ಬಳ್ಳಾರಿ : ಕುತೂಹಲ ಮೂಡಿಸಿದ್ದ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯನ್ನ ಕಾರಣಾಂತರಗಳಿಂದ ಮುಂದೂಡಲಾಗಿದೆ.
ಕರ್ನಾಟಕದಲ್ಲಿ ಚುಕ್ಕಾಣಿ ಹಿಡಿದ ಏಕೈಕ ಪಾಲಿಕೆ ಬಳ್ಳಾರಿಯದ್ದಾಗಿದ್ದು, ಜನಾರ್ದನ ರೆಡ್ಡಿ ಬಿಜೆಪಿ ಸೇರಿರುವುದರಿಂದ, ಮತ್ತೆ ಕೈ ಚಳಕತೋರಿಸುತ್ತಾರಾ ಅನ್ನುವ ಆತಂಕದಲ್ಲಿ ಮೇಯರ್ ಅಯ್ಕೆ ಬಳ್ಳಾರಿ ಉಸ್ತುವಾರಿ ಸಚಿವರಾದ ಬಿ.ನಾಗೇಂದ್ರ ಅವರಿಗೆ ತಲೆನೋವಾಗಿ ಪರಿಣಮಿಸಿದೆ.
ಕಳೆದ ಬಾರಿ ಮೇಯರ್ ಎಸ್ಸಿ ಮಹಿಳೆ ಮೀಸಲಾತಿಯ ಸಂಧರ್ಭದಲ್ಲಿಯೂ ಕೂಡ ಚುನಾವಣೆಯನ್ನು ಒಂದು ತಿಂಗಳ ಮುಂದೂಡಲಾಗಿತ್ತು.. ಈ ಬಾರಿಯೂ ಕಾಂಗ್ರೆಸ್ ನಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗುತ್ತಿರುವ ಮೇಯರ್ ಸ್ಥಾನಕ್ಕೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಸದ್ಯ ಮುಲ್ಲಂಗಿ ನಂದೀಶ್, ಪಿ.ಗಾದೆಪ್ಪ, ಪ್ರಭಂಜನ್, ಪೇರಂ ವಿವೇಕ್, ರೇಸಿನಲ್ಲಿದ್ದು, ಮೇಯರ್ ಆಗಿ ಒಂದು ವರ್ಷ ಪ್ರಬುದ್ದ ಆಡಳಿತ ನಡೆಸಿದ ಶ್ರೀಮತಿ ರಾಜೇಶ್ವರಿ ಸುಬ್ಬರಾಯುಡು ಅವರನ್ನ ಮತ್ತೊಮ್ಮೆ ಮೇಯರ್ ಮಾಡುವ ಬಗ್ಗೆನೂ ಹೈಕಮಾಂಡ್ ನಲ್ಲಿ ಚರ್ಚೆ ಮಾಡಲಾಗುತ್ತಿದೆ.
ಭರ್ಜರಿ ಜನಪ್ರಿಯತೆಯನ್ನ ಗಳಿಸಿದ್ದ ಮಹಮ್ಮದ್ ಅಸೀಫ್ ಕಣಕ್ಕಿಳಿಯುವುದಿಲ್ಲ ಅಂತ ಬಹಿರಂಗವಾಗಿಯೇ ಹೇಳಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ.
ಮೇ 10 ರ ನಂತರ ಮೇಯರ್ ಚುನಾವಣೆ ಮತ್ತೆ ಗರಿಗೆದರಿಲಿದೆ. ಆಗ ಇನ್ನು ಯರ್ಯಾರು ಅಖಾಡಕ್ಕಿಇಳಲಿದ್ದಾರೋ ಗೊತ್ತಿಲ್ಲ. ಜನಾರ್ಧನ ರೆಡ್ಡಿಯಂತು ಪಾಲಿಕೆಯಮೇಲೆ ಕಣ್ಣಿಟ್ಟಿರುವುದು ಸತ್ಯ ಅನ್ನುತ್ತಿದೆ ಕಮಲದ ಮಂದಿ..!
ಪಾಲಿಕೆಗೆ ನೂತನ ಮೇಯರ್ ಆಯ್ಕೆಯಾಗಿ ಬಳ್ಳಾರಿಯ ಅಭಿವದ್ಧಿಯಾಗಲಿ ಅನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.