Bp News Karnataka, ಸಿರುಗುಪ್ಪ, Dec.06.2024:
ಕಲ್ಬುರ್ಗಿ ಜಿಲ್ಲೆಯ ಸನ್ನಿಧಿ ಗ್ರಾಮದಿಂದ ಬೆಂಗಳೂರಿನ ವಿಧಾನಸೌಧದ ವರಿಗೆ ಬೋಧಿದತ್ತ ತೇರೋ ಬಂತೇಜೀಯವರ ನೇತೃತ್ವದಲ್ಲಿ ನಡೆಯುವ ಪಂಚಶೀಲ ಪಾದಯಾತ್ರೆ ಸಿರುಗುಪ್ಪ ತಾಲೂಕಿಗೆ ಆಗಮಿಸಿದ್ದು, ವಿವಿಧ ಸಂಘಟನೆಗಳ ಮುಖಂಡರು ಪಾದಯಾತ್ರೆಯನ್ನು ಬರಮಾಡಿಕೊಂಡರು.
ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಬೌದ್ಧ ಬಿಕ್ಕು ಬೋಧಿದತ್ತ ತೇರೋ ಬಂತೇಜೀಯವರ ನಗರದಲ್ಲಿ ಪಾದಯಾತ್ರೆ ನಡೆಸಿ ರಾತ್ರಿ ನಗರದ ವರ ವಲಯದಲ್ಲಿರುವ ಸಾರ್ವಜನಿಕ ಸ್ಮಶಾನದಲ್ಲಿ ವಾಸ್ತವ್ಯ ಹೂಡಿದ್ದರು. ರಾತ್ರಿ 10:00 ಗಂಟೆಯಿಂದ ಬೋಧಿದತ್ತ ತೇರೋ ಅವರು ತಮ್ಮ ಉಪನ್ಯಾಸದೊಂದಿಗೆ ಸತ್ತ ವ್ಯಕ್ತಿಯ ಸಮಾಧಿಯ ಮುಂದೆ ಕುಳಿತು ಧ್ಯಾನ ಮಾಡಿದರು.
ನಂತರ ಏಕಾಂತವಾಗಿ ಸ್ವತ: ಮರಣಾನುಸತಿ ಧ್ಯಾನ ಮಾಡಿದರು. ಸ್ಮಶಾನದಲ್ಲಿನ ಮಾಹಿತಿ ಕುರಿತು ನೀಡಿದ ಬಂತೇಜೀಯವರ ಧ್ಯಾನಕ್ಕೆ ಬೇಕಾಗಿರುವುದು ನಿಶಬ್ದ ವಾತಾವರಣ, ನಿಜವಾಗಿಯೂ ಆ ವಾತಾವರಣ ಇರುವುದು ಸ್ಮಶಾನದಲ್ಲಿ ಮಾತ್ರ, ದೆವ್ವ, ಭೂತ, ಪ್ರೇತ,ಪಿಚಾಚಿಗಳು ಸ್ಮಶಾನ ಇರುತ್ತೇವೆ ಎನ್ನುವುದು ತಪ್ಪು ಕಲ್ಪನೆ. ಜನರಲ್ಲಿ ಇರುವ ಮೌಢ್ಯತೆ ಮತ್ತು ಮೂಢನಂಬಿಕೆ ಗಳಿಂದ ಹೊರಬೇರಬೇಕೆಂದು ತಿಳಿಸಿದರು.