ಚಿತ್ರಕಲಾವಿದ ಬಸವರಾಜ ಅವರಿಗೆ ಕರ್ನಾಟಕ” ಚಿತ್ರಕಲಾ ರತ್ನ ರಾಜ್ಯ ಪ್ರಶಸ್ತಿ”,

0
135

BP NEWS: ಬಳ್ಳಾರಿ: ಜುಲೈ.22:  ವಿದ್ಯಾಕಾಶಿ ದಾರವಾಡದಲ್ಲಿ ವಿಶ್ವ ದರ್ಶನ ಕನ್ನಡ ದಿನಪತ್ರಿಕೆಯ ಹತ್ತನೇ ವರ್ಷದ ವಾರ್ಷಿಕೋತ್ಸವ ಮತ್ತು ಈ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ.ಎಸ್. ಎಸ್.ಪಾಟೀಲ ರವರ ೫೩ ನೇ ವರ್ಷದ ಹುಟ್ಟು ಹಬ್ಬದ ನಿಮಿತ್ಯ ಕೊಡಮಾಡುವ ಕರ್ನಾಟಕ ಚಿತ್ರಕಲಾ ರತ್ನ ರಾಜ್ಯ ಪ್ರಶಸ್ತಿಯನ್ನು ಮುದ್ದೇಬಿಹಾಳ ಜಿಲ್ಲೆಯ, ತಾಲ್ಲೂಕಿನ ಯರಗಲ್ಲ ಗ್ರಾಮದ ಚಿತ್ರಕಲಾವಿದ ಬಸವರಾಜ ಹಣಮಪ್ಪ ಹಡಪದ ಇವರು ಚಿತ್ರಕಲಾ ಕ್ಷೇತ್ರದಲ್ಲಿ ಮಾಡಿದ ಅಪಾರ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಸವರಾಜ ಅವರು ಹಲವಾರು ರಾಜ್ಯ ಪ್ರಶಸ್ತಿಗಳು ಹಾಗೂ ರಾಷ್ಟ್ರೀಯ ಪ್ರಶಸ್ತಿ, ಮತ್ತು ಹಲವಾರು ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನಗಳು, ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದ ಚಿತ್ರ ಈ ಕಲಾವಿದನಿಗೆ ಮಹಾಸ್ವಾಮಿಗಳು, ಗಣ್ಯಾತೀಗಣ್ಯಮಾನ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ದಿವ್ಯಸಾನಿದ್ಯ ಪ.ಪೂ ಶ್ರೀ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮುರುಗಾಮಡ ದಾರವಾಡ, ಶ್ರೀ ಡಾ.ಜ್ಞಾನ ಕಾಲ ಬ್ರಹ್ಮಸದ್ಗುರು ಶರಣಬಸವ ಮಹಾಸ್ವಾಮಿಗಳು, ಕಾಲಜ್ಞಾನ ಮಡ ವೀರಯ್ಯ ಮಹಾಸ್ವಾಮಿಗಳು, ಪ.ಪೂ.ಶ್ರೀ ವಿದ್ಯಾ ನಂದ ಮಹಾಸ್ವಾಮಿಗಳು , ಮತ್ತು ವಿಶ್ವ ದರ್ಶನ ಕನ್ನಡ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ.ಎಸ್. ಎಸ್.ಪಾಟೀಲರವರು, ಶ್ರೀ ಬಂಗ್ಲೆ ಮಲ್ಲಿಕಾರ್ಜುನ, ಪಿ ವಿ ಕೋರಗಲ್ಲ ಮಠ ಸೇರಿದಂತೆ ಇನ್ನೂ ಹಲವಾರು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಶಸ್ತಿ ದೊರೆತಿದ್ದಕ್ಕೆ ಬಸವರಾಜ ಅವರು ಸೇವೆ ಸಲ್ಲಿಸುತ್ತಿರುವ ಸಂಗನಬಸವ ಶಿಶುನಿಕೇತನ ಶಾಲೆಯ ಪ್ರಾಂಶುಪಾಲರಾದ  ವಿಜಯಲಕ್ಷ್ಮೀ, ಉಪಪ್ರಾಂಶುಪಾಲರಾದ ಶ್ರೀದೇವಿ, ರಮೇಶ್ ಸರ್ ಹಾಗೂ  ಶಾಲಾ ಸಿಬ್ಬಂದಿ ವರ್ಗದವರು ಮತ್ತು ಯರಗಲ್ಲ ಗ್ರಾಮಸ್ಥರು ಹರ್ಷವ್ಯಕ್ತಪಡಿಸಿದ್ದಲ್ಲದೆ, ಅಭಿನಂದನೆಯನ್ನು ಬಿ ಪಿ ನ್ಯೂಸ್ ಮೂಲಕ ತಿಳಿಸಿದರು.

LEAVE A REPLY

Please enter your comment!
Please enter your name here