BP News Karnataka Super Fast 26-07-2022

0
163

ನಿಧಾನಗತಿ ರಸ್ತೆ ನಿರ್ಮಾಣ-ವಡ್ಡರಬಂಡೆಯಲ್ಲಿ ಪ್ರತಭಟನೆ


BP News  ಬಳ್ಳಾರಿ,ಜು.26-ವಡ್ಡರಬಂಡೆಯ ಬಾಲಾಜಿ ರಾವ್ ರಸ್ತೆಯ ನಾಗರೀಕರು ದಿಢೀರ್ ಪ್ರತಿಭಟನೆ ನಡೆಸಿ ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ಧ ಘೋಷನೆಗಳನ್ನು ಕೂಗಿದರು.
ಕಳೆದ 5 ತಿಂಗಳುಗಳಿಂದ ನಿಧಾನಗತಿಯ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದರಿಂದ ಸಂಚಾರಕ್ಕೆ ಅಡಚಣೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ರಸ್ತೆಯನ್ನು ಬಂದ್ ಮಾಡಿದರು. ಟೈರ್-ಟ್ಯೂಬ್‍ಗಳನ್ನು ಸುಟ್ಟು ಹಾಕಿದರು. ಪೋಲಿಸರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಅಧಿಕಾರಿಗಳನ್ನು ಭೇಟಿ ಮಾಡಿಸಿ, ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದ ನಂತರ ರಸ್ತೆ ತಡೆಯನ್ನು ಹಿಂಪಡೆಯಲಾಯಿತು.
—–
ನಾಳೆ ಬಳ್ಳಾರಿಗೆ ರಂಗ ಜ್ಯೋತಿ ಯಾತ್ರೆ


BP News  ಬಳ್ಳಾರಿ,ಜು.26-ಜೋಳದರಾಶಿ ದೊಡ್ಡನಗೌಡರ 113ನೇ ಜನ್ಮ ದಿನದ ಅಂಗವಾಗಿ ಬಳ್ಳಾರಿಯಲ್ಲಿ ರಂಗ ಜ್ಯೋತಿಯಾತ್ರೆ ಹಮ್ಮಿಕೊಂಡಿದೆ.
ಬೆಳಿಗ್ಗೆ 9 ಗಂಟೆಗೆ ಚೆಳ್ಳಗುರ್ಕಿ ಎರ್ರಿತಾತನವರ ಮಠದಿಂದ ಡಾ. ಜೋಳದರಾಶಿ ದೊಡ್ಡನಗೌಡರ ಭಾವಚಿತ್ರ ಹೊಂದಿರುವ ವಾಹನ ಹಾಗೂ ನೂರಕ್ಕೂ ಹೆಚ್ಚು ಯುವಕರ ಬೈಕ್‍ಗಳೊಂದಿಗೆ ಹೊರಡುವ ಜ್ಯೋತಿಯಾತ್ರೆ, ವಿವಿಧ ಗ್ರಾಮಗಳ ಮೂಲಕ ಮಧ್ಯಾಹ್ನ 1 ಗಂಟೆಗೆ ಬಳ್ಳಾರಿಯ ರಾಘವ ಕಲಾಮಂದಿರದಲ್ಲಿರುವ ಬಳ್ಳಾರಿ ರಾಘವರ ಪ್ರತಿಮೆಗೆ ಮಾಲಾರ್ಪಣೆಯೊಂದಿಗೆ ಸಂಪನ್ನಗೊಳ್ಳಲಿದೆ.
——-
ಜಾನೆಕುಂಟೆ ಗ್ರಾಮದಲ್ಲಿ ಬಂಜಾರ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ


BP News  ಬಳ್ಳಾರಿ,ಜು.26-ಬಳ್ಳಾರಿಯ ಗೋರ್ ಸಿಕವಾಡಿ ಗೋರ್ ಸೇನಾ ಕಟಮಳೂ ವತಿಯಿಂದ ಬಂಜಾರ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
2021-2022 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ಯಲ್ಲಿ ಶೇ 75%ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ತಾಲೂಕಿನ ಎಲ್ಲ ತಾಂಡದ ನಾಯ್ಕ ಕಾರಭಾರಿ ಹಾಗೂ ಗ್ರಾಮಪಂಚಾಯತಿ ಸದಸ್ಯರು, ಗೋರ್ ಸಿಕವಾಡಿ ಗೋರ್ ಸೇನಾ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.
—–
ಹುಲಿಗೆಮ್ಮ ತಂಡದವರಿಂದ ದಶಕಂಠ ಶಿವನ ಆತ್ಮಲಿಂಗ ತೊಗಲುಗೊಂಬೆ ಪ್ರದರ್ಶನ


BP News  ಬಳ್ಳಾರಿ,ಜು.26-ಶಿವಶ್ರೀ ಸಾರ್ವಜನಿಕ ಸೇವಾ ಟ್ರಸ್ಟ್ ಬಳ್ಳಾರಿ, ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರಿಂದ ವಿಶೇಷ ಘಟಕ ಯೋಜನೆಯಡಿಯಲ್ಲಿ ಪ್ರಾಯೋಜಿತ ಹುಲಿಗೆಮ್ಮ ಮತ್ತು ತಂಡದವರಿಂದ ದಶಕಂಠ ರಾವಣ ಶಿವನ ಆತ್ಮಲಿಂಗ ತೊಗಲುಗೊಂಬೆ ಪ್ರದರ್ಶನ ನಡೆಯಿತು.
ತಾಲ್ಲೂಕಿನ ಕಪ್ಪಗಲ್ಲು ಗ್ರಾಮದ ಬಯಲು ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಮುಖಂಡ ಬಸವ, ಟ್ರಸ್ಟ್‍ನ ಅಧ್ಯಕ್ಷರಾದ ಬಿ.ಶಿವರಾಜಗೌಡ, ಹಿರಿಯ ಛಾಯಾಗ್ರಹಕ ತಿಪ್ಪೇಸ್ವಾಮಿ, ಗ್ರಾಮದ ಮುಖಂಡರು, ಸದಸ್ಯರು ಉಪಸ್ಥಿತರಿದ್ದರು.
——
ಆಗಸ್ಟ್ 3 ರಂದು ಸಿದ್ಧರಾಮೋತ್ಸವ-75: ಬಳ್ಳಾರಿಯಲ್ಲಿ ಪೂರ್ವಭಾವಿ ಸಿದ್ಧತಾ ಸಭೆ


BP News  ಬಳ್ಳಾರಿ,ಜು.26-ಆಗಸ್ಟ್ 3 ರಂದು ದಾವಣಗೆರೆಯಲ್ಲಿ ಸಿದ್ಧರಾಮೋತ್ಸವ-75 ಸಮಾರಂಭ ಜರುಗಲಿದ್ದು ಬಳ್ಳಾರಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು, ಅಭಿಮಾನಿಗಳು ಹೊರಡಬೇಕೆಂದು ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಹೇಳಿದರು.
ಇಲ್ಲಿನ ಎಂಆರ್‍ಕೆ ಫಂಕ್ಷನ್ ಹಾಲ್ ನಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ಬಳ್ಳಾರಿಯಿಂದ 6 ಗಂಟೆಗೆ ಹೊರಟು 11 ಗಂಟೆಗೆ ಸರಿಯಾಗಿ ದಾವಣಗೆರೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಲಹೆಗಳನ್ನು ನೀಡಿದರು.
—–
ಮಾದಿಗ ದಂಡೋರ ಸಮಿತಿಯಿಂದ 2ನೇ ದಿನಕ್ಕೆ ಮುಂದುವರಿದ ಅನಿರ್ದಿಷ್ಟಾವಧಿ ಧರಣಿ


BP News ಬಳ್ಳಾರಿ,ಜು.26-ಪರಿಶಿಷ್ಟ ಜಾತಿಗೆ ಸೇರ್ಪಡೆಯಾಗಲು ಮತ್ತು ಪ್ರಮಾಣ ಪತ್ರ ಪಡೆಯಲು ಸರ್ಕಾರವನ್ನು ಒತ್ತಾಯಿಸುತ್ತಿರುವ ಮುಂದುವರಿದ ಜನಾಂಗದವರಿಗೆ ಎಸ್‍ಸಿ ಜಾತಿ ಸೇರ್ಪಡೆ ಮಾಡಬಾರದು ಮತ್ತು ಪ್ರಮಾಣ ಪತ್ರ ನೀಡಬಾರದು ಎಂದು ಒತ್ತಾಯಿಸಿ ಮಾದಿಗ ದಂಡೋರ ಸಮಿತಿಯಿಂದ ಹಮ್ಮಿಕೊಂಡ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಇಂದು ಎರಡನೇ ದಿನಕ್ಕೆ ಕಾಲಿರಿಸಿದೆ.
ರಾಜ್ಯ ಸಮಿತಿಯ ಖಜಾಂಚಿ ಎ.ಕೆ.ಹುಲುಗಪ್ಪ ನೇತೃತ್ವದಲ್ಲಿ ಈ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
—–

LEAVE A REPLY

Please enter your comment!
Please enter your name here