BP News Karnataka Super Fast 03-08-2022

0
218

ಬೆಂಗಳೂರಿನಲ್ಲಿ ಕಲ್ಯಾಣ ಕರ್ನಾಟಕ 371(ಜೆ) ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ

BP News ಬೆಂಗಳೂರು,ಆ.3-ಬೆಂಗಳೂರಿನ ವಿಧಾನಸೌಧದಲ್ಲಿ ಇಂದು ನಡೆದ ಕಲ್ಯಾಣ ಕರ್ನಾಟಕ ಪ್ರದೇಶ ಸಂವಿಧಾನದ 371 ನೇ ( ಜೆ) ಅನುಷ್ಠಾನ ಸಭೆಯಲ್ಲಿ ಸಾರಿಗೆ, ಪರಿಶಿಷ್ಟ ಜಾತಿ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಉಸ್ತುವಾರಿ ಮಂತ್ರಿ ಬಿ.ಶ್ರೀರಾಮುಲು ವಿಶೇಷ ಸ್ಥಾನಮಾನದಡಿ ಹೊರಡಿಸಲಾದ ಆದೇಶಗಳ ಅನುμÁ್ಠನ, ಪ್ರಗತಿ ಪರಿಶೀಲನೆ ಹಾಗೂ ಪರಾಮರ್ಶಿಸುವ ಸಚಿವ ಸಂಪುಟದ ಉಪಸಮಿತಿ ಸಭೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
——
ಮಳೆಯಿಂದ ತತ್ತರಿಸಿದ ಗ್ರಾಮಗಳಿಗೆ ಶಾಸಕ ಬಿ. ನಾಗೇಂದ್ರ ಭೇಟಿ


BP News ಬಳ್ಳಾರಿ,ಆ.3-ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಗ್ರಾಮಾಂತರ ಪ್ರದೇಶಗಳ ಹಳ್ಳಿಗಳಲ್ಲಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಹಳ್ಳಿಗಳಿಗೆ ತೆರಳಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದರು.
ಹೊಸ ಮೋಕ, ಚಾಗನೂರು, ಸಿಡಿಗಿನಮೊಳ, ವೈ.ಕಗ್ಗಲ್ ಮತ್ತು ಇಬ್ರಾಹಿಂಪುರ ಗ್ರಾಮಗಳ ಮಳೆ ಹಾನಿ ಪೀಡಿತ ಸ್ಥಳಗಳಿಗೆ ಬಿಡಿ ಹಳ್ಳಿಯ ಹಿರಿಯ ಮುಖಂಡರಾದ ಸತ್ಯನಾರಾಯಣ ರೆಡ್ಡಿ ಅವರೊಂದಿಗೆ ತೆರಳಿ ಪರಿಶೀಲನೆ ನಡೆಸಿದರು.
—–
ಬಳ್ಳಾರಿ ಬೆಟ್ಟದಲ್ಲಿ ಚಿರತೆ? -ಇಂದು ಬೆಳಿಗ್ಗೆ ಗುಡ್ಡ ಶೋಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು


BP News ಬಳ್ಳಾರಿ,ಆ.3-ಇಲ್ಲಿನ ದಯಾ ಕೇಂದ್ರದ ಕಲ್ಲು ಬಂಡೆಯಲ್ಲಿ ಚಿರತೆ ಕಾಣಿಸಿಕೊಂಡಿದೆ ಎನ್ನುವ ಮಾಹಿತಿ ಆಧರಿಸಿ ಇಂದು ಬೆಳಿಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗುಡ್ಡವನ್ನು ಶೋಧಿಸಿ ಚಿರತೆಯ ಜಾಡು ಸಿಗದೇ ವಾಪಸ್ಸು ಆಗಿದ್ದಾರೆ.
ನಿನ್ನೆ ಸಂಜೆ ಸಂಜಯಗಾಂಧಿ ನಗರದ ಬಳಿ ಇರುವ ಏಕಶಿಲಾ ಬೆಟ್ಟದಲ್ಲಿ ಚಿರತೆ ಗೋಚರಿಸಿದ್ದರ ಬಗ್ಗೆ ಸ್ಥಳೀಯರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದರು. ಇದು ಎಲ್ಲೆಡೆ ವೈರಲ್ ಆಗಿತ್ತು. ವಲಯ ಅರಣ್ಯಾಧಿಕಾರಿ ಮಂಜುನಾಥ್ ಮತ್ತು ಸಿಬ್ಬಂದಿ ಶೋಧ ಕಾರ್ಯ ನಡೆಸಿ ಚಿರತೆ ಇಲ್ಲದಿರುವುದನ್ನು ದೃಢಪಡಿಸಿದ್ದಾರೆ.
—–
75ನೇ ಸ್ವಾತಂತ್ರ್ಯ ಸಂಭ್ರಮ-ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟಗಳು


BP News ಬಳ್ಳಾರಿ,ಆ.3-ಆಗಸ್ಟ್ 15 ರಂದು 75ನೇ ಅಮೃತ ಸ್ವಾತಂತ್ರ್ಯೋತ್ಸವ ಸಮಾರಂಭ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸ್ವಾತಂತ್ರ್ಯದ ಕುರಿತು ಆಸಕ್ತಿ ಹೊಂದಿರುವ ಓದುಗರಿಗಾಗಿ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟಗಳು ಎನ್ನುವ ಅಪರೂಪದ ಕೃತಿ ಬಿಡುಗಡೆಯಾಗಿದೆ.
ಡಾ.ಮಂಜುನಾಥ ಎಸ್.ಪಾಟೀಲ, ಶ್ರೀನಿವಾಸ ಎಸ್. ಕಟ್ಟಿಮನಿ, ಡಾ.ಅಜೀದ ಇ. ಮಯರ್ ಸಂಪಾದಕತ್ವದಲ್ಲಿ ಈ ಕೃತಿ ಪ್ರಕಟಗೊಂಡಿದೆ.
—–
ಕಂಪ್ಲಿಯಲ್ಲಿ ಬಿಇಓ ಕಚೇರಿ ಸ್ಥಾಪಿಸುವಂತೆ ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ಮನವಿ


BP News ಬಳ್ಳಾರಿ,ಆ.3-ಜಿಲ್ಲೆಯ ನೂತನ ಕಂಪ್ಲಿ ತಾಲೂಕು ಕೇಂದ್ರ ಸ್ಥಾನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ (ಬಿಇಓ) ಕಚೇರಿಯನ್ನ ಸ್ಥಾಪಿಸುವಂತೆ ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ಮನವಿ ಮಾಡಿದೆ.
ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಿಗೆ ಮತ್ತು ಪ್ರಧಾನ ಕಾರ್ಯದರ್ಶಿಗಳಿಗೆ ಬರೆದ ಪತ್ರವನ್ನು ಕಂಪ್ಲಿಯ ತಹಸೀಲ್ದಾರರಾದ ಗೌಸಿಯಾ ಬೇಗಂರ ಅವರಿಗೆ ಭಾರತೀಯ ದಲಿತ ಪ್ಯಾಂಥರ್ ಸಂಘಟನೆ ಕಂಪ್ಲಿ ತಾಲೂಕು ಘಟಕದಿಂದ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲಾಯಿತು.
—–
ಹೆರಿಗೆ ಬಳಿಕ ನವಜಾತ ಶಿಶುವಿಗೆ ಎದೆ ಹಾಲನ್ನು ನೀಡಿ:ಡಿಎಚ್‍ಒ ಡಾ.ಜನಾರ್ಧನ


BP News ಬಳ್ಳಾರಿ,ಆ.03- ಹೆರಿಗೆ ನಂತರ ನವಜಾತ ಶಿಶುವಿಗೆ ಅರ್ಧಗಂಟೆಯೊಳಗೆ ತಾಯಿಯ ಎದೆ ಹಾಲನ್ನು ನೀಡುವುದರಿಂದ ಮಗುವಿನÀ ಆರೋಗ್ಯ ಕಾಪಾಡುವ ಜೊತೆಗೆ ಬಾಣಂತಿ ತಾಯಿಯ ಆರೋಗ್ಯಕ್ಕೂ ಕ್ಷೇಮ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್ ಜನಾರ್ಧನ್ ತಿಳಿಸಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಸ್ವಾಮಿ ವಿವೇಕಾನಂದ ಯುತ್ ಮೂವಮೇಂಟ್ ಸಹಯೋಗದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಮಕ್ಕಳ ವಿಭಾಗದ ಸಹಕಾರದೊಂದಿಗೆಹಮ್ಮಿಕೊಂಡಿದ್ದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
—–

 

 

LEAVE A REPLY

Please enter your comment!
Please enter your name here