ಮುಂದುವರೆದ ಧರಣಿ ಸತ್ಯಾಗ್ರಹ….

0
37

Bp News Karnataka, ಸಿರುಗುಪ್ಪ, Nov.28.2024:

    ತಾಲೂಕಿನಲ್ಲಿ ಸರ್ಕಾರವು ಶೀಘ್ರವಾಗಿ ಭತ್ತ ಖರೀದಿ ಕೇಂದ್ರವನ್ನು ಪ್ರಾರಂಭಿಸಬೇಕೆಂದು ಆಗ್ರಹಿಸಿ ನಗರದ ತಹಸೀಲ್ದಾರ್ ಕಚೇರಿ ಎದುರು ಮಾಜಿ ಶಾಸಕ ಎಂ ಎಸ್ ಸೋಮಲಿಂಗಪ್ಪ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಜಿಲ್ಲೆಯ ಇನ್ನುಳಿದ ತಾಲೂಕು ಕೇಂದ್ರಗಳಲ್ಲಿ ಈಗಾಗಲೇ ಭತ್ತ ಕೇಂದ್ರಗಳು ಆರಂಭಿಸಲಾಗಿದೆ. ನಮ್ಮ ಸಿರುಗುಪ್ಪ ತಾಲೂಕಿನಲ್ಲಿ ಮಾತ್ರ ಇನ್ನೂ ಭತ್ತ ಖರೀದಿ ಕೇಂದ್ರ ಆರಂಭಿಸಿಲ್ಲ. ಅಕಾಲಿಕ ಮಳೆಯಿಂದಾಗಿ ತಾಲೂಕಿನಲ್ಲಿ ಭತ್ತದ ಬೆಳೆಗಳು ನೆಲಕ್ಕೆ ಉರುಳಿವೆ, ತ್ರಿವ ಸಂಕಷ್ಟಕ್ಕೆ ಗುರಿಯಾಗಿದ್ದು, ಈಗಾಗಲೇ ಬತ್ತದ ಬೆಲೆ ಕಡಿಮೆಯಾಗಿದೆ. ಸರ್ಕಾರದಿಂದ ಯಾವ ನಷ್ಟ ಪರಿಹಾರ ಇಲ್ಲದೆ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಆದ್ದರಿಂದ ಸರ್ಕಾರದಿಂದ ಇಂತಹ ಬೆಳೆ ಹಾನಿಗೊಳಗಾದ ಬೆಳೆಗೆ ಸರ್ಕಾರದಿಂದ ಈ ತಕ್ಷಣ ಪರಿಹಾರವನ್ನು ಘೋಷಿಸಿ ರೈತನ ಕೈ ಸೇರುವಂತೆ ಮಾಡಬೇಕಾಗಿ ಸರ್ಕಾರಕ್ಕೆ ಒತ್ತಾಯ ಪೂರ್ವಕವಾಗಿ ಆಗ್ರಹಿಸಿತೆವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಂಎಸ್ ಸಿದ್ದಪ್ಪ, ಜಿಲ್ಲಾ ಹಿಂದುಳಿದ ಮೋರ್ಚಾ ಅಧ್ಯಕ್ಷರಾದ ಮಂಡರಗಿ ದೇವ, ತಾಲೂಕು ಉಪಾಧ್ಯಕ್ಷರಾದ ಪೂಜಾರಿ ಗಾದಿಲಿಂಗ, ಪ್ರಧಾನ ಕಾರ್ಯದರ್ಶಿ ಬೆಳಗಲ್ ಬಸವರಾಜ್, ನಗರಸಭೆ ಸದಸ್ಯ ಮೇಕಾಲಿ ವಿರೇಶ, ಎಸ್ಸಿ ಮೋರ್ಚಾ ಅಧ್ಯಕ್ಷರಾದ ಮಾರೇಶ ಎಸ್‌ಟಿ ಮೋರ್ಚಾ ಅಧ್ಯಕ್ಷ ಶಿವಪ್ಪ, ಓಬಿಸಿ ಮೋರ್ಚಾ ಅಧ್ಯಕ್ಷ ಕೋರಿ ಪಿಡ್ಡಯ್ಯ ಮುಖಂಡ ದರಪ್ಪ ನಾಯಕ,ಗಂಗಪ್ಪ ಮತ್ತು ಕಾರ್ಯಕರ್ತರು ಇದ್ದರು.