ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕಚೇರಿಗೆ ಚಾಲನೆ: ಶಾಸಕಬಿ.ಎಮ್ ನಾಗರಾಜ್

0
17

Bp News Karnataka, ಸಿರುಗುಪ್ಪ, Dec.07.2024:

   ರಾಜ್ಯ ಸರ್ಕಾರದಿಂದ ಪಂಚ ಗ್ಯಾರಂಟಿ ಯೋಜನೆಗಳಿಂದ ಅರ್ಹ ಫಲಾನುಭವಿಗಳು ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ನೂತನ ನೂತನ ಕಚೇರಿಯನ್ನು ಪ್ರಾರಂಭಿಸಲಾಗಿದೆ ಎಂದು ಶಾಸಕ ಬಿ ಎಂ ನಾಗರಾಜ್ ತಿಳಿಸಿದರು. ನಗರದ ಸಾಮರ್ಥ್ಯ ಸೌಧದಲ್ಲಿ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರದ ಗ್ಯಾರೆಂಟಿ ಯೋಜನೆಗಳನ್ನು ಪ್ರತಿಯೊಬ್ಬರು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಸಮಿತಿಯ ಅಧ್ಯಕ್ಷರು, ಸದಸ್ಯರು ಅಧಿಕಾರಿಗಳು ಶ್ರಮ ವಹಿಸಬೇಕು ಎಂದರು. ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಸಮಿತಿ ಅಧ್ಯಕ್ಷ ಮಾರುತಿ ರೆಡ್ಡಿ ಮಾತನಾಡಿ ಗ್ಯಾರೆಂಟಿ ಯೋಜನೆಗಳ ಕಚೇರಿ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿ ವರೆಗೂ ಯೋಜನೆಗಳ ಮುಟ್ಟಿಸುವುದು ಸರ್ಕಾರದ ಮೂಲ ಉದ್ದೇಶ ಎಂದು ಹೇಳಿದರು.

 

 

 

 

 

  ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ರೇಣುಕಮ್ಮ, ಮಾಜಿ ಶಾಸಕ ಟಿ ಎಂ ಚಂದ್ರಯ್ಯ ಸ್ವಾಮಿ , ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಚೊಕ್ಕಬಸನಗೌಡ, ತಾಲೂಕು ಪಂಚಾಯತ ಇಓ ಪವನ್ ಕುಮಾರ್, ಗ್ರೇಡ್ ತಹಶೀಲ್ದಾರ್ ಸತ್ಯಮ್ಮ, ಎನ್. ಕರಿಬಸಪ್ಪ, ಗೋಪಾಲ್ ರೆಡ್ಡಿ, ನಾಗರಾಜ್, ಚಿದಾನಂದರಾಯ್ಡ, ಪೂಜಾರಿ ಮಲ್ಲಿಕಾರ್ಜುನ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಇದ್ದರು.