BP News Karnataka Super Fast 08-07-2022

0
237

ಬಳ್ಳಾರಿಯಲ್ಲಿ ಅಪರೂಪದ ನ್ಯಾಷನಲ್ ಕನ್ಸೂಮರ್ ಫನ್ ಫೇರ್ ಎಕ್ಸಿಬಿಷನ್ ಆರಂಭ


BP News  ಬಳ್ಳಾರಿ,ಜು.8-ಇಂದು ಸಂಜೆಯಿಂದ ಸತತ 60 ದಿನಗಳ ಕಾಲ ಇಲ್ಲಿನ ಮುನಿಸಿಪಲ್ ಕಾಲೇಜು ಮೈದಾನದ ಆವರಣದಲ್ಲಿ ಬಳ್ಳಾರಿ ನಾಗರಿಕರಿಗಾಗಿ, ಮಕ್ಕಳು ಮತ್ತು ಮಹಿಳೆಯರಿಗಾಗಿ ನ್ಯಾಷನಲ್ ಕನ್ಸೂಮರ್ ಫನ್ ಫೇರ್ ಎಕ್ಷಿಬಿಷನ್ ಆರಂಭಿಸಲಾಗಿದೆ.
ಈ ಕುರಿತು ಸಂಘಟಕರಾದ ಎಂ.ರಾಜಶೇಖರರೆಡ್ಡಿ ಮತ್ತು ರುದ್ರೇಶ್ ನಾಯಕ್ ಅವರು ಸುದ್ದಿಗೋಷ್ಠಿ ನಡೆಸಿ ಕರ್ನಾಟದಲ್ಲೇ ಪ್ರಪ್ರಥಮ ಬಾರಿಗೆ ಟನಲ್ ಅಕ್ಟೇರಿಯಮ್ ನೋಡಹುದಾಗಿದೆ ಎಂದು ತಿಳಿಸಿದ್ದಾರೆ.
——
ಬಕ್ರೀದ್ ಹಬ್ಬ ಆಚರಣೆ ಹಿನ್ನೆಲೆ-ಜು.10ರಂದು ಮದ್ಯ ಮಾರಾಟ ನಿಷೇಧ


BP News  ಬಳ್ಳಾರಿ,ಜು,08-ಬಳ್ಳಾರಿ ಜಿಲ್ಲೆಯಾದ್ಯಂತ ಜು.10ರಂದು ಬಕ್ರೀದ್ ಹಬ್ಬ ಆಚರಣೆ ನಿಮಿತ್ತ ಮದ್ಯಪಾನ ಮಾರಾಟ ಮತ್ತು ಸಾಗಾಣಿಕೆ ಮಾಡದಂತೆ ನಿμÉೀದಾಜ್ಞೆ ಜಾರಿಗೊಳಿಸಿ ಜಿಲ್ಲಾದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಾದ್ಯಂತ ಮದ್ಯದಂಗಡಿ, ಬಾರ್, ರೆಸ್ಟೋರೆಂಟ್ ಮತ್ತು ಇತರೆ ಸ್ಥಳಗಳಲ್ಲಿ ಜು.10 ಬೆಳಗ್ಗೆ 06ರಿಂದ ಜು.11ರ ಬೆಳಗ್ಗೆ 06ರವರೆಗೆ ಮದ್ಯಮಾರಾಟ ಮಾಡದಂತೆ ಮತ್ತು ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
——-
ವಿಜಯನಗರ ಜಿಲ್ಲೆಯಲ್ಲಿ ಬಕ್ರೀದ್ ಹಬ್ಬ ಆಚರಣೆ-ಮದ್ಯ ಮಾರಾಟ ನಿಷೇಧಿಸಿ ಡಿಸಿ ಅನಿರುದ್ಧ್ ಶ್ರವಣ್ ಆದೇಶ


BP News ಹೊಸಪೇಟೆ(ವಿಜಯನಗರ),ಜು.08-ವಿಜಯನಗರ ಜಿಲ್ಲೆಯಲ್ಲಿ ಬಕ್ರೀದ್ ಹಬ್ಬ ಆಚರಣೆ ನಿಮಿತ್ತ ಜಿಲ್ಲಾದ್ಯಾಂತ ಮದ್ಯಪಾನ ಮಾರಾಟ ಮತ್ತು ಸಾಗಾಣಿಕೆ ಮಾಡದಂತೆ ಹಾಗೂ ಬಾರ್&ರೆಸ್ಟೋರೆಂಟ್‍ಗಳನ್ನು ಮುಚ್ಚುವಂತೆ ವಿಜಯನಗರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಆದೇಶ ಹೊರಡಿಸಿದ್ದಾರೆ.
ಜು.09ರ ರಾತ್ರಿ 10ರಿಂದ ಜು.10ರಾತ್ರಿ 10ರವರೆಗೆ ಮದ್ಯ ಮಾರಾಟ ಮತ್ತು ಸಾಗಾಣಿಕೆ ಮಾಡದಂತೆ ಮದ್ಯದ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್‍ಗಳನ್ನು ಮುಚ್ಚುವಂತೆ ನಿಷೇದಾಜ್ಞೆ ಜಾರಿಗೊಳಿಸಿದ್ದಾರೆ.
——
ಹೊಸಪೇಟೆಯಲ್ಲಿ 37ಎಕರೆ ಪ್ರದೇಶದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣ- ಅಧ್ಯಕ್ಷ ಭೇಟಿ ಪರಿಶೀಲನೆ


BP News  ಹೊಸಪೇಟೆ(ವಿಜಯನಗರ)ಜು.08-ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ ಅಧ್ಯಕ್ಷರಾದ ಡಿ.ಎಸ್.ವೀರಯ್ಯ ಅವರು ವಿಜಯನಗರ ಜಿಲ್ಲೆಯ ಹೊಸಪೇಟೆ ಸಮೀಪದ ಅಮರಾವತಿ ಬಳಿ 37 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಟ್ರಕ್ ಟರ್ಮಿನಲ್‍ನ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಶೀಲನೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ಎಂಜನಿಯರ್‍ಗಳು ಹಾಗೂ ಗುತ್ತಿಗೆದಾರರಿಗೆ ನೀಡಿದರು.
——
ವಿಜಯನಗರ: ವನಮಹೋತ್ಸವ ಕಾರ್ಯಕ್ರಮ ಆಚರಣೆ


BP News ಹೊಸಪೇಟೆ(ವಿಜಯನಗರ)ಜು.08-ಅರಣ್ಯ ಇಲಾಖೆ ವತಿಯಿಂದ ಸಸಿಗಳನ್ನು ನೆಟ್ಟು, ಅರಣ್ಯವನ್ನು ಬೆಳೆಸೋಣ ಎಂಬ ಧ್ಯೇಯ ವಾಕ್ಯದೊಂದಿಗೆ ವನಮಹೋತ್ಸವ ಕಾರ್ಯಕ್ರಮವು ಹೊಸಪೇಟೆಯ ವಾಲ್ಮೀಕಿ ಭವನದ ಆವರಣದಲ್ಲಿ ನಡೆಯಿತು.
ನಗರಸಭೆ ಅಧ್ಯಕ್ಷೆ ಸುಂಕಮ್ಮ ಅವರು ಸಸಿ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಸಸಿಗಳನ್ನು ವಿತರಿಸಿದರು.
ಪರಿಸರ, ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಸಚಿವ ಆನಂದ್‍ಸಿಂಗ್ ಅವರು ಅನುಪಸ್ಥಿತಿಯಲ್ಲಿ ಮುಖಂಡ ಸಿದ್ದಾರ್ಥ್‍ಸಿಂಗ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
——

LEAVE A REPLY

Please enter your comment!
Please enter your name here