ಹೊಸ ಓದು ‘ಸರಣಿಯಲ್ಲಿ ವೀರೇಂದ್ರ ರಾವಿಹಾಳ್ ಅವರ ‘ಡಂಕಲ್ ಪೇಟೆ’

0
153

BP NEWS Karnataka: ಬಳ್ಳಾರಿ: ಆಗಸ್ಟ್.04:
ಡಂಕಲ್ ಪೇಟೆ ಕಥಾ ಸಂಕಲನದಲ್ಲಿ ಅಲಕ್ಷಿತ ಲೋಕದ ಸಂಕಥನವೊಂದು ವಿಶಿಷ್ಟವಾಗಿ ತೆರೆದುಕೊಂಡಿದೆ ಎಂದು ಮೋಕಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ
ಡಾ.ಬಿ.ಜಿ.ಕಲಾವತಿಯವರು ನುಡಿದರು.
ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿಜಯ ಬುಕ್ಸ್ ಜಂಟಿಯಾಗಿ ಕನ್ನಡ ಭವನದಲ್ಲಿ ಆಯೋಜಿಸಿದ್ದ ‘ ವೀರೇಂದ್ರ ರಾವಿಹಾಳ್ ಅವರ ಡಂಕಲ್ ಪೇಟೆ ಕಥಾ ಸಂಕಲನದ “ಹೊಸ ಓದು” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.


ಕಥೆ ದುಃಖಕ್ಕೆ ಹೊರತು ಸುಖಕ್ಕೆ ಅಲ್ಲ ಎಂದು ಹೇಳಿದ ಅವರು ಕತೆಗಾರನ ಹೆಚ್ಚುಗಾರಿಕೆ ಇರುವುದು ಇರುವುದನ್ನು ಹೇಳುವುದರಲ್ಲಿ ಅಲ್ಲ .ಇರದೇ ಇರುವುದನ್ನು ರೂಪಕನಿಷ್ಠವಾಗಿ ಹೇಳುವುದರಲ್ಲಿ ಎಂದರು. ಕಥೆಗಳುದ್ದಕ್ಕೂ ಸಹಬಾಳ್ವೆ, ಸಾಮರಸ್ಯದ ಅಂಶಗಳಿವೆ . ಲೇಖಕರು ಸಾಮಾಜಿಕ ಹೊಣೆಗಾರಿಕೆಯನ್ನು ಇಲ್ಲಿ ಚೆನ್ನಾಗಿ ನಿಭಾಯಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಂವಾದದಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಸಂಶೋಧಕ ಡಾ. ನಾಗರಾಜ್ ಬಸರಕೋಡು ಇಲ್ಲಿನ ಕಥೆಗಳ ಭಾಷಾ ಸೊಗಡು ಮತ್ತು ವಸ್ತುಗಳು ಆಪ್ತವಾಗಿವೆ. ಮುಖವಾಡಗಳ ಜಗತ್ತನ್ನು ಬಯಲು ಮಾಡುವಲ್ಲಿ ಇಲ್ಲಿನ ಕಥೆಗಳು ಯಶಸ್ವಿಯಾಗಿವೆ ಎಂದರು.
ಕೆ .ಆರ್ .ವೀಣಾ ಎರ್ರಿಗೌಡ ಮಾತನಾಡುತ್ತಾ ಇಲ್ಲಿನ ಕಥೆಗಳಲ್ಲಿ ಮನುಷ್ಯ ಸಂವೇದನೆಗಳು ಹೆಚ್ಚು ಮುನ್ನೆಲೆಗೆ ಬಂದಿವೆ ಎಂದರು.
ಕೆ.ಲತಾ ರಾವಿಹಾಳರ ಕಥೆಗಳಲ್ಲಿ ಗ್ರಾಮೀಣ ಲೋಕದ ಜನಜೀವನ ಸಂಸ್ಕೃತಿ , ವಿಶಿಷ್ಟವಾಗಿ ಮೈದಾಳಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ನಿಷ್ಠಿ ರುದ್ರಪ್ಪನವರು ಇಂತಹ ಕಾರ್ಯಕ್ರಮಗಳು ಲೇಖಕರನ್ನು ಪ್ರೋತ್ಸಾಹಿಸುವುದರ ಜೊತೆಗೆ ಲೇಖಕರ ಕೃತಿಗಳ ಒಳನೋಟ, ಆಶಯಗಳನ್ನು ಎತ್ತಿ ಹಿಡಿಯುವ ಕೆಲಸ “ಹೊಸ ಓದು” ಸರಣಿಯದ್ಧಾಗಿದೆ ಎಂದರು.
ವೇದಿಕೆ ಮೇಲೆ ವಿಜಯ ಬುಕ್ಸ್ ನ ಪ್ರಕಾಶಕರಾದ ಜಯಶ್ರೀ ರಾವಿಹಾಳ್. ಲೇಖಕ ವೀರೇಂದ್ರ ರಾವಿಹಾಳ್ ಇದ್ದರು.
ಈ ಸಂದರ್ಭದಲ್ಲಿ ಪಿ.ಆರ್.ವೆಂಕಟೇಶ, ಸಿ.ಪನ್ನಾರಾಜ್ , ಯು.ಶ್ರೀನಿವಾಸ ಮೂರ್ತಿ, ಚಾಂದಪಾಷ, ದಸ್ತಗೀರಸಾಬ್ ದಿನ್ನಿ,, ಬಸವರಾಜ ಬಿಸ್ಲಳ್ಳಿ ,ಮಲ್ಲಿಕಾರ್ಜುನ ಹಿರೇಮಠ ಹಂದಿಹಾಳು, ಎನ್.ಡಿ.ವೆಂಕಮ್ಮ, ಎರ್ರಿಸ್ವಾಮಿ.ವೀರೇಶಯ್ಯ ಸ್ವಾಮಿ ,ಡಾ.ಪರಸಪ್ಪ “ಪುಸ್ತಕಾಗಾರ” ದ ನವೀನ್ ಗಾಂಧಿ, ಹೊಸಪೇಟೆ ಶಿವರಾಮ ಹಾಜರಿದ್ದರು. ಇದೇ ಸಂದರ್ಭದಲ್ಲಿ ಹೆಜ್ಜೇನು ಪ್ರಕಾಶನದ ಅರುಣ್ ಭೂಪಾಲ್ ವತಿಯಿಂದ ಸ್ಟಾಂಡ್ ವಿತ್ ಬುಕ್ಸ್ ಕಾರ್ಯಕ್ರಮದ ಮೂಲಕ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಮಾರಾಟ ಮಾಡಲಾಯಿತು.
ಸ್ವಾಗತ ಮತ್ತು ಪ್ರಾಸ್ತಾವಿಕವನ್ನು ಡಾ.ಶಿವಲಿಂಗಪ್ಪ ಹಂದಿಹಾಳು , ನಿರ್ವಹಣೆಯನ್ನು ಅಜಯ ಬಣಕಾರ, ಅಬ್ದುಲ್ ಹೈ.ತೋ ಮಾಡಿದರು.

LEAVE A REPLY

Please enter your comment!
Please enter your name here