ ಕಂಪ್ಲಿ–ಗಂಗಾವತಿ ಸೇತುವೆ ನಿರ್ಮಾಣ ಕಾಮಗಾರಿಗಾಗಿ
ರೂ. 7993 ಲಕ್ಷಅನುದಾನ ಮಂಜೂರು ಮಾಡಿರುವುದನ್ನುತಡೆಹಿಡಿದು,
ಗಂಗಾವತಿ ದರೋಜಿ ನೂತನ ಬ್ರಾಡ್‍ಗೇಜು ನಿರ್ಮಾಣದಲ್ಲಿ ಬರುವ
ತುಂಗಭದ್ರ ನದಿಗೆ ರೈಲು ಹಾಗೂ ಬಸ್ಸು ಸಂಚರಿಸುವ ಬಹುಮಹಡಿ ಸೇತುವೆ
ನಿರ್ಮಾಣಕ್ಕೆ ಮಂಜೂರಾದ ಹಣಕಾಯ್ದಿರಿಸುವಂತೆ ರೇಲ್ವೆ ಕ್ರಿಯಾ ಸಮಿತಿ ಮನವಿ ಮಾಡಿದೆ.
——-