ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರ ಅವಿರೋಧವಾಗಿ ಆಯ್ಕೆ…

0
24

Bp News Karnataka, ಸಿರುಗುಪ್ಪ, Dec.21.2024:

 ತಾಲೂಕಿನ ಕೃಷಿಕ ಸಮಾಜದ 20 25 26ರಿಂದ 2029-30ನೇ ಸಾಲಿನ 5 ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಚುನಾವಣೆಯಲ್ಲಿ 15 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ಸಹಾಯಕ ಕೃಷಿ ನಿರ್ದೇಶಕ ಎಸ್ ಬಿ ಪಾಟೀಲ್ ತಿಳಿಸಿದ್ದಾರೆ.
ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ15 ಸದಸ್ಯ ಹೋಂ ದಿದ್ದು, ನಾಗ ರುದ್ರಗೌಡ, ವೈ. ಶ್ರೀನಿವಾಸ್ ರೆಡ್ಡಿ, ಲಿಂಗಣ್ಣ, ಕೆ. ವೆಂಕಟರಮಣ ರೆಡ್ಡಿ, ನವಲಿ ಶರಣಬಸವ ಮುರಳಿ ಮೋಹನ, ಬಿ ಸತ್ಯನಾರಾಯಣ, ಶಿವಶಂಕರಗೌಡ, ಟಿ ಆರ್ ಶಿವಕುಮಾರ್ ಗೌಡ ,ಟಿ ರಾಮಮೂರ್ತಿ ಜೆ . ಜಂಮನಗೌಡ, ಎಂ ಅಬ್ದುಲ್ ರೌಫ್, ಆರ್ ಎಂ ಕೃಷ್ಣಪ್ಪ, ಮಾರೇಶ, ನರಸನಗೌಡ ಅವಿರೋಧವಾಗಿ ಆಯ್ಕೆಯಾದ ನೂತನ ಸದಸ್ಯರಾಗಿದ್ದಾರೆಂದು ಮಾಹಿತಿ ನೀಡಿದರು.