ಸಿರುಗುಪ್ಪದಲ್ಲಿ ಬಿಜೆಪಿ ತಾಲೂಕು ಘಟಕದ ವತಿಯಿಂದ ತಹಸೀಲ್ದಾರ್ ಗೆ ಮನವಿ ಮಾಡಿದರು: ‌

0
43

Bp News Karnataka, ಸಿರುಗುಪ್ಪ:15.ನವೆಂಬರ್.2024

ತಾಲೂಕಿನಲ್ಲಿ ಭತ್ತದ ಕಟಾವು ಶೇ 25 ರಷ್ಟು ಮುಗಿದಿದ್ದರೂ ಕೂಡ ಇದುವರಿಗೆ ಸರ್ಕಾರ ಭತ್ತ ಖರೀದಿ ಕೇಂದ್ರ ಆರಂಭಿಸದೆ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ಬಿಜೆಪಿ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಆರೋಪಿಸಿ. ಗ್ರೇಡ್ 2 ತಹಸೀಲ್ದಾರ್ ರಾದ ಶ್ರೀಮತಿ ಸತ್ಯಮ್ಮ ಅವರಿಗೆ ಭತ್ತ ಕೇಂದ್ರ ಹಾಗೂ ಮರಳು ನೀತಿ ಸರಳೀಕರಣಕ್ಕೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪಕ್ಷದ ತಾಲ್ಲೂಕು ಅಧ್ಯಕ್ಷರು ಮಲ್ಲಿಕಾರ್ಜುನ, ರೈತ ಮೋರ್ಚಾ ಅಧ್ಯಕ್ಷರು ಶಿವರಾಮಗೌಡ, ಎಸ್ ಟಿ ಮೋರ್ಚಾ ಅಧ್ಯಕ್ಷರು ಶಿವಪ್ಪ, ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷರಾದ ಶೇಕ್ಷವಲಿ, ಗಾದಿಲಿಂಗಪ್ಪ, ರಾಮನಾಯಕ, ಅಂಗಯ್ಯ, ಶೇಖಣ್ಣ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.