Bp News Karnataka, ಸಿರುಗುಪ್ಪ , Nov.29.2024:
ತಾಲೂಕಿನ ಸಿರಿಗೇರಿ ಸಮೀಪದ ಎಂ ಸುಗೂರು ಗ್ರಾಮದ ಶ್ರೀ ಗುರುಪಾದಪ್ಪ ತಾತನವರ ಆವರಣದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಲಾಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಳ್ಳಾರಿ ಮತ್ತು ಗ್ರಾಮ ಆಡಳಿತ ಎಂ ಸೂಗೂರ್ ಸಹಯೋಗದಲ್ಲಿ ನಡೆಸಿದ ಶಿಬಿರದಲ್ಲಿ ನೇತ್ರ ತಜ್ಞರಾದ ಡಾ.ಸಂಧ್ಯಾರಾಣಿ, ಸಿ ಎಚ್ ಡಾ. ಕಿರಣ್ ಇವರು ಕಣ್ಣಿನ ತಪಾಸಣೆ ನಡೆಸಿದರು. ಸ್ಥಳೀಯ ಮತ್ತು ಸುತ್ತಲಿನ ಕಣ್ಣಿನ ದೋಷ ಇರುವ ನಾಗರಕರು ಶಿಬಿರದಲ್ಲಿ ಪಾಲ್ಗೊಂಡು ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಬಸವರಾಜ್, ಉಪಾಧ್ಯಕ್ಷ ಶಾರದ, ಪಂಚಾಯತಿ ಕಾರ್ಯದರ್ಶಿ ಶಿವಮೂರ್ತಿ, ಮತ್ತು ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತರು ಶಿಬಿರದ ಬಗ್ಗೆ ಅನೇಕ ಗ್ರಾಮಗಳಲ್ಲಿಯೂ ತಿಳಿಸಿ ತಪಾಸಣೆ ಮಾಡಿಸಿಕೊಳ್ಳಲು ಸಹಕರಿಸಿದರು.