ಸಿಂಧನೂರಿನಲ್ಲಿ ಕಲಾ ದಸರಾ ಭರ್ಜರಿ ಸಿದ್ಧತೆ
ಬಿಪಿ ನ್ಯೂಸ್, ಸಿಂಧನೂರು ಅಕ್ಟೋಬರ್ 2 :
ಜನಪದ ಕಲೆಗಳೇ ನಾಡಿನ ಸಂಸ್ಕೃತಿಯನ್ನು ಪ್ರತಿ ಬಿಂಬಿಸುತ್ತವೆ. ಜನಸಾಮಾನ್ಯರ ನಿತ್ಯ ಬದುಕನ್ನು ಚಿತ್ರಿಸುವ ಭಾವ ಜನಪದ ಕಲೆಗೆ ಇದೆ. ಕಲಾ ದಸರಾದಲ್ಲಿ ಇದು ಪ್ರದರ್ಶನ ಗೊಳ್ಳಲಿದೆ ಎಂದು ರಾಯಚೂರು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಬೃಹತ್ ಪ್ರಮಾಣದಲ್ಲಿ ನಡೆಯುತ್ತಿರುವ ಸಿಂಧನೂರು ದಸರಾ ಉತ್ಸವದಲ್ಲಿ ಕಲಾ ದಸರಾದ ಕಾರ್ಯದರ್ಶಿಗಳಾದ ದೇವೇಂದ್ರ ಹುಡಾ ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಸಿಂಧನೂರು ದಸರಾ ಉತ್ಸವ- ೨೦೨೪ ರ ಅದ್ದೂರಿ ತಯಾರಿ ನಡೆಸಲಾಗುತ್ತಿದೆ. ಈ ದಸರಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳು, ಕಲಾವಿದರು, ಜನಪ್ರತಿನಿಧಿಗಳು, ರೈತರು, ಮಹಿಳೆಯರು ಭಾಗವಹಿಸುತ್ತಿದ್ದಾರೆ. ನಮ್ಮ ಕರ್ನಾಟಕದ ನಾಡ ಹಬ್ಬ ಮೈಸೂರು ದಸರಾ ಪ್ರತಿವರ್ಷ ಮೈಸೂರು ನಗರದಲ್ಲಿ ನಡೆಯುತ್ತದೆ ಅದೇ ಮಾದರಿಯಲ್ಲಿ ಈಗ ಈ ವರ್ಷದಿಂದ ರಾಯಚೂರಿನ ನಲ್ಲಿ ನಡೆಯುತ್ತಿದೆ. ವಿಶ್ವವಿಖ್ಯಾತ ಮೈಸೂರು ದಸರಾ ನಡೆಯುವಂತೆಯೇ ಎಲ್ಲಾ ವಿವಿಧ ಸಿದ್ಧತೆಗಳು ಸಿಂಧನೂರಿನಲ್ಲಿ ನಡೆಯುತ್ತಿವುದು ಸ್ವಾಗತಾರ್ಹ.
ಸಿಂಧನೂರು ಕಲೆ, ಕಲಾವಿದರ, ಹೋರಟಗಾರರ ನಾಡು. ನಗರದಲ್ಲಿ ಈಗ ದಸರಾ ವೈಭವದ ನಗರವಾಗಿ ಕಾಣುತ್ತಿದೆ. ಎಲ್ಲ ಜನರು ಸಂಭ್ರಮದಿAದ ದಸರಾ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಇಂದು ಅಕ್ಟೋಬರ್ ೨ ನೇ ತಾರೀಖಿನಂದು ತಾಲೂಕಾ ಆಡಳಿತ, ತಾಲೂಕು ಪಂಚಾಯಿತಿ, ನಗರ ಸಭೆ, ನಗರ ಯೋಜನಾ ಪ್ರಾಧಿಕಾರ, ಕೃಷಿ ಇಲಾಖೆ ಹಾಗೂ ಸಿಂಧನೂರು ದಸರಾ ಉತ್ಸವ ಸಮಿತಿ, ಇವರ ಸಂಯುಕ್ತಾಶ್ರಯದಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳಿಗಾಗಿ ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಬಹುಮಾನವನ್ನು ನೀಡಲಾಗುತ್ತಿದೆ, ರಾಜ್ಯಮಟ್ಟದ ಚಿತ್ರ ಪ್ರದರ್ಶನ, ಚಿತ್ರ ಕಲಾವಿದರನ್ನು ಗುರುತಿಸಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯುತ್ತಿದೆ. ಹೈದರಾಬಾದ್ ಕಲ್ಯಾಣ ಕರ್ನಾಟಕದಲ್ಲಿ ಈ ಕಲಾದಸರವು ಹೊಸ ಚಿಗುರನ್ನು ಮೂಡಿಸಿದೆ. ವಿವಿಧ ಸಂಘಟನೆಗಳು ಶಾಲಾ ಕಾಲೇಜುಗಳು ಸರ್ಕಾರದ ಹಿರಿಯ ಅಧಿಕಾರಿಗಳು ಜನಪ್ರತಿನಿಧಿಗಳು ಎಲ್ಲರೂ ಸಂಭ್ರಮದಿAದ ಕಲಾ ದಸರಾ ಕೆ ಸಹಕಾರ ನೀಡುತ್ತಿದ್ದಾರೆ ಎಂದು ದೇವೇಂದ್ರ ಹುಡಾ ಅವರು ತಿಳಿಸಿದ್ದಾರೆ