Bp News Karnataka, ಸಿರುಗುಪ್ಪ, Dec.03.2024:
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಖಾಸಗಿ ಶಾಲಾ ವಿದ್ಯಾರ್ಥಿಗಳಂತೆ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಇತರ ಸೌಲಭ್ಯಗಳು ದೊರೆಯಬೇಕು, ಇದರಿಂದ ವಿದ್ಯಾರ್ಥಿಗಳಲ್ಲಿ ಕಲಿಕೆಯ ಉತ್ಸಾಹ ಹೆಚ್ಚಾಗುತ್ತದೆ ಎಂದು ಮುಖ್ಯ ಗುರುಗಳು ಶೇಕ್ಷವಲಿ ತಿಳಿಸಿದರು.
ತಾಲೂಕಿನ ಸಿರಿಗೇರಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ( ದೇವಸ್ಥಾನ) ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಪಿ. ಬೇಬಿ ಫಾತಿಮಾ ಅವರು ಶಾಲೆಯ ಎಲ್ಲಾ ಮಕ್ಕಳಿಗೂ ಹಾಲು ಮತ್ತು ನೀರು ಸೇವನೆಗಾಗಿ 250 ಸ್ಟೀಲ್ ಲೋಟಗಳನ್ನು ಡೇಣಿಗೆಯಾಗಿ ನೀಡಿದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗೆ ಲೋಟವನ್ನು ವಿತರಿಸಿ ಮಾತನಾಡಿದ ಅವರು ನಮ್ಮ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಿ. ಬೇಬಿ ಫಾತಿಮಾ ಅವರ ಕಾರ್ಯ ಶ್ಲಾಘನೀಯವಾಗಿದೆ. ಎಂದು ಹೇಳಿದರು. ಸಿ ಆರ್ ಪಿ ಅರುಣ್ ಕುಮಾರ್ ಮಾತನಾಡಿದರು .ಶಿಕ್ಷಕರಾದ ಬೀಬಿ ಫಾತಿಮಾ ಬಸನಗೌಡ, ರೇವತಿ ,ಶಾಂಭವಿ, ವನಜಾಕ್ಷಿ, ರೇಹನಾಬೀ, ಪ್ರಿಯಾಂಕಾ, ಚಂದ್ರಕಲಾ, ರಾಘವೇಂದ್ರ,ಬಾಲೆಸಾಬ್ ಮತ್ತು ವಿದ್ಯಾರ್ಥಿಗಳು ಇದ್ದರು…