ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮ

0
200

BP NEWS Karnataka: ಬಳ್ಳಾರಿ: ಆಗಸ್ಟ್.04: ಅಂಗನವಾಡಿ ಮಕ್ಕಳ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಈ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮದಡಿ ತರಬೇತಿ ವಿಷಯಗಳು ಪೂರಕವಾಗಿದೆ- ಮೋಹನ್ ಕುಮಾರಿ, ಸಿ ಡಿ ಪಿ ಓ, ಬಳ್ಳಾರಿ ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನೆ.

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರ್ಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯತ್ ಬಳ್ಳಾರಿ, ಹಾಗೂ ಕಲಿಕೆ ಟಾಟಾ ಟ್ರಸ್ಟ್, ಬೆಂಗಳೂರು, ಇವರ ಸಹಯೋಗದ *ಶಾಲಾ ಪೂರ್ವ ಶಿಕ್ಷಣ ಬಲವರ್ಧನ ಕಾರ್ಯಕ್ರಮದಡಿ* ಈ ದಿನ ಬಳ್ಳಾರಿ ಜಿಲ್ಲೆಯ ಬಳ್ಳಾರಿ ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯ ಸಿದ್ದಮ್ಮನಹಳ್ಳಿ ವಲಯದ ಅಂಗನವಾಡಿ ಕಾರ್ಯಕರ್ತೆಯರ ಐದನೇ ಹಂತದ ತರಬೇತಿ ಮೂರು ದಿನಗಳ ಕಾರ್ಯಗಾರವನ್ನು ಕೊಳಗಲ್ಲು 9ನೇ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಯಿತು. ಎರಡನೇ ದಿನದ ಕಾರ್ಯಗಾರಕ್ಕೆ ಶಿಶು ಅಭಿವೃದ್ಧಿ *ಯೋಜನಾಧಿಕಾರಿಗಳಾದ ಮೋಹನ್ ಕುಮಾರಿ ಮೇಡಂ ಅವರು ತರಬೇತಿಯ ಕೈಪಿಡಿಗಳನ್ನು ವಿತರಿಸಿ* ತರಬೇತಿ ಭಾಗಾರ್ತಿಗಳಾದ ಅಂಗನವಾಡಿ ಕಾರ್ಯಕರ್ತೆಯರಿಗೆ ಶುಭ ಹಾರೈಸಿದರು ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಅಂಗನವಾಡಿ *ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ತಮ್ಮ ಕಾರ್ಯ ಮಹತ್ವದ್ದಾಗಿದೆ* ಹಾಗೂ ಶಾಲಾ ಪೂರ್ವ ಶಿಕ್ಷಣವು ಮಗುವಿಗೆ ಬುನಾದಿ ಶಿಕ್ಷಣವಾಗಿದೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಈ ತರಬೇತಿಗಳು ತುಂಬಾ ಅವಶ್ಯಕವಾಗಿದೆ. ಮತ್ತು ವ್ಯವಸ್ಥಿತವಾಗಿ ಅನುಷ್ಠಾನಕ್ಕೆ ಕೇಂದ್ರ ಮಟ್ಟದಲ್ಲಿ ವಿಷಯಗಳ ಅನುಸಾರವಾಗಿ *ಮಕ್ಕಳ ಗುಣಾತ್ಮಕ ಶಾಲಾ ಪೂರ್ವ ಶಿಕ್ಷಣಕ್ಕೆ* ಈ ತರಬೇತಿ ವಿಷಯಗಳು ಕೂಡ ಪೂರಕವಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತಿ *ಇದ್ದ ಕಲಿಕೆ ಟಾಟಾ ಟ್ರಸ್ಟಿನ ಜಿಲ್ಲಾ ವ್ಯವಸ್ಥಾಪಕರು ಜಗನ್ನಾಥ್* ಅವರು ಮಾತನಾಡುತ್ತಾ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮಾನ್ಯ ಕಾರ್ಯದರ್ಶಿಗಳವರ ಆದೇಶದ ಅನ್ವಯ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಲಿಕಾ ಟಾಟಾ ಟ್ರಸ್ಟಿನ ತಾಂತ್ರಿಕ ಸಹಕಾರದೊಂದಿಗೆ ಶಾಲಾ ಪೂರ್ವ ಶಿಕ್ಷಣ ಬಲವರ್ಧನ ಕಾರ್ಯಕ್ರಮದಲ್ಲಿ ವಿವಿಧ ಹಂತದ ತರಬೇತಿ ವಿಷಯಗಳ ಕುರಿತಂತೆ ಮತ್ತು ಕಾರ್ಯಕ್ರಮದ ಪ್ರಸ್ತುತ ಬೆಳವಣಿಗೆ ತಿಳಿಸಿ ಈ ತರಬೇತಿಯ ವಿಷಯಗಳಾಗಿ ಆರಂಭಿಕ ಸಾಕ್ಷರತೆ (ಮಾದರಿ ಓದುವುದು ಮತ್ತು ಬರೆಯುವುದು) ಭೌತಿಕ ಚಟುವಟಿಕೆಗಳು ಮತ್ತು ದೈಹಿಕ ಆಟಗಳು ಸಂಬಂಧಿಸಿದಂತೆ ಈ ತರಬೇತಿ ನೀಡಲಿದೆ ಎಂದು ತಿಳಿಸಿದರು.

ವಲಯದ ತರಬೇತುದಾರರಾದ *ಶ್ರೀಮತಿ ಕಲ್ಯಾಣಮ್ಮ* ಮಾತನಾಡುತ್ತಾ ವಲಯದಲ್ಲಿ ಶಾಲಾ ಪೂರ್ವ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಾ ಪೋಷಕರಿಗೆ ಕೇಂದ್ರದಲ್ಲಿ ಆಯೋಜಿಸುತ್ತಿರುವ ಚಟುವಟಿಕೆಗಳ ಕುರಿತಂತೆ *ಸಮುದಾಯ ಚಿತ್ತ ಅಂಗನವಾಡಿ ಅತ್ತ* ಸಭೆಗಳ ಮೂಲಕ ವಿವರಿಸಲಾಗಿದೆ ಪ್ರತಿ ಕೇಂದ್ರದ *ಮಕ್ಕಳ ಪೋಷಕರ ವಾಟ್ಸಪ್ ಗ್ರೂಪ್ ರಚನೆ* ಮಾಡಿ ಪ್ರತಿದಿನ ಅಂಗನವಾಡಿಯಲ್ಲಿ ನಡೆಯುವ ಚಟುವಟಿಕೆಗಳನ್ನು ಹಂಚಿಕೊಳ್ಳಲಾಗುತ್ತಿದೆ ಸದರಿ ವಿಷಯಕ್ಕೆ ಪೋಷಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
*ತರಬೇತಿಗಾರರಾದ ಶ್ರೀಮತಿ ಜ್ಯೋತಿ ಹೊಸಮನಿ* ಮಾತನಾಡುತ್ತಾ ಸದರಿ ಕಾರ್ಯಕ್ರಮದ ತರಬೇತಿ ವಿಷಯಗಳು ಪ್ರತಿ ಅಂಗನವಾಡಿ ಕೇಂದ್ರ ಮಟ್ಟದಲ್ಲಿ ವೇಳಾಪಟ್ಟಿ ಅನುಸಾರವಾಗಿ ಅನುಷ್ಠಾನ ಮಾಡುವ ಮುಖ್ಯ ಜವಾಬ್ದಾರಿ ಅಂಗನವಾಡಿ ಶಿಕ್ಷಕಿಯರಿರುವುದರಿಂದ ಕೇಂದ್ರ ಮಟ್ಟದಲ್ಲಿ ಮಕ್ಕಳಿಗೆ ನೀಡಲು ತಿಳಿಸಿದರು.

ಶ್ರೀಮತಿ ನಾಗು ಬಾಯಿ ಮೇಲ್ವಿಚಾರಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here