BP News Karnataka Super Fast 25-07-2022

0
147

ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರು ಶ್ರಮಿಸಿ: ಪ್ರವಾಸೋದ್ಯಮ ಸಚಿವ ಆನಂದಸಿಂಗ್


BP News ಹೊಸಪೇಟೆ(ವಿಜಯನಗರ),ಜು.25-ಕೇಂದ್ರ ವಿದ್ಯುತ್ ಸಚಿವಾಲಯ(ಇಂಧನ ಸಚಿವಾಲಯ),ವಿಜಯನಗರ ಜಿಲ್ಲಾಡಳಿತ ಮತ್ತು ಜೆಸ್ಕಾಂ ಸಹಯೋಗದೊಂದಿಗೆ ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆ ನಿಮಿತ್ತ ‘ಉಜ್ವಲ ಭಾರತ-ಉಜ್ವಲ ಭವಿಷ್ಯ’ ದಿವಸ ವಿದ್ಯುತ್@2047 ಕಾರ್ಯಕ್ರಮ ಹೊಸಪೇಟೆ ನಗರದದಲ್ಲಿ ಹಮ್ಮಿಕೊಳ್ಳಲಾಗಿದ್ದು, ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಆನಂದಸಿಂಗ್ ಅವರು ಚಾಲನೆ ನೀಡಿದರು.
ಯುವಕರನ್ನು ಹೊಂದಿರುವ ದೇಶ ನಮ್ಮದಾಗಿದ್ದು, ಯುವಕರು ನಮ್ಮ ದೇಶದ ಭವಿಷ್ಯಕ್ಕಾಗಿ, ಅಭಿವೃದ್ಧಿಗಾಗಿ ಶ್ರಮವಹಿಸಬೇಕು ಎಂದರು.
——
ಕಟ್ಟಡ ನಿರ್ಮಾಣ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹ


BP News ಬಳ್ಳಾರಿ,ಜು.25-ರಾಜ್ಯದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಫಲಾನುಭವಿಗಳ ಶೈಕ್ಷಣಿಕ, ಮದುವೆ, ಹೆರಿಗೆ ಹಾಗೂ ಬಾಕಿ ಇರುವ ಎಲ್ಲಾ ಸಹಾಯಧನ ಕ್ಲೈಂ ಗಳ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ ಸಹಾಯವನ್ನು ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಎ.ದೇವದಾಸ್ ಹೇಳಿದರು. ಕಾರ್ಮಿಕ ಕಛೇರಿಯ ಮುಂದೆ ಪ್ರತಿಭಟಿಸಿದ ಸಂದರ್ಭದಲ್ಲಿ ಸರ್ಕಾರಕ್ಕೆ ಈ ಕುರಿತು ಒತ್ತಾಯಿಸಿದರು.
—–
ಬಾಲಕೃಷ್ಣನಾಗಿ ವರುಣ್


BP News ಬಳ್ಳಾರಿ,ಜು.25-ಕನ್ನಡ ಮತ್ತು ಸಂಸ್ಕøತಿ ಇಲಾಖೆಯು ಇಲ್ಲಿನ ಹೊಂಗಿರಣದಲ್ಲಿ ಈಶ್ವರಸ್ವಾಮಿ ಸೇವಾ ಟ್ರಸ್ಟ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವೀರ ಅಭಿಮನ್ಯು ಕಾಳಗ ಬಯಲಾಟ ಪ್ರದರ್ಶನದಲ್ಲಿ ಸಚಿವ ಬಿ.ಶ್ರೀರಾಮುಲು ಅವರ ಆಪ್ತ ಛಾಯಾಗ್ರಾಹಕ ವೀರೇಶ್ ಕುಂಬಾರ್ ಅವರ ಪುತ್ರ ವರುಣ್ ಬಾಲಕೃಷ್ಣನ ಪಾತ್ರದಲ್ಲಿ ಗಮನ ಸೆಳೆದರು.
—–
ಬೇಡ ಜಂಗಮರಿಗೆ ಎಸ್‍ಸಿ ಜಾತಿ ಪ್ರಮಾಣ ಪತ್ರ ನೀಡದಿರಲು ಒತ್ತಾಯ


BP News ಬಳ್ಳಾರಿ,ಜು.25-ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬೇಡ ಜಂಗಮರ ಹೆಸರಿನಲ್ಲಿ ಎಸ್‍ಸಿ ಜಾತಿ ಪ್ರಮಾಣ ಪತ್ರ ನೀಡಬಾರದೆಂದು ಆಗ್ರಹಿಸಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ಮಾದಿಗ ದಂಡೋರ ಹೋರಾಟ ಸಮಿತಿ ರಾಜ್ಯ ಖಜಾಂಚಿ ಹಾಗೂ ಜಿಲ್ಲಾಧ್ಯಕ್ಷರಾಗಿರುವ ಎಕೆ ಹುಲುಗಪ್ಪ ನೇತೃತ್ವದಲ್ಲಿ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿದ ಮುಖಂಡರು ನ್ಯಾಯಮೂರ್ತಿ ಸದಾಶಿವ ಆಯೋಗ ವರದಿಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
—–
ಗುಂತಕಲ್-ಚಿಕ್ಕಜಾಜೂರು ವೇಗದೂತ ರೈಲಿಗೆ ಅದ್ದೂರಿ ಸ್ವಾಗತ


BP News ಬಳ್ಳಾರಿ,ಜು.25-ಗುಂತಕಲ್-ಚಿಕ್ಕಜಾಜೂರು ಎಕ್ಸ್‍ಪ್ರೆಸ್ ರೈಲು ಇಂದು ಆರಂಭಿಸಿದ್ದು, ಬೆಳಿಗ್ಗೆ 9 ಗಂಟೆಗೆ ಬಳ್ಳಾರಿಗೆ ಆಗಮಿಸಿದ ರೈಲನ್ನು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಎಲ್ಲಾ ಪದಾಧಿಕಾರಿಗಳು ಸ್ವಾಗತಿಸಿದರು.
ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಕ್ರಿಯಾ ಸಮಿತಿಯ ಅಧ್ಯಕ್ಷ ಕೆ ಎಂ ಮಹೇಶ್ವರ ಸ್ವಾಮಿಯ ನೇತೃತ್ವದಲ್ಲಿ ರೈಲಿಗೆ ಪೂಜೆ ಸಲ್ಲಿಸುವುದರ ಮೂಲಕ ರೈಲನ್ನು ಸ್ವಾಗತಿಸಿ ಬೀಳ್ಕೊಡಲಾಯಿತು.
——
ಕೌಲ್ ಬಜಾರ್ ಟೇಲರ್ ಬೀದಿಯಲ್ಲಿ ಧಾರ್ಮಿಕ ಆಚರಣೆ


BP News ಬಳ್ಳಾರಿ,ಜು.25-ಸ್ಥಳಿಯ ಕೌಲ್ ಬಜಾರ್ ಟೈಲರ್ ಬೀದಿಯಲ್ಲಿರುವ ಪಾಂಡುರಂಗ ದೇವಾಲಯದಲ್ಲಿ ಆμÁಢ ಮಾಸದ ಕೊನೆ ಏಕಾದಶಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಬೆಳಿಗ್ಗೆ ಪಾಂಡುರಂಗ ರುಕ್ಮಿಣಿ ಪ್ರತಿಮೆಗಳಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಸಾವಿರಾರು ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ಪಾಂಡುರಂಗ ದೇವರಪಾದ ಸ್ಪರ್ಶ ಮಾಡುವುದರ ಮೂಲಕ ದರ್ಶನ ಪಡೆದರು. ನೂರಾರು ಭಕ್ತರು ಜ್ಞಾನೇಶ್ವರ ಮಹಾರಾಜರು ರಚಿಸಿದ ಜ್ಞಾನೇಶ್ವರಿ ಕೃತಿ ಸಾಮೂಹಿಕ ವಾಗಿ ಪಾರಾಯಣ ಮಾಡಿದರು. ನೂರಾರು ಮಹಿಳೆಯರು ಕಳಸದ ಆರತಿ ಬೆಳಗಿದರು.
—–

 

 

LEAVE A REPLY

Please enter your comment!
Please enter your name here