BP News Karnataka Super Fast 05-07-2022

0
212

ಗ್ರಂಥಾಲಯಗಳು ಜ್ಞಾನದ ಕಣಜ – ಸುಜಾತ ಡಿ.ಎನ್


BP News  ಬಳ್ಳಾರಿ,ಜು.5-ಜಗತ್ತನ್ನು ಆಳುತ್ತಿರುವುದು ಜ್ಞಾನ. ಜ್ಞಾನದ ಕಣಜ ಗ್ರಂಥಾಲಯಗಳು. ಸಾಂಪ್ರದಾಯಿಕ ರೂಪದಲ್ಲಿದ್ದ ಗ್ರಂಥಾಲಯ ವ್ಯವಸ್ಥೆಯೂ ಇಂದು ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಡಿಜಿಟಲ್ ರೂಪ ಪಡೆಯುತ್ತಿದೆ ಎಂದು ಹೊಸಪೇಟೆಯ ಉಗಮಾದೇವಿ ಭವರಲಾಲ್ ಥಿಯೋಸಾಫಿಕಲ್ ಮಹಿಳಾ ವಿದ್ಯಾಲಯದ ಸುಜಾತ ಡಿ.ಎನ್ ಹೇಳಿದ್ದಾರೆ.
ಕನ್ನಡ ವಿಶ್ವವಿದ್ಯಾಲಯದ ಅಕ್ಷರ ಗ್ರಂಥಾಲಯವು ಏರ್ಪಡಿಸಿದ್ದ 3 ದಿನಗಳ ಗ್ರಂಥಾಲಯ ಕೌಶಲ್ಯಾಭಿವೃದ್ಧಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
——-
ಬಳ್ಳಾರಿ ಜಿಲ್ಲಾ ಗೊಲ್ಲರ ಸಂಘದ ಚುನಾವಣೆ


BP News  ಬಳ್ಳಾರಿ,ಜು.5-ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಕನಸು ಮತ್ತು ಸಾಧನೆಗಳು ಮೂಲಕ ಮತ ಕೇಳುವುದು ಸಹಜ. ಹೀಗಾಗಿ ನಾವು ಸಮುದಾಯದ ಬಾಂಧವರಲ್ಲಿ ಮನವಿ ಮಾಡುತ್ತಿರುವುದಾಗಿ ಪಿ.ಗಾದೆಪ್ಪ ಮತ್ತು ಕೆ.ಇ.ಚಿದಾನಂದಪ್ಪ ಅವರು ಹೇಳಿದ್ದಾರೆ.
25 ಜನರ ಅಭಿವೃದ್ದಿ ತಂಡ ರಚನೆ ಮಾಡಿಕೊಂಡು ಮತ ಯಾಚಿಸುತ್ತಿರುವ ಅವರು, ಜಿಲ್ಲಾ ಗೊಲ್ಲರ ಸಂಘ ರಾಜ್ಯದಲ್ಲಿಯೇ ಅತ್ಯಂತ ಉತ್ತಮ ಜಿಲ್ಲಾ ಸಂಘಗಳ ಪೈಕಿ ಒಂದಾಗಿದೆ ಎಂದು ಅವರು ಹೇಳಿದ್ದಾರೆ.
——-
ಪೂರ್ವಸಿದ್ಧತೆ ಬಹಳ ಮುಖ್ಯ – ಡಾ. ಸ.ಚಿ. ರಮೇಶ


BP News ಬಳ್ಳಾರಿ,ಜು.5-ಸಂಶೋಧನ ತರಬೇತಿ ಕಾರ್ಯಾಗಾರಗಳು, ಕ್ಷೇತ್ರಕಾರ್ಯ ಕೈಗೊಳ್ಳುವ ಸಂಶೋಧಕರಿಗೆ ಪೂರ್ವಸಿದ್ದತೆ ಬಹಳ ಮುಖ್ಯ ಮತ್ತು ಅಗತ್ಯವೂ ಕೂಡ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಸ.ಚಿ. ರಮೇಶ ಅವರು ಹೇಳಿದ್ದಾರೆ.
ಕೇಂದ್ರದ ಆವರಣದ ಮುಂದೆ ಸಸಿ ನೆಡುವುದರ ಮೂಲಕ ಉದ್ಘಾಟಿಸಿದ ಅವರು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಬಂಜಾರ ಭಾಷಾಭಿವೃದ್ಧಿ ಅಧ್ಯಯನ ಕೇಂದ್ರ 4 ದಿನಗಳ ಸಂಶೋಧನಾ ಸಹಾಯಕರ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
——-
ಮಳಖೇಡ ಜಯತೀರ್ಥರ ಮೂಲ ಬೃಂದಾವನಕ್ಕೆ ಅಪಪ್ರಚಾರ-ಡಿಸಿಗೆ ಮನವಿ


BP News  ಬಳ್ಳಾರಿ,ಜು.5-ಮಳಖೇಡದಲ್ಲಿರುವ ಜಯತೀರ್ಥರ ಮೂಲ ವೃಂದಾವನದ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಬಳ್ಳಾರಿ ನಗರದಲ್ಲಿ ಶಾಂತಿ ಹಾಗೂ ಮೌನವಾದ ಪ್ರತಿಭಟನೆ ನಡೆಸಿದ ಭಕ್ತರು ಜಿಲ್ಲಾಧಿಕಾರಿಗಳಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಮೌನ ಹೋರಾಟದಲ್ಲಿ ಮಳಖೇಡ ಜಯತೀರ್ಥರ ಭಕ್ತರಾದ ಶ್ರೀನಿವಾಸ್ ಪಂತ್, ಗಿರಿ, ಡಾ.ಶ್ರೀನಾಥ್, ಹುಣಸಗಿ, ವೈ.ಸುಬ್ಬಾರಾವ್, ಜಿತೇಂದ್ರ ಆಚಾರ್, ಶ್ರೀನಿವಾಸಾಚಾರ್, ಶ್ರೀನಾಥ್, ಅನಂತಕೃಷ್ಣ, ಪ್ರದೀಪ್ ಆಚಾರ್ ಸೇರಿದಂತೆ ಅನೇಕರು ಇದ್ದರು.
——
ಮೋತಿ ವೃತ್ತದ ಕತ್ತಲೆಯಲ್ಲಿ ಬಸವ ಪುತ್ಥಳಿ-ದೀಪ ಅಳವಡಿಸಲು ಮನವಿ


BP News  ಬಳ್ಳಾರಿ,ಜು.5-ವಚನಗಳ ಮೂಲಕ ಅಂಧಕಾರದ ಜಗತ್ತಿಗೆ ಬೆಳಕು ನೀಡಿರುವ ಜಗಜ್ಯೋತಿ ಬಸವಣ್ಣನ ಪುತ್ಥಳಿಯನ್ನು ಸ್ಥಳೀಯ ಆಡಳಿತ ಕತ್ತಲಲ್ಲಿ ಇರಿಸಿರುವ ನಗರ ಆಡಳಿತದ ಕ್ರಮ ಅಕ್ಷಮ್ಯವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿದ್ದಾರೆ.
ಮಹಾನಗರ ಪಾಲಿಕೆ ಗಮನಹರಿಸಿ ಬಸವ ಪುತ್ಥಳಿಗೆ ವಿದ್ಯುತ್ ದೀಪಗಳ ಅಳವಡಿಕೆ ಮಾಡಬೇಕೆಂದು ಬಸವ ಅನುಯಾಯಿಗಳು ಒತ್ತಾಯಿಸಿದ್ದಾರೆ.
——-
ಶಿಕ್ಷಣ ಸಚಿವ ನಾಗೇಶ್ ರಾಜೀನಾಮಿಗೆ ದಲಿತ ಸಂಘರ್ಷ ಸಮಿತಿ ಆಗ್ರಹ


BP News ಬಳ್ಳಾರಿ,ಜು.5-ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಪರಿಷ್ಕರಣೆ ಮಾಡಿದ ಪಠ್ಯಪುಸ್ತಕಗಳನ್ನು ರದ್ದುಪಡಿಸಿ, ಡಾ. ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯ ಪಠ್ಯಪುಸ್ತಕಗಳನ್ನು ಮುಂದುವರಿಸಬೇಕು ಎಂದು ಆಗ್ರಹಿಸಿರುವ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ ಅವರನ್ನು ಕೂಡಲೇ ರಾಜೀನಾಮೆ ನೀಡುವಂತೆ ಒತ್ತಾಯಿಸಿದೆ.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎ.ಮಾನಯ್ಯ ಹಾಗೂ ಹೆಚ್ ಸಿದ್ಧೇಶ್ ನೇತೃತ್ವದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದ ಮುಖಂಡರು ಸರಕಾರದ ನಿರ್ಧಾರವನ್ನು ವಿರೋಧಿಸಿದರು.
——

 

LEAVE A REPLY

Please enter your comment!
Please enter your name here