BP NEWS: ಬಳ್ಳಾರಿ: ಜುಲೈ.06: ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಸ್ಥಾಯಿ ಸಂಸ್ಥೆ ನೆಹರು ಯುವ ಕೇಂದ್ರ, ಯಶ್ವಸಿನಿ ಮಹಿಳಾ ಸಂಘ ಹಾಗೂ ಶ್ರೀ ಆಚಾರ್ಯ ಸ್ವತಂತ್ರ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲ್ಲಿ ನಗರದ ಶ್ರೀ ಆಚಾರ್ಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರದಂದು ಡಾ.ಶಾಮ್ ಪ್ರಸಾದ್ ಮುರ್ಖಜಿ ಜನ್ಮದಿನವನ್ನು ಆಚರಿಸಲಾಯಿತು.
ವಾಣಿಜ್ಯ ವಿಭಾಗದ ಅರ್ಥಶಾಸ್ತ್ರ ವಿಷಯದ ಮುಖ್ಯಸ್ಥರಾದ ಆರ್.ಕಾಯುಮ್ ಭಾಷ್ ಅವರು ಮಾತನಾಡಿ, ಡಾ.ಶಾಮ್ ಪ್ರಸಾದ ಮುರ್ಖಜಿರವರು ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಂಘಟನಾ ಚತುರರು ಮತ್ತು ನೆಹರು ಅವರ ಸಂಪುಟದಲ್ಲಿ ಕೈಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಜನ ಸಂಘದ ಸಂಸ್ಥಾಪಕರಾಗಿ ಕೆಲಸ ನಿರ್ವಹಿಸಿದ್ದಾರೆ ತಿಳಿಸಿದರು.
ಆಪ್‍ಸಾತಪ್ ಅವರು ಡಾ.ಶಾಮ್ ಪ್ರಸಾದ ಮುರ್ಖಜಿ ಅವರ ಜೀವನ ಕೌಶಲ್ಯ ಯೋಜನೆಗಳು ಮತ್ತು ವ್ಯಕ್ತಿತ್ವ ವಿಕಸನದ ಬಗ್ಗೆ ಸವಿಸ್ತಾರವಾಗಿ ಹೇಳಿದರು.
ಈ ಸಂದರ್ಭದಲ್ಲಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿಗಳಾದ ಮೊಂಟು ಪಾತರ್, ಲೆಕ್ಕಾಧಿಕಾರಿ ವೈ.ಎಸ್.ಎಂ.ಮಂಜುನಾಥ ಸೇರಿದಂತೆ ಅಂಜಲಿ ಮತ್ತು ರೆಹಮನ್, ಯಶ್ವಸಿನಿ ಮಹಿಳಾ ಸಂಘ ಸದಸ್ಯರು ಹಾಗೂ ಇತರರು ಭಾಗವಹಿಸಿದ್ದರು.