ತಾಲೂಕಿನಲ್ಲಿ ಸದ್ಭಾವನಾ ಯಾತ್ರೆ …

0
57

Bp News Karnataka,ಸಿರುಗುಪ್ಪ, Dec.19.2024:

                 ಶ್ರೀ ಗುರು ಸಾಂಸ್ಕೃತಿಕ ಭವನ ಉದ್ಘಾಟನಾ ಅಂಗವಾಗಿ ಡಿ.16ರಿಂದ ಡಿ.25 ವರೆಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸದ್ಭಾವನಾ ಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ತಾಲೂಕಿನ ನಾಲ್ಕು ಹೋಬಳಿಗಳ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಸದ್ಭಾವನಾ ಯಾತ್ರೆ ನಡೆಯುತ್ತದೆ ಎಂದು ಶ್ರೀ ಗುರು ಬಸವ ಮಠದ ಬಸವಭೂಷಣ ಸ್ವಾಮೀಜಿ ತಿಳಿಸಿದರು.
ಯಾತ್ರೆಯಲ್ಲಿ ದುಶ್ಚಟಗಳನ್ನು ಜೋಳಿಗೆಗೆ ಹಾಕುವ ಕಾರ್ಯಕ್ರಮ ಇರುತ್ತದೆ. ಕುಡಿತ, ಬಿಡಿ ಸಿಗರೇಟ್ ಸೇರುವುದು ಸೇರಿದಂತೆ ಎಲ್ಲಾ ದುಶ್ಚಟಗಳನ್ನು ಯಾತ್ರೆಯಲ್ಲಿ ಜೋಳಿಗೆಗೆ ಹಾಕಲು ಅವಕಾಶವಿರುತ್ತದೆ, ಈ ಯಾತ್ರೆಯ ಮುಖ್ಯ ಉದ್ದೇಶ ಜನರಲ್ಲಿ ಸದ್ಭಾವನೆ ಮೂಡಿಸುವುದು ಮತ್ತು ದುಶ್ಚಟಗಳಿಂದ ಮುಕ್ತಿಗೊಳಿಸಲಾಗುತ್ತದೆ ಆದ್ದರಿಂದ ಹೆಚ್ಚಿನ ಜನಸಂಖ್ಯೆಯಲ್ಲಿ ಸಾರ್ವಜನಿಕರು ಯಾತ್ರೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.

 

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಸ್ವಾಮಿ ,ಶಿವ ಕುಮಾರ್ ಗಾದಿಲಿಂಗನಗೌಡ, ಶಂಭುಲಿಂಗಯ್ಯ, ವೀರನಗೌಡ ಇನ್ನಿತರರು ಇದ್ದರು.