ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ…

0
53

Bp News Karnataka, ಸಿರುಗುಪ್ಪ, Dec.04.2024:

  ಸರ್ಕಾರಿ ನೌಕರರ ಭರವಸೆ ಮತ್ತು ಆಶ್ವಾಸನೆಯನ್ನು ಈಡೇರಿಸಲು ಸರ್ಕಾರಿ ನೌಕರರ ಸಂಘವು ಮುಖ್ಯವಾದ ಪಾತ್ರವನ್ನು ಸರ್ಕಾರದ ಮಟ್ಟದಲ್ಲಿ ನಿರ್ವಹಿಸಲಿದೆ ಎಂದು ಕ.ರಾ.ಸ.ನೌ. ಸಂಘದ ಜಿಲ್ಲಾಧ್ಯಕ್ಷ ಎಂ ಶಿವಾಜಿ ರಾವ್ ತಿಳಿಸಿದರು.
ನಗರದ ನೀಲಕಂಠೇಶ್ವರ ಸಭಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ನೌಕರರ ಸಂಘ ಸಿರುಗುಪ್ಪ ತಾಲೂಕು ಶಾಖೆಯ ನೂತನ ನಿರ್ದೇಶಕರ, ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿ ಸರ್ಕಾರಿ ನೌಕರನ್ನು ಗೌರವ ಮತ್ತು ಸ್ವಾವಲಂಬಿಯುತವಾಗಿ ಜೀವನ ನಡೆಸುವುದಕ್ಕೆ ಸರ್ಕಾರದಿಂದ ಎಲ್ಲಾ ಸೌಲಭ್ಯಗಳು ಸಿಗಬೇಕು. ನೌಕರರ ಹಿತ ಕಾಪಾಡುವುದು ನಮ್ಮ ಸಂಘದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ತಾಲೂಕು ಶಾಖೆಯ ನೂತನ ನಿರ್ದೇಶಕರ, ಪದಾಧಿಕಾರಿಗಳನ್ನು ಪದಗ್ರಹಣ ಕಾರ್ಯಕ್ರಮದಲ್ಲಿ ಶಾಸಕ ಬಿ ಎಂ ನಾಗರಾಜ ಸನ್ಮಾನಿಸಿದರು.

 

 

ತಾಲೂಕು ಅಧ್ಯಕ್ಷ ಹುಚ್ಚಿರಪ್ಪ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ಖಜಾಂಚಿ ದುರುಗಪ್ಪ ಎಚ್. ರಾಜ್ಯ ಪರಿಷತ್ ಸದಸ್ಯ ಪಿ. ಹನುಮಂತಪ್ಪ ತಾಲೂಕ್ ಶಾಖೆಯನ್ನು ಪದಾಧಿಕಾರಿಗಳ ನಿರ್ದೇಶಕರ ಪದಗ್ರಹಣ ಹಾಗೂ ಅಭಿನಂದನೆ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಬಿ.ರೇಣುಕಮ್ಮ,ಗ್ರೇಡ್ -2ತಹಸೀಲ್ದಾರ್ ಸತ್ಯಮ್ಮ,ಬಿಇಓ ಹೆಚ್.ಗುರಪ್ಪ, ಅಬಕಾರಿ ನಿರೀಕ್ಷಕಿ ಕೀರ್ತನ,ಕೈ.ರಾ.ಸ.ನೌ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ನಿಕಟ ಪೂರ್ವ ಅಧ್ಯಕ್ಷ ಲಿಂಗಾರೆಡ್ಡಿ, ಪದಾಧಿಕಾರಿಗಳು ಮತ್ತು ಸರ್ಕಾರಿ ನೌಕರರು ಇದ್ದರು.