ಶ್ರೀರಾಮು ರಾಜು ಫೌಂಡೇಶನ್ ವತಿಯಿಂದ ಇಂದು ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಪುಸ್ತಕ ಮಕ್ಕಳ ಸಾಹಿತ್ಯದ ಪುಸ್ತಕಗಳನ್ನು ವಿತರಣೆ

0
89

BP News Karantaka 26 July 2024 : ಬಳ್ಳಾರಿಯ ಪ್ರತಿಷ್ಠಿತ ಫೌಂಡೇಶನ್ ಗಳಲ್ಲಿ ಒಂದಾದಂತಹ ಶ್ರೀರಾಮುರಾಜು ಫೌಂಡೇಶನ್ ತನ್ನ ವಿಭಿನ್ನ ವಿಶಿಷ್ಟ ಹೆಜ್ಜೆಗಳ ಮೂಲಕ ನಗರದಲ್ಲಿ ಗುರುತಿಸಿಕೊಂಡಿದೆ.

ಅದೇ ನಿಟ್ಟಿನಲ್ಲಿ ಈ ಬಾರಿ ಬಳ್ಳಾರಿಯ ಹಿರಿಯ ಮುಖಂಡರಾದ ಕೆ.ಸಿ.ಕೊಂಡಯ್ಯ ಅವರ ಹುಟ್ಟು ಹಬ್ಬದ ಪ್ರಯುಕ್ತ 10 ಸರ್ಕಾರಿ ಶಾಲೆಗಳಿಗೆ ಉಚಿತ ವಾಗಿ 30 ಮಕ್ಕಳ ಸಾಹಿತ್ಯವಿರುವ ಪುಸ್ತಕಗಳ ಕಿಟ್ ಅನ್ನು ಗಾಂಧಿನಗರ ಸರ್ಕಾರಿ ಹಿರಿಯ ಪ್ರಾಥಮಿಕ‌ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದಂತಹ ಶ್ರೀ ರಾಮರಾಜು ಅವರು “ಮಕ್ಕಳಿಗೆ ಪಠ್ಯಪುಸ್ತಕದ ಬೋಧನೆಯೊಂದಿಗೆ ಈ ರೀತಿಯ ಹತ್ತು ಹಲವು ಕಥೆಗಳನ್ನು ಹೇಳುವುದರ ಮೂಲಕ ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಕಟ್ಟಿಕೊಡಲು ಸಹಕಾರಿಯಾಗುತ್ತದೆ. ಹಾಗಾಗಿ ನಮ್ಮ ಫೌಂಡೇಶನ್ ವತಿಯಿಂದ ನಮ್ಮ ಸುತ್ತಮುತ್ತಲಿರತಕ್ಕಂತಹ 10 ಸರ್ಕಾರಿ ಶಾಲೆಗಳಿಗೆ 30 ಸಾಹಿತ್ಯದ ಪುಸ್ತಕಗಳು ಇರುವ ಕಿಟ್ ನ್ನು ವಿತರಣೆ ಮಾಡಿದ್ದೇವೆ. ಇದರ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಲು ವಿನಂತಿಸುತ್ತೇನೆ” ಎಂದರು.

 

ಈ ಒಂದು ಪುಸ್ತಕ ವಿತರಣೆಗೆ ಸಹಕರಿಸಿದಂತಹ ಸಿ.ಆರ್.ಪಿ ರವಿಶಂಕರ್ ಅವರು ಮಾಧ್ಯಮದೊಂದಿಗೆ ಮಾತನಾಡಿ “ಶ್ರೀರಾಮುರಾಜು ಫೌಂಡೇಶನ್ ಅವರ ಈ‌ ನಡೆ ನಿಜವಾಗಿಯೂ ಶ್ಲಾಘನೀಯ. ಸಾಹಿತ್ಯದ ಓದಿನಿಂದ ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದ ಬದಲಾವಣೆಯನ್ನು ಕಾಣಬಹುದು” ಎಂದರು.

“ಶ್ರೀರಾಮುರಾಜು ಫೌಂಡೇಶನ್ ಸರ್ಕಾರಿ ಶಾಲೆಯ ಮಕ್ಕಳಿಗೆ ಸಾಹಿತ್ಯದ ಪುಸ್ತಕಗಳನ್ನು ವಿತರಿಸಲು ಆಯ್ಕೆ ಮಾಡಿಕೊಂಡಿದ್ದು ಒಬ್ಬ ಸಾಹಿತಿಯಾಗಿ ಮತ್ತು ಶಿಕ್ಷಕನಾಗಿ ಅಭಿನಂದಿಸುತ್ತೇನೆ. ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಈ ಥರದ ಮಕ್ಕಳ ಸಾಹಿತ್ಯ ಕೃತಿಗಳು ಬಹಳ ಸಹಕಾರಿಯಾಗಿದೆ‌. ಆ ನಿಟ್ಟಿನಲ್ಲಿ ಶ್ರೀ ರಾಮರಾಜು ಫೌಂಡೇಶನ್ ಒಂದು ಹೆಜ್ಜೆ ಮುಂದಿಟ್ಟಿದ್ದು ಸ್ವಾಗತಾರ್ಹ”

— ಡಾ. ಶಿವಲಿಂಗಪ್ಪ ಹಂದಿಹಾಳು,
ಮಕ್ಕಳ‌ ಸಾಹಿತಿಗಳು, ಶಿಕ್ಷಕರು, ಬಳ್ಳಾರಿ

ಈ ಸಂದರ್ಭದಲ್ಲಿ ಪದವಿಧರ ವೇದಿಕೆ ರಾಜ್ಯಾಧ್ಯಕ್ಷರಾದ ಕೆಕೆ‌ಹಾಳ್‌ಗೋವರ್ಧನ, ಸರ್ಕಾರಿ ಮಾದರಿ ಶಾಲೆ ಗಾಂಧಿನಗರದ ಮುಖ್ಯ ಗುರುಗಳು, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು

 

LEAVE A REPLY

Please enter your comment!
Please enter your name here