ವಿಶ್ವ ಶಾಂತಿಗಾಗಿ, ಸನ್ನತಿ ಸಮಗ್ರ ಅಭಿವೃದ್ಧಿಗಾಗಿ ಆಗ್ರಹಿಸಿ ಪಾದಯಾತ್ರೆ: ಬೌದ್ಧ ಬಿಕ್ಕು ಕಮಲರತ್ನ ಬಂತೇಜೀ

0
36

Bp News Karnataka, ಸಿರುಗುಪ್ಪ, Dec.03.2024:

      ವಿಶ್ವಶಾಂತಿಗಾಗಿ ಸನ್ನಿತಿ ಸಮಗ್ರ ಅಭಿವೃದ್ಧಿಗಾಗಿ ಆಗ್ರಹಿಸಿ ಮತ್ತು ಬೌದ್ಧರ ಐತಿಹಾಸಿಕ ಕ್ಷೇತ್ರ ಸನ್ನಿಧಿಯಿಂದ ಬೆಂಗಳೂರಿನ ವಿಧಾನಸೌಧದ ವರೆಗೆ ಪಾದಯಾತ್ರೆ ನಡೆಸಲಾಗುತ್ತದೆ ಎಂದು ಬೌದ್ಧ ಬಿಕ್ಕು ಕಮಲರತ್ನ ಬಂತೇಜೀ ತಿಳಿಸಿದರು.

ನಗರ ತುಂಗಭದ್ರ ಟೆನ್ನಿಸ್ ಕ್ಲಬ್ ಆವರಣದಲ್ಲಿ ನಡೆದ ಪತ್ರಿಕಾಗೋಷ್ಠಿ ಮಾತನಾಡಿದ ಅವರು ನವಂಬರ್ 15ರಿಂದ ಜನವರಿ24,2025ಲವರೆಗೆ‌ ಸನ್ನತಿ ಪಾದಯಾತ್ರೆ ನಡೆಯಲಿದ್ದು, ಡಿ.4 ರಿಂದ ತ 6ವರೆಗೆ ತಾಲೂಕಿನಲ್ಲಿ ಪಾದಯಾತ್ರೆ ನಡೆಯಲಿದ್ದು, ರಾಜ್ಯದ ಸಮಗ್ರ ದಲಿತ ಸಂಘಟನೆಗಳು ಎಲ್ಲಾ ಬೌದ್ಧ ಸಂಘ ಸಮಿತಿಗಳು ಮತ್ತು ಬುದ್ಧ ವಿಹಾರ ಸಮಿತಿಗಳು ಭಾಗವಹಿಸಲಿದ್ದು ಡಿ.6ರಂದು ಉಡೇಗೋಳು ಗ್ರಾಮದ ಅಶೋಕನ ಶಿಲಾಶಾಸನ ಸ್ಥಳದಲ್ಲಿ ಡಾ. ಬಿಆರ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಆದ್ದರಿಂದ ಸರ್ವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಮುಖಂಡರಾದ ಡಾ. ಕೊಡ್ಲಿ ಮಲ್ಲಿಕಾರ್ಜುನ, ತಾಲೂಕು ಸಂಚಾಲಕ H.ದರಗಪ್ಪ, ಸಿ ಶಿವರಾಮ್, ಧರ್ಮರಾಜ್, ಕರೆಂಟ್ ಮಲ್ಲಯ್ಯ, ಸಿ ಈರಣ್ಣ, ಹುಸೇನಪ್ಪ, ನಂದೀಶ ಇತರರು ಇದ್ದರು.