ವಚನಗಳ ಸಂರಕ್ಷಣೆಯಲ್ಲಿ ಡಾ.ಫ.ಗು.ಹಳಕಟ್ಟಿಯವರ ಪಾತ್ರ ಆದರ್ಶವಾದುದು: ಮೇಯರ್ ಮುಲ್ಲಂಗಿ ನಂದೀಶ್

0
83

BP NEWS Karnataka: ಬಳ್ಳಾರಿ: ಜೂನ್.02:

ಕನ್ನಡ ವಚನ ಸಾಹಿತ್ಯದ ಮೇರು ವಚನಕಾರ ಡಾ.ಫ.ಗು.ಹಳಕಟ್ಟಿ ಅವರು ಶತಮಾನಗಳ ವಚನ ಸಾಹಿತ್ಯವನ್ನು ಸಂರಕ್ಷಿಸಿಟ್ಟು, ಇಂದಿನ ಪೀಳಿಗೆಗೆ ಬಿತ್ತರಿಸಿರುವ ಅವರ ಪಾತ್ರ ಆದರ್ಶಮಯವಾಗಿದೆ ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಮಹಾ ಪೌರರಾದ ಮುಲ್ಲಂಗಿ ನಂದೀಶ್ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಸಾಂಸ್ಕøತಿಕ ಸಮುಚ್ಛಯ ಆವರಣದ ಹೊಂಗಿರಣ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಡಾ.ಫ.ಗುಹಳಕಟ್ಟಿಯವರ ಜನ್ಮದಿನ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಡಾ.ಫ.ಗು.ಹಳಕಟ್ಟಿಯವರು ಕನ್ನಡ ವಚನ ಸಾಹಿತ್ಯದ ಸರ್ವೋತೋಮುಖ ಬೆಳವಣಿಗೆಗೆ ಬುನಾದಿ ಹಾಕಿದವರು. ಮಹಾನರ ವಚನಗಳನ್ನು ಸಂರಕ್ಷಿಸಿ ಇಂದಿನ ಪೀಳಿಗೆಗೆ ಬಿತ್ತರಿಸಿದವರು ಎಂದರು.
ರಾಷ್ಟ್ರೀಯ ಬಸವ ದಳದ ಕಾರ್ಯದರ್ಶಿ ಜಿ.ಆರ್.ನಾಗರಾಜ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಡಾ.ಫ.ಗು ಹಳಕಟ್ಟಿಯವರು ವಚನಸಾಹಿತ್ಯದ ಮಹಾನ್ ವಚನಕಾರರಲ್ಲಿ ಒಬ್ಬರಾಗಿದ್ದು, ಅವರ ವಚನಗಳು ಕನ್ನಡ ಸಾಹಿತ್ಯ ಬೆಳೆವಣಿಗೆಗೆ ಸಹಕಾರಿಯಾಗಿವೆ ಎಂದು ತಿಳಿಸಿದರು.
12 ಶತಮಾನದ ವಚನ ಯುಗದಲ್ಲಿ ಬಿಡಿ-ಬಿಡಿಯಾಗಿದ್ದ ವಚನ ಸಾಹಿತ್ಯವನ್ನು ಒಗ್ಗೂಡಿಸಿ, ಕನ್ನಡ ವಚನ ಸಾಹಿತ್ಯ ರಕ್ಷಣೆ ಮಾಡುವುದರಲ್ಲಿ ಅವರ ಪಾತ್ರ ಬಹುಮುಖ್ಯವಾಗಿದೆ ಎಂದರು.
ಡಾ.ಫ.ಗು.ಹಳಕಟ್ಟಿಯವರು ಕನ್ನಡ ವಚನ ಸಾಹಿತ್ಯ ಕುರಿತು ಅಪಾರ ಪ್ರೇಮ ಬೆಳೆಸಿಕೊಂಡು ವಿದ್ಯಾಸಂಸ್ಥೆ ಹುಟ್ಟುಹಾಕಿ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿರುಗುಪ್ಪ ತಾಲ್ಲೂಕಿನ ರಾರಾವಿ ಗ್ರಾಮದ ಬಿ.ಚಿದಾನಂದ ತಂಡದಿಂದ ವಚನ ಸಂಗೀತ ನಡೆಯಿತು.


ಈ ವೇಳೆ ಮಹಾನಗರ ಪಾಲಿಕೆಯ ಉಪಮೇಯರ್ ಡಿ.ಸುಖುಂ, ಜಿಲ್ಲಾಧಿಕಾರಿಗಳ ಕಚೇರಿಯ ತಹಶೀಲ್ದಾರರಾದ ಗೌಸಿಯಾ ಬೇಗಂ, ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ಪರಿವೀಕ್ಷಕರಾದ ವಸುದೇವಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಸಿಬ್ಬಂದಿಯವರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here