ಬಳ್ಳಾರಿ: BP News Karnataka :
ಪ್ರತಿಷ್ಠಿತ ಸಂಸ್ತೆಯಾದ ವಿವಿ ಸಂಘದ ಬಳ್ಳಾರಿಯ ವುoಕಿ ಸಣ್ಣ ರುದ್ರಪ್ಪ ಕಾನೂನು ಮಹಾವಿದ್ಯಾಲಯವು (VSR Law College) ಇದೆ ಪ್ರಸಕ್ತ ಸಾಲಿನ 2024 – 25 ನೇ ಅಕಾಡೆಮಿಕ್ ವರ್ಷದ ಲಾ ಕೋರ್ಸ್ ಅಡ್ಮಿಶನ್ ಪ್ರಕ್ರಿಯೆ ದಿನಾಂಕ ಮುಗಿದಿರುತ್ತದೆ.
ಆದರೆ ಮತ್ತೊಮ್ಮೆ ನಮ್ಮ ಕಾಲೇಜಿನ ಆಡಳಿತ ಮಂಡಳಿಯ ಮನವಿ ಮೇರೆಗೆ ಕರ್ನಾಟಕ ಕಾನೂನು ವಿಶ್ವವಿದ್ಯಾಲಯವು ಡಿಗ್ರಿ ನಂತರದ ಮೂರು ವರ್ಷದ ಲಾ ಕೋರ್ಸ್ ಹಾಗೂ ವಿಶೇಷವಾಗಿ ಇದೇ ವರ್ಷ ಆರಂಭಗೊಂಡ ದ್ವಿತೀಯ ಪಿಯುಸಿ ನಂತರದ 5 ವರ್ಷದ ಇಂಟಿಗ್ರೇಟೆಡ್ ಲಾ ಕೋರ್ಸ್ (BA,Llb) ಆಳವಾದ ಕಾನೂನು ವಿದ್ಯಾಭ್ಯಾಸ ಮಾಡಲು ಇಚ್ಚಿಸುವವರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಇದೇ ತಿಂಗಳು 25 /9/ 2024ಕ್ಕೆ ಪ್ರವೇಶಾತಿ ದಾಖಲಾತಿಯ ದಿನಾಂಕವನ್ನು ವಿಸ್ತರಿಸಲಾಗಿದ್ದು, ಮತ್ತೊಮ್ಮೆ ಸಮಯ ಅವಕಾಶವನ್ನು ನೀಡಿರುತ್ತಾರೆ.
ವಿಶೇಷ ಆಸಕ್ತಿ ಇರುವ ವಿದ್ಯಾರ್ಥಿಗಳು ಕೂಡಲೇ ಪಿಯುಸಿ ನಂತರದ 5 ವರ್ಷಗಳ ಬಿ ಎ ಎಲ್ ಎಲ್ ಬಿ ಲಾ ಕೋರ್ಸ್ ನಲ್ಲಿ ಕೆಲವೇ ಸೀಟುಗಳು ಲಭ್ಯವಿರುವುದರಿಂದ ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಬೇಕಾಗಿ ವಿದ್ಯಾರ್ಥಿಗಳಲ್ಲಿ ವಿನಂತಿಸಿಕೊಳ್ಳಲಾಗಿದೆ ಎಂದು
ವುoಕಿ ಸಣ್ಣರುದ್ರಪ್ಪ ಕಾನೂನು ಮಹಾವಿದ್ಯಾಲಯ ಆಡಳಿತ ಮಂಡಳಿಯ ಅಧ್ಯಕ್ಷರಾದ
ಟಿ ನರೇಂದ್ರಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದರು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : ವೀರಶೈವ ವಿಧ್ಯಾವರ್ಧಕ ಸಂಘದ ವುಂಕಿ ಸಣ್ಣರುದ್ರಪ್ಪ ಕಾನೂನು ಮಹಾವಿದ್ಯಾಲಯ, ಕಪಗಲ್ ರಸ್ತೆ, ಬಳ್ಳಾರಿ
ದೂರವಾಣಿ ಸಂಖ್ಯೆ : 080392 258368 / 9591819333 / 9353584511