ಭತ್ತ ಖರೀದಿ ಕೇಂದ್ರವನ್ನು ಸ್ಥಾಪಿಸಲು ಮಾಜಿ ಶಾಸಕ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ…

0
9

Bp News Karnataka, ಸಿರುಗುಪ್ಪ, Nov.27.2024:

   ನಗರದ ತಹಶೀಲ್ದಾರ್ ಕಚೇರಿ ಮುಂದೆ ತಾಲೂಕಿನಲ್ಲಿ ರಾಜ್ಯ ಸರ್ಕಾರ ಶೀಘ್ರವಾಗಿ ಭತ್ತ ಖರೀದಿ ಕೇಂದ್ರವನ್ನು ಆರಂಭಿಸುವಂತೆ ಆಗ್ರಹಿಸಿ ತಾಲೂಕು ಬಿಜೆಪಿ ಪಕ್ಷದ ವತಿಯಿಂದ ಮಾಜಿ ಶಾಸಕ ಸೋಮಲಿಂಗಪ್ಪ ನೇತೃತ್ವದಲ್ಲಿ ಧರಣಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸೋಮಲಿಂಗಪ್ಪ ಅವರು ಇತ್ತೀಚಿಗೆ ಸುರಿದ ಅಕಾಲಿಕ ಮಳೆಯಿಂದಾಗಿ ಭತ್ತದ ಇಳುವರಿ ಕುಸಿತ ಕಂಡಿದೆ. ಅಲ್ಲದೆ ಸ್ಥಳೀಯ ವ್ಯಾಪಾರಸ್ಥರಿಂದ ಹಾಗೂ ತಡವಾಗಿ ಭತ್ತ ಕೇಂದ್ರ ಆರಂಭಿಸಿದ ಹಿನ್ನೆಲೆಯಲ್ಲಿ ಭತ್ತದ ಬೆಲೆ ಪಾತಾಳಕ್ಕೆ ಕುಸಿದಿದೆ.ಆದ್ದರಿಂದ ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸಬೇಕು. ಜಿಲ್ಲೆಯ ಇನ್ನುಳಿದ ತಾಲೂಕು ಕೇಂದ್ರಗಳಲ್ಲಿ ಈಗಾಗಲೇ ಭತ್ತ ಕೇಂದ್ರಗಳನ್ನು ಆರಂಭಿಸಲಾಗಿದೆ. ನಮ್ಮ ಸಿರುಗುಪ್ಪ ತಾಲೂಕಲ್ಲಿ ಮಾತ್ರ ಇನ್ನೂ ಕೇಂದ್ರ ಆರಂಭಿಸಿರುವುದಿಲ್ಲ ಈ ಬಗ್ಗೆ ನಾವು ಮನವಿಗಳ ಮೂಲಕ ನಮ್ಮ ತಾಲೂಕಿನಲ್ಲಿ ಇನ್ನೂ ಖರೀದಿ ಕೇಂದ್ರವನ್ನು ಆರಂಭಿಸದಿರುವುದು ರೈತರ ಬಗ್ಗೆ ನಿರ್ಲಕ್ಷ ಎದ್ದು ಕಾಣುತ್ತಿದ್ದು, ಇದು ರೈತರ ದುರದೃಷ್ಟವೇ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಶೇ. 60 ಭತ್ತ ಕಟಾವು ಗೊಂಡಿದ್ದು ದಳ್ಳಾಳಿಗಳ ಮೂಲಕ ಭತ್ತ ಖರೀದಿದಾರರಿಗೆ ಕೇವಲ ರೂ.1800 ರಿಂದ ರೂ .1900 ಗಳಿಗೆ ಮಾರಾಟ ಮಾಡುತ್ತಿದ್ದು, ತ್ರಿವ ನಷ್ಟಕ್ಕೆ ಅನ್ನದಾತರು ಗುರಿಯಾಗಿದ್ದಾರೆ ಅಧಿಕಾರಿಗಳ ನಿರ್ಲಕ್ಷತನ, ರೈತ ವಿರೋಧಿ ನೀತಿಯ ವಿರುದ್ಧವಾಗಿ ನಮ್ಮ ತಾಲೂಕಿನಲ್ಲಿ ಭತ್ತ ಕೇಂದ್ರವನ್ನು ಆರಂಭಿಸುವಂತೆ ಒತ್ತಾಯ ಮಾಡಿದರು.                                                     

 

 

 

 

           ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಘಟಕ ಅಧ್ಯಕ್ಷರಾದ ಕುಂತ್ನಾಳ್ ಮಲ್ಲಿಕಾರ್ಜುನ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಎಂಎಸ್ ಸಿದ್ದಪ್ಪ, ಓಬಿಸಿ ಮೋರ್ಚಾ ಅಧ್ಯಕ್ಷ ಕೋರಿ ಪಿಂಡಯ್ಯ, ನಗರಸಭೆ ಸದಸ್ಯರಾದ ಮೇಕಾಲಿ ವೀರೇಶ್, ಎಸ್ಸಿ ಮೋರ್ಚ ಅಧ್ಯಕ್ಷ ಮಾರೇಶ ಎಸ್ ಟಿ ಮೋರ್ಚ ಅಧ್ಯಕ್ಷ ಶಿವಪ್ಪ, ದರಪ್ಪ ನಾಯಕ, ಬೆಳಗಲ್ ಬಸವರಾಜ್ ಮತ್ತು ಕಾರ್ಯಕರ್ತರು ಇದ್ದರು.