BP News Karnataka Super Fast 06-07-2022

0
200

ಜುಲೈ 8 ಮತ್ತು 9 ರಂದು ಯುವ ಜನೋತ್ಸವ


BP News  ಬಳ್ಳಾರಿ,ಜು.6-ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಸಂಲಗ್ನತೆಗೊಳಪಟ್ಟ ಬಳ್ಳಾರಿ ಜಿಲ್ಲಾ ವ್ಯಾಪ್ತಿಯ ಪದವಿ ಹಾಗೂ ವೃತ್ತಿಪರ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಸಾಂಸ್ಕøತಿಕ ವೈಭವ ಯುವಜನೋತ್ಸವ 2022 ಕಾರ್ಯಕ್ರಮವನ್ನು ಜುಲೈ 8 ಮತ್ತು 9 ರಂದು ಜರುಗಲಿದೆ.
ಈ ಕುರಿತು ಸಂಘಟಕರು ಮಾಹಿತಿ ನೀಡಿದ್ದು, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಹಾಗೂ ವೀರಶೈವ ವಿದ್ಯಾವರ್ಧಕ ಸಂಘದ ಕೊಟ್ಟೂರುಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಮುಖ್ಯ ಸಭಾಭವನ, ಸರ್ವೇಪಲ್ಲಿ ರಾಧಾಕೃಷ್ಣ ವೇದಿಕೆ ಹಾಗೂ ಸಾವಿತ್ರಿಬಾಯಿ ಪುಲೆ ವೇದಿಕೆಯಲ್ಲಿ ಆಯೋಜಿಸಲಾದೆ.
——
ನೆಹರು ಯುವ ಕೇಂದ್ರದಿಂದ ಡಾ.ಶಾಮ್ ಪ್ರಸಾದ್ ಮುಖರ್ಜಿ ಜನ್ಮ ದಿನಾಚರಣೆ


BP News  ಬಳ್ಳಾರಿ,ಜು.06-ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಸ್ಥಾಯಿ ಸಂಸ್ಥೆ ನೆಹರು ಯುವ ಕೇಂದ್ರ, ಯಶ್ವಸಿನಿ ಮಹಿಳಾ ಸಂಘ ಹಾಗೂ ಆಚಾರ್ಯ ಸ್ವತಂತ್ರ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲ್ಲಿ ನಗರದ ಆಚಾರ್ಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಡಾ.ಶಾಮ್ ಪ್ರಸಾದ್ ಮುರ್ಖಜಿ ಜನ್ಮದಿನವನ್ನು ಆಚರಿಸಲಾಯಿತು.
ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮೊಂಟು ಪಾತರ್, ಲೆಕ್ಕಾಧಿಕಾರಿ ವೈ.ಎಸ್.ಎಂ.ಮಂಜುನಾಥ ಯಶ್ವಸಿನಿ ಮಹಿಳಾ ಸಂಘದ ಸದಸ್ಯರು ಇದ್ದರು. .
———
ವಿಜಯನಗರ: ಡಾ.ಬಾಬು ಜಗಜೀವನ್ ರಾಮ್ ಅವರ 36ನೇ ಪುಣ್ಯಸ್ಮರಣೆ ಆಚರಣೆ


BP News  ಹೊಸಪೇಟೆ(ವಿಜಯನಗರ)ಜು.06-ವಿಜಯನಗರ ಜಿಲ್ಲಾಡಳಿತದ ವತಿಯಿಂದ ಹಸಿರು ಕ್ರಾಂತಿ ಹರಿಕಾರ ಮತ್ತು ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ 36ನೇ ಪುಣ್ಯಸ್ಮರಣೆಯನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅನಿರುದ್ದ್ ಶ್ರವಣ್.ಪಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್.ಕೆ, ಅಪರ ಜಿಲ್ಲಾಧಿಕಾರಿ ಎನ್.ಮಹೇಶ್ ಬಾಬು, ತಹಶೀಲ್ದಾರರಾದ ಕೆ.ಗುರುಬಸವರಾಜ್, ಕಾರ್ತಿಕ್ ಮತ್ತು ಕಚೇರಿಯ ಸಿಬ್ಬಂದಿ ಇದ್ದರು.
———-
ಬಳ್ಳಾರಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆ


BP News  ಬಳ್ಳಾರಿ,ಜು.06-ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ರಾಜೇಶ್ವರಿ ಸುಬ್ಬರಾಯ್ಡು ಅವರ ಅಧ್ಯಕ್ಷತೆಯಲ್ಲಿ ನಗರದ ಜಿಪಂನ ನಜೀರ್‍ಸಾಬ್ ಸಭಾಂಗಣದಲ್ಲಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಡೆಯಿತು.
ಬಳ್ಳಾರಿ ನಗರದಲ್ಲಿ ತೆರಿಗೆ ಆಸ್ತಿ ಹೆಚ್ಚಳ ಮಾಡುವುದಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಪಾಲಿಕೆ ಸದಸ್ಯರು ಜನತೆಗೆ ಹೊರೆಯಾಗದ ರೀತಿಯಲ್ಲಿ ತೆರಿಗೆ ಹೆಚ್ಚಿಸಲು ಸಲಹೆ ನೀಡಿದರು.
ನಗರದ ಕೋಟೆ ಪ್ರದೇಶದ ಮುಂಭಾಗದ ರಿಪಬ್ಲಿಕ್ ಸರ್ಕಲ್‍ಗೆ ಭಗವಾನ್ ಮಹಾವೀರ ಹೆಸರು ನಾಮಕರಣ ಮಾಡುವುದಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆ ನಡೆದು ವೃತ್ತವನ್ನು ಅಭಿವೃದ್ಧಿಪಡಿಸುವುದಕ್ಕೆ ಸಂಬಂಧಿಸಿದಂತೆ ನೀಲನಕ್ಷೆ ಸಲ್ಲಿಸಿದ್ದಲ್ಲಿ ಮುಂದಿನ ಸಭೆಯಲ್ಲಿ ಚರ್ಚಿಸಿ ಅನುಮೋದನೆಗೆ ಮಂಡಿಸಲು ನಿರ್ಧರಿಸಲಾಯಿತು.
——-
ಹೊಸಪೇಟೆ ನಗರಸಭೆಯ ಸಾಮಾನ್ಯ ಸಭೆ


BP News  ಹೊಸಪೇಟೆ(ವಿಜಯನಗರ)ಜು.06- ಹೊಸಪೇಟೆ ನಗರಸಭೆಯ ಸಾಮಾನ್ಯ ಸಭೆಯು ನಗರಸಭೆಯ ಅಧ್ಯಕ್ಷೆ ಸುಂಕಮ್ಮ ಅವರ ಅಧ್ಯಕ್ಷತೆಯಲ್ಲಿ ನಗರಸಭೆಯ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷೆ ಸುಂಕಮ್ಮ ಅವರ ಅಧ್ಯಕ್ಷತೆಯಲ್ಲಿ ಹೊಸಪೇಟೆ ನಗರ ಕೆಲ ವಾರ್ಡ್‍ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪ ಮತ್ತು ಕೆಲ ವಾರ್ಡ್‍ಗಳಲ್ಲಿ ಸ್ವಾಗತ ಕಮಾನುಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಉಪಾಧ್ಯಕ್ಷ ಎಲ್.ಎಸ್.ಆನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಭುನಾಥ್ ಹಾಗೂ ನಗರಸಭೆಯ ಪೌರಯುಕ್ತ ಮನೋಹರ್ ಹಾಗೂ ಎಲ್ಲಾ ವಾರ್ಡ್‍ನ ಸದಸ್ಯರುಗಳು ಇದ್ದರು.
—–
ಏಕಾದಶಿ ಹಾಗೂ ದ್ವಾದಶಿ ಧಾರ್ಮಿಕ ಆಚರಣೆಗೆ ಸನ್ನದ್ಧರಾದ ಭಕ್ತರು


BP News ಬಳ್ಳಾರಿ,ಜು.6-ಆಷಾಢ ಶುದ್ಧ ಏಕಾದಶಿ ಹಾಗೂ ದ್ವಾದಶಿಯಂದು ಭಗವನ್ನಾಮ ಸಂಕೀರ್ತನೆ ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಗ್ರಾಮಾಂತರ ಪ್ರದೇಶಗಳಲ್ಲಿ ಭಕ್ತರು ಶ್ರದ್ಧೆ ಹಾಗೂ ಸಂಭ್ರಮದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಬಳ್ಳಾರಿ, ಕುರುಗೋಡು, ಕಂಪ್ಲಿ, ಸಿರುಗುಪ್ಪ ತಾಲೂಕುಗಳ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿರುವ ಶ್ರೀ ವಿಠ್ಠಲ ರುಕ್ಮಿಣಿ ಪಾಂಡುರಂಗ ದೇವಸ್ಥಾನಗಳಲ್ಲಿ ಆಷಾಢ ಶುದ್ಧ ಏಕಾದಶಿ ಜುಲೈ 10ರಂದು ಧಾರ್ಮಿಕ ಆಚರಣೆಗೆ ಸನ್ನದ್ಧರಾಗುತ್ತಿದ್ದಾರೆ.
——

 

LEAVE A REPLY

Please enter your comment!
Please enter your name here