BP NEWS Karnataka: ಹುಬ್ಬಳ್ಳಿ: ಜೂನ್.25: ಕಲಾ ಶಿಕ್ಷಕ, ಬರಹಗಾರ, ಖ್ಯತ ಗಾಯಕ, ಕಲಾವಿದ ಡಿ.ಜಿ.ತಿರುಮಲ ಅವರಿಗೆ 2024 ರ ಸ್ವರ್ಣಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಕಳೆದ ಹಲವಾರು ವರ್ಷಗಳಿಂದ ಶಿಕ್ಷಣ, ಆರೋಗ್ಯ ಮತ್ತು ನೈರ್ಮಲ್ಯ ಕುರಿತಂತೆ ಕಲಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿರುವ ಅವರು, ಐತಿಹಾಸಿಕ, ಸಾಮಾಜಿಕ ಹಾಗೂ ಆಧುನಿಕ ಕಲಾ ಪ್ರಕಾರಗಳನ್ನು ಉದ್ದೀಪನಗೊಳಿಸುತ್ತಿದ್ದಾರೆ. ಇವರು ಹಲವಾರು ಕಲಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಬಣ್ಣ ಹಚ್ಚಿ ಮಾಡುವ ನಟನೆಯಲ್ಲೂ ನೈಜತೆ ಬಿಂಬಿಸಿ ಸಾಮಾಜಿಕವಾಗಿ ಮತ್ತು ಸಾಂಸ್ಕøತಿಕವಾಗಿ ಪ್ರವರ್ಧಮಾನಕ್ಕೆ ಬರುತ್ತಿದ್ದಾರೆ. ಕೃಷಿಯಲ್ಲೂ ತೊಡಗಿರುವ ಡಿ.ಜಿ. ತಿರುಮಲ ಅವರು ನಟನಾ ಕೌಶಲ್ಯದ ಜೊತೆ ರೈತರಿಗಾಗಿ ಜಾಗೃತಿ ಅಭಿಯಾನ, ಪರಿಸರ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದಾರೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಂಚರಿಸಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರ ಕುರಿತು ಹಲವಾರು ಪತ್ರಿಕೆಗಳು ಮತ್ತು ದೇಶ್ಯ ಮಾಧ್ಯಮಗಳು ವ್ಯಕ್ತಿ ವಿಕಸನಕ್ಕೆ ಪೂರಕವಾಗಿ ಲೇಖನಗಳನ್ನು ಬರೆದು ಪ್ರೋತ್ಸಾಹಿಸಿವೆ. ಇವರ ಕಲಾ ಕ್ಷೇತ್ರದ ಸೇವೆಯನ್ನು ಗುರುತಿಸಿ ರಾಜ್ಯಮಟ್ಟದ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಉಮಾಶಂಕರ ಪ್ರತಿಷ್ಠಾನ ಮತ್ತು ಭಾವಸಂಗಮದ ರಾಜೇಂದ್ರ ಪಾಟೀಲ ಮತ್ತು ಸಾಹಿತಿಗಳಾದ ಎಲ್ ಎಸ್ ಶಾಸ್ತ್ರಿ, ಲಲಿತಾ ಬೆಳವಾಡಿ, ಡಾ.ಕೆ ವಿ ರಾಜೇಶ್ವರಿ,
ಎಸ್ ವಿಜಯಾ, ಮಾಲತಿ ಮುದಕವಿ ಇದ್ದರು.