Bp News Karnataka, ಸಿರುಗುಪ್ಪ, 19.11.2024:
ಕೇಂದ್ರ ಸರ್ಕಾರವು ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರನ್ನು ಸರ್ಕಾರದ ನೌಕರನಾಗಿ ಖಾಯಂಗೊಳಿಸುವಂತೆ ಅಂಗನವಾಡಿ ಕಾರ್ಯಕರ್ತರು ಒತ್ತಾಯಿಸಿ ಗ್ರೇಡ್ 2 ತಹಸೀಲ್ದಾರ್ ಸತ್ಯಮ್ಮ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕು ಅಧ್ಯಕ್ಷ ಉಮಾದೇವಿ ಮಾತನಾಡಿ ‘ಕೇಂದ್ರ ಸರ್ಕಾರವು ದೇಶಾದ್ಯಂತ ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರನ್ನು ಕ್ರಮವಾಗಿ ಹಾಗೂ ಗ್ರೇಟ್2 ಮತ್ತು ಗ್ರೇಟ್ 4 ಸರ್ಕಾರದ ನೌಕರನಾಗಿ ಖಾಯಂ ಗೊಳಿಸುವ ಕಾರ್ಯ ಬೇಗನೆ ಪ್ರಾರಂಭಿಸಬೇಕು. ತತ್ಸಮಾನ ಸ್ವರೂಪದ ಕೆಲಸಕ್ಕೆ ತಕ್ಕ ಸಮಾನ ಕನಿಷ್ಠ ಕೂಲಿ ನೀಡಬೇಕು ಹೊಸ ಶಿಕ್ಷಣ ನೀತಿ 2020 ಔಪಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಇಸಿಸಿಇ ಜೋಡಣೆ ಬೇಡ, ಪ್ರತಿ ಮೊದಲ ವಾರದೊಳಗೆ ಗೌರವಧನ ಬಿಡುಗಡೆ ಮಾಡಬೇಕು. ರಾಜ್ಯದ ಅಂಗನವಾಡಿಗಳಿಗೆ ಮೂಲಸೌಕರ್ಯ ನೀಡಬೇಕು, ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನೀಲಮ್ಮ, ಈರಮ್ಮ, ಸಂಗಮ್ಮ ಜ್ಯೋತಿ, ರಾಧಾ ಶಾಂತ,ಈರಮ್ಮ ರಾವಿಹಾಳ ಇದ್ದರೂ.