ಮೈಸೂರಿನಲ್ಲಿ ಡಿ ಜಿ ತಿರುಮಲ ಅವರಿಗೆ ರಾಷ್ಟ್ರೀಯ ಪುರಸ್ಕಾರ.

0
69

BP NEWS Karnataka: ಬಳ್ಳಾರಿ: 28.07.2024 ರಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರಿನಲ್ಲಿ ನಡೆದ ಕಾರ್ಯಕ್ರಮ. ಶ್ರೀ ಲಕ್ಕಮ್ಮ ದೇವಿ ಕಲಾಪೋಷಕ ಸಂಘ ಬ್ಯಾಕೂಡ . ಬೆಳಗಾವಿ ಜಿಲ್ಲೆ.ಹಾಗೂ .ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು ಸಹಕಾರದೊಂದಿಗೆ.ರಾಷ್ಟ್ರೀಯ ಜಾನಪದ ಲೋಕೋತ್ಸವ 2024ರ ಕಾರ್ಯಕ್ರಮದಲ್ಲಿ .ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ .ಯು ರಾಜಾಪುರ.ಗ್ರಾಮದ ಸಕಲಕಲಾವಲ್ಲಭ ಹಳ್ಳಿಗಾಡಿನ ಚಿತ್ರಕಲಾವಿದ ಡಿ.ಜಿ.ತಿರುಮಲ ಹಾಗೂ ಯು.ರಾಜಾಪುರದ ಮತ್ತೊಬ್ಬ ಕಲಾವಿದರಾದ . ಬಯಲುನಾಟಕ ಸಾಹಿತ್ಯ ಕ್ಷೇತ್ರದಲ್ಲಿ ಮಿಂಚು ಹರಿಸುತ್ತಿರುವ .ಇಟಗಿ ಜ್ಯೋತಿ ವೀರೇಪ್ಪ .ಅವರಿಗೆ 2024 ನೇ ಸಾಲಿನ ನ್ಯಾಷನಲ್ ಅಚೀವ್ಮೆಂಟ್ ಗ್ಲೋಬಲ್ ಅವಾರ್ಡ್. ನೀಡಿ ಗೌರವಿಸಲಾಯಿತು . ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು. ಮಡ್ಡಿಕೆರೆ ಗೋಪಾಲ್. ಅಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು . ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ ಗುರುಮೂರ್ತಿ ಸುನಾಮಿ .ಮಾರಕಸ್ತ್ರ ಚಲನಚಿತ್ರದ ನಿರ್ದೇಶಕರು ಬಳ್ಳಾರಿಯ ಫಿಲಂ ಚೇಂಬರ್ ನ ಅಧ್ಯಕ್ಷರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ .ಡಾ.ಟಿ. ತ್ಯಾಗರಾಜ.ಉಪಾಧ್ಯಕ್ಷರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೈಸೂರು, ಡಾ.ಸಿದ್ದಣ್ಣ ಬ್ಯಾಡಗಿ ರಾಜ್ಯ ಸಹ ಕಾರ್ಯದರ್ಶಿಗಳು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು,

ಜಡೇಶ್ ಎಮ್ಮಿಗನೂರು ಖ್ಯಾತ ಜಾನಪದ ಗಾಯಕರು ಬಳ್ಳಾರಿ,  ಆನಂದ ನಾಯಕ್ ಚಿಕ್ಕಣ್ಣ ಮಾಡ್ಲಿಂಗ್ ಕಲಾವಿದರು ಬೆಂಗಳೂರು, ಸ್ವರೂಪ್ ನಾಯಕ್ ಧಾರವಾಹಿಗಳ ನಿರ್ದೇಶಕರು ಮೈಸೂರು, ನಾಗೇಶ್.ಎಲ್ ಎಂ .ಅಥರ್ವ (ಸಹ) ನಿರ್ದೇಶಕರು ಮತ್ತು ಕಿರುತೆರೆ ನಟರು ಮಂಡ್ಯ, ಭಾಗವಹಿಸಿದ್ದರು. ಕಾರ್ಯಕ್ರಮದ ನೇತೃತ್ವವನ್ನು ಸಿದ್ರಾಮ ನಿಲಜಗಿ ಅಧ್ಯಕ್ಷರು ಶ್ರೀ ಲಕ್ಕಮ್ಮ ದೇವಿ ಕಲಾಪೋಷಕ ಸಂಘ ಬ್ಯಾಕೂಡ ವಹಿಸಿದ್ದರು ಹಾಗೆ ಕಾರ್ಯಕ್ರಮದಲ್ಲಿ ಬಳ್ಳಾರಿಯ ಶಿವಂ ಡ್ಯಾನ್ಸ್ ಅಕಾಡೆಮಿ ಹಾಗೂ ಶಿವನೃತ್ಯ ಕಲಾಪ್ರಿಯ ಸಾಂಸ್ಕೃತಿಕ ಸಂಸ್ಥೆ ಬೆಂಗಳೂರು, ಹಾಗೇ ಭರತನಾಟ್ಯ ಕಲಾವಿದೆಯರಾದ ಬಳ್ಳಾರಿಯ ಕುಮಾರಿ ಅವನಿ ಗಂಗಾವತಿ, ಬೇಲೂರಿನ ಲಾಲಿತ್ಯ ಕುಮಾರ್  ಅವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು. ಕಾರ್ಯಕ್ರಮದಲ್ಲಿ ಸುಮಾರು 60 ಕಲಾವಿದರಿಗೆ 2024ರ ನ್ಯಾಷನಲ್ ಗ್ಲೋಬಲ್ ಅವಾರ್ಡ್ ನೀಡಿ ಗೌರವಿಸಿದರು. ಕವಿ ಗೋಷ್ಠಿ ಕಾರ್ಯಕ್ರಮ ಕೂಡ ಜರುಗಿತು. ಕಾರ್ಯಕ್ರಮದ ನಿರೂಪಕರಾಗಿ ಡಿಜಿ ತಿರುಮಲ, ಮೈಸೂರಿನ .ಕುಮಾರಿ ಸಿಂಚನ ನಿರೂಪಿಸಿದರು. ಇದೇ ಸಂದರ್ಭದಲ್ಲಿ ನ್ಯಾಷನಲ್ ಗ್ಲೋಬಲ್ ಅವಾರ್ಡ್ ನೀಡಿ ಗೌರವಿಸಿದ ಶ್ರೀ ಲಕ್ಕಮ್ಮ ದೇವಿ ಕಲಾ ಪೋಷಕ ಸಂಘ ಬ್ಯಾಕೂಡ ಅಧ್ಯಕ್ಷರಾದ ಸಿದ್ರಾಮ ನಿಲಜಗಿ ಅವರಿಗೆ ಡಿಜಿ ತಿರುಮಲ ಅವರು ಬಿಪಿ ನ್ಯೂಸ್ ಮೂಲಕ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದರು.

LEAVE A REPLY

Please enter your comment!
Please enter your name here