ಭಕ್ತಿಗೆ ಕನಕದಾಸರು, ಶೌರ್ಯಕ್ಕೆ ಸಂಗೊಳ್ಳಿ ರಾಯಣ್ಣ ಆದರ್ಶಪ್ರಾಯರು: ಶಾಸಕ ನಾರಾ ಭರತ್ ರೆಡ್ಡಿ…

0
15

Bp News Karnataka, Ballari, 18.11.2024:

ಹಾಲುಮತ ಸಮಾಜ ಎಂದರೆ ಹಾಲಿನಷ್ಟೇ ಪರಿಶುದ್ಧ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರು ಹೇಳಿದರು.

ಸೋಮವಾರ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿ.ಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆಯ ವತಿಯಿಂದ ಏರ್ಪಡಿಸಿದ್ದ ಭಕ್ತ ಶ್ರೇಷ್ಠ ಶ್ರೀ ಕನಕದಾಸರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

ಭಕ್ತಿಗೆ ಕನಕದಾಸರು ಹೆಸರುವಾಸಿಯಾದರೆ, ಸಂಗೊಳ್ಳಿ ರಾಯಣ್ಣ ಧೈರ್ಯ ಸಾಹಸಕ್ಕೆ ಹೆಸರುವಾಸಿಯಾಗಿದ್ದಾರೆ, ಈ ಮಹನೀಯರ ಆದರ್ಶಗಳನ್ನು ಯುವಜನರು ಪಾಲಿಸಬೇಕು ಎಂದರು.

ಸಂಗೊಳ್ಳಿ ರಾಯಣ್ಣ ಅವರು ಇಡೀ ದೇಶದ ಪ್ರತಿಯೊಬ್ಬರಿಗೆ ಸೇರಿದವರು, ನಿರ್ಮಾಣ ಆಗಿರುವ ಅವರ ಪುತ್ಥಳಿಯನ್ನು ಅನಾವರಣ ಮಾಡಲು ಬಳ್ಳಾರಿಯಲ್ಲಿ ಇಂದು ಕೆಲವರು ಪ್ರಯತ್ನ ಮಾಡಿದರು, ನಿಮ್ಮ ಅಭಿಮಾನ ದೊಡ್ಡದು, ಆದರೆ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯ ಅನಾವರಣವನ್ನು ರಾಜ್ಯ ಮಟ್ಟದ ಕಾರ್ಯಕ್ರಮ ಏರ್ಪಡಿಸೋಣ, ಇಡೀ ರಾಜ್ಯ ತಿರುಗಿ ನೋಡುವ ಹಾಗೆ ಕಾರ್ಯಕ್ರಮ ಮಾಡೋಣ ಎಂದು ಹೇಳಿದ ಅವರು, ಆ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸುವಂತಾಗಬೇಕು ಎಂದರು.

 

ಸಂಗೊಳ್ಳಿ ರಾಯಣ್ಣನ ಹಾಗೆ ಇಡೀ ದೇಶದಾದ್ಯಂತ ಹೆಸರು ಮಾಡಿದವರು ಸಿಎಂ ಸಿದ್ದರಾಮಯ್ಯ ಅವರು, ತಮ್ಮ ರಾಜಕೀಯ ಶತ್ರುಗಳ ಕೆಲಸ ಮಾಡಿ ಕೊದುವಂತಹ ಮೇರು ವ್ಯಕ್ತಿತ್ವ ಸಿದ್ದರಾಮಯ್ಯ ಅವರದು, ಅಧಿಕಾರದಲ್ಲಿದ್ದಾಗ ದ್ವೇಷ ಸಾಧಿಸುವುದು ಸರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದರು, ಅವರ ಮಾರ್ಗದರ್ಶನದಲ್ಲಿಯೇ ನಾನು ಆಡಳಿತ ನಡೆಸುತ್ತಿದ್ದೇನೆ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ಈ ಸಂದರ್ಭ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಡಾ.ಗಾದಿಲಿಂಗನಗೌಡ, ಮಾಜಿ ಉಪ ಮೇಯರ್ ಬೆಣಕಲ್ ಬಸವರಾಜಗೌಡ, ಕಾಂಗ್ರೆಸ್ ಮುಖಂಡರಾದ ಕೆರಕೋಡಪ್ಪ, ಕೆ.ಮಂಜುನಾಥ, ಥಿಯೇಟರ್ ಶಿವು, ಶಿವು, ರಘುನಾಥ ಪಾಟೀಲ, ಯಶೋಧಮ್ಮ, ಪಾಲಿಕೆಯ ಸದಸ್ಯರಾದ ವಿ.ಕುಬೇರಾ, ಕಲ್ಪನಾ, ಬಿಜೆಪಿಯ ವೇಮಣ್ಣ, ಕೊಳಗಲ್ ಅಂಜಿನಿ, ಮುಖಂಡ ಮೋಹನ್ ಸೇರಿದಂತೆ ಹಲವರು ಹಾಜರಿದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಗರದ ಕೆಎಂಎಫ್ ಬಳಿಯಿರುವ ಕನಕದಾಸರ ಪುತ್ಥಳಿಗೆ ಶಾಸಕ ನಾರಾ ಭರತ್ ರೆಡ್ಡಿಯವರು ಮಾಲಾರ್ಪಣೆ ಮಾಡಿದರು…