ಜ.26 ರಂದು ‘ಸಂಡೂರು ಉತ್ಸವ’

0
195

BP NEWS: ಬಳ್ಳಾರಿ: ಜನವರಿ.25:
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಸಂಡೂರು ತಾಲ್ಲೂಕು ಆಡಳಿತ ವತಿಯಿಂದ ಜ.26 ರಂದು ಸಂಜೆ 5 ಗಂಟೆಗೆ ಸಂಡೂರು ಪಟ್ಟಣದ ಎ.ಪಿ.ಎಂ.ಸಿ ಹೈಸ್ಕೂಲ್ ಮೈದಾನದಲ್ಲಿ ‘ಸಂಡೂರು ಉತ್ಸವ’ ಆಯೋಜಿಲಾಗಿದೆ.
ಯುವ ಸಬಲೀಕರಣ, ಕ್ರೀಡಾ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಉದ್ಘಾಟನೆ ನೆರವೇರಿಸುವರು.
ಕಾರ್ಮಿಕ ಸಚಿವರಾದ ಸಂತೋಷ್ ಎಸ್.ಲಾಡ್ ಅವರು ಘನ ಉಪಸ್ಥಿತಿ ಇರುವರು.
ಸಂಡೂರು ಶಾಸಕ ಈ.ತುಕರಾಂ ಅವರು ಅಧ್ಯಕ್ಷತೆ ವಹಿಸುವರು.
ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ಡಾ.ಸೈಯದ್ ನಾಸೀರ್ ಹುಸೇನ್, ವಿಧಾನಸಭಾ ಶಾಸಕರಾದ ಜೆ.ಎನ್.ಗಣೇಶ್, ಬಿ.ಎಂ.ನಾಗರಾಜ, ನಾರಾ ಭರತ್ ರೆಡ್ಡಿ, ವಿಧಾನ ಪರಿಷತ್ ಶಾಸಕರಾದ ಡಾ.ಚಂದ್ರಶೇಖರ ಬಿ.ಪಾಟೀಲ, ಶಶೀಲ್ ಜಿ.ನಮೋಶಿ, ವೈ.ಎಂ.ಸತೀಶ್ ಸೇರಿದಂತೆ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝಬೇರ್.ಎನ್, ಸಹಾಯಕ ಆಯುಕ್ತ ಎನ್.ಹೇಮಂತ್, ಸಂಡೂರು ಆರಕ್ಷಕ ವೃತ್ತ ನಿರೀಕ್ಷಕ ಮಹೇಶ್‍ಗೌಡ.ಬಿ., ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್.ಅಕ್ಕಿ, ತಾಲೂಕು ಕಾರ್ಯನಿರ್ವಾಹಕಾಧಿಕಾರಿ ಷಡಕ್ಷರಯ್ಯ.ಹೆಚ್., ತಹಶೀಲ್ದಾರ ಅನಿಲ್ ಕುಮಾರ್.ಜಿ., ಅವರು ಉಪಸ್ಥಿತರಿರುವರು.
ಸಂಡೂರು ಉತ್ಸವದಲ್ಲಿ ಜಾನಪದ ವಾಹಿನಿಯಲ್ಲಿ ಮೆರಗು ನೀಡುವ ಕಲಾತಂಡಗಳು:
ತಾಲ್ಲೂಕಿನ ಹಳೇದರೋಜಿಯ ಅಶ್ವರಾಮಣ್ಣ ಸಂಗಡಿಗರಿಂದ ಹಗಲುವೇಷ, ತಾರಾನಗರದ ಎಸ್.ಎಂ.ಚಂದ್ರಯ್ಯಸ್ವಾಮಿ ಮತ್ತು ರುದ್ರಯ್ಯಸ್ವಾಮಿ ಸಂಗಡಿಗರು ಭುಜಂಗನಗರದ ರೇವಣಸಿದ್ದಯ್ಯಸ್ವಾಮಿ ಸಂಗಡಿಗರು, ಗಂಗಲಾಪುರ ಯರಿಸ್ವಾಮಿ ಸಂಗಡಿಗರು, ತಾರಾನಗರ ಆನಂದಸ್ವಾಮಿ ಸಂಗಡಿಗರಿಂದ ವೀರಗಾಸೆ, ಸುಶೀಲಾನಗರದ ಗಂಗಾಬಾಯಿ ಸಂಗಡಿಗರಿಂದ ಲಂಬಾಣಿ ನೃತ್ಯ, ಹೊಸದರೋಜಿ ತಿಮ್ಮಪ್ಪ ಸಂಗಡಿಗರಿಂದ ಹುಲಿವೇಷ, ಕೂಡ್ಲಿಗಿಯ ಇಮ್ಮಾಡಾಪುರ ಆರ್.ಲಕ್ಷ್ಮೀ ಸಂಗಡಿಗರಿಂದ ಮಹಿಳಾ ಉರುಮೆ ವಾದ್ಯ, ಕುರೇಕುಪ್ಪ ವೀರೇಶ ಸಂಗಡಿಗರು ಮತ್ತು ಸಂಡೂರಿನ ಕೆ.ಈರಣ್ಣ ಸಂಗಡಿಗರಿಂದ ತಾಷೆರಾಂ ಡೋಲ್, ನಿಡಗುರ್ತಿಯ ರಾಮಣ್ಣ ಸಂಗಡಿಗರಿಂದ ಡೊಳ್ಳು ಕುಣಿತ, ಕೂಡ್ಲಿಗಿಯ ಕೆ.ದುರುಗಮ್ಮ ಸಂಗಡಿಗರಿಂದ ಮಹಿಳಾ ಡೊಳ್ಳುಕುಣಿತ, ಎಂ.ಬಸಾಪುರ ಚಂದ್ರಶೇಖರ ತಂಡದಿಂದ ಡೊಳ್ಳು ಕುಣಿತ (ಮಕ್ಕಳು), ಸಂಡೂರಿನ 2ನೇ ವಾರ್ಡ್‍ನ ಪೂಲಾರ ಅಂಜಿನಪ್ಪ ತಂಡದಿಂದ ಕೋಲಾಟ, ಕೊಟ್ಟೂರಿನ ವೀರಭದ್ರೇಶ್ವರ ವಾದ್ಯವೃಂದದಿಂದ ನಂದಿಧ್ವಜ ಕುಣಿತ, ಬಳ್ಳಾರಿಯ ಚಿನ್ನರಾಯ್ತು ಸಂಗಡಿಗರಿಂದ ನಾದಸ್ವರ, ಚೋರನೂರಿನ ಸಿ.ನಾಗರಾಜ ತಂಡದಿಂದ ಕಹಳೆವಾದನ, ಹೊಸಪೇಟೆ ಯೂಸೂಫ ಸಂಗಡಿಗರಿಂದ ಮರಗಾಲು ಕುಣಿತ, ಬಳ್ಳಾರಿಯ ಮಲ್ಲಯ್ಯ ಸಂಗಡಿಗರಿಂದ ಗೊರವರ ಕುಣಿತ, ಸಂಡೂರಿನ ಗುರುಪಾದಪ್ಪ ಸಂಗಡಿಗರಿಂದ ನಾದಸ್ವರ (ಚೌಡಿಕೆಗೊಂದಳಿ), ಸಂಡೂರಿನ ಲಕ್ಷ್ಮೀಪುರದ ಮಾರೆಪ್ಪ ಸಂಗಡಿಗರು ಮತ್ತು ಕೃಷ್ಣಾನಗರದ ಅಲ್ಲಾಭಕ್ಷಿ ತಂಡದವರಿಂದ ತಮಟೆ ವಾದ್ಯ ಕಲಾತಂಡಗಳು ಪಾಲ್ಗೊಳ್ಳಲಿವೆ.
ಸಂಡೂರು ಉತ್ಸವದಲ್ಲಿ ಪ್ರಸ್ತುತ ಪಡಿಸುವ ಸಾಂಸ್ಕøತಿಕ ಕಾರ್ಯಕ್ರಮಗಳು:
ಇದೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಸಂಡೂರು ಉತ್ಸವದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಜ.26 ರಂದು ಸಂಜೆ 05 ಗಂಟೆಯಿಂದ 05.30 ರ ವರೆಗೆ ಸಂಡೂರಿನ ವೆಂಕಟೇಶ ಸಂಗಡಿಗರಿಂದ ನಾಡಗೀತೆ, 5.30 ರಿಂದ 5.45ರ ವರೆಗೆ ಸಂಡೂರಿನ ಎ.ಪಿ. ರುಕುಮಾ ಅವರಿಂದ ಸುಗಮ ಸಂಗೀತ, 5.45 ರಿಂದ 6 ಗಂಟೆಯವರೆಗೆ ಸಂಡೂರಿನ ಹೆಚ್.ಕುಮಾರಸ್ವಾಮಿ ಅವರಿಂದ ತಬಲ ಜುಗಲ್‍ಬಂದಿ, 6 ರಿಂದ 6.15ರವರೆಗೆ ಶ್ರೀ ಶೈಲೇಶ್ವರ ವಿದ್ಯಾಕೇಂದ್ರ ವತಿಯಿಂದ ಜಾನಪದ ಕಲೆಗಳನ್ನು ಬಿಂಬಿಸುವ ನೃತ್ಯ, 6.15 ರಿಂದ 6.30ರ ವರೆಗೆ ಯು.ರಾಜಾಪುರ ಗ್ರಾಮದ ಡಿ.ಜಿ ತಿರುಮಲ ಅವರಿಂದ ಜಾನಪದ ಗೀತೆ, 6.30 ರಿಂದ 7 ರವರೆಗೆ ಬಳ್ಳಾರಿಯ ಎಸ್.ಕೆ.ಆರ್ ಜಿಲಾನಿಭಾಷ ಸಂಗಡಿಗರಿಂದ ಸಮೂಹ ನೃತ್ಯ, 7 ರಿಂದ 7.30ರ ವರೆಗೆ ಬಳ್ಳಾರಿ ತಾಲ್ಲೂಕಿನ ಶಂಕರ ಬಂಡೆ ಗ್ರಾಮದ ಯಲ್ಲನಗೌಡ ಅವರಿಂದ ಕನ್ನಡ ಗೀತಗಳ ಗಾಯನ, 7.30 ರಿಂದ 7.45 ರ ವರೆಗೆ ಸಂಡೂರಿನ ನಾಟ್ಯಕಲಾ ತರಬೇತಿ ಕೇಂದ್ರದಿಂದ ಜಾನಪದ ನೃತ್ಯ, 7.45 ರಿಂದ 7.55ರ ವರೆಗೆ ಸಂಡೂರಿನ ಜಗದಂಬ ಮ್ಯೂಜಿಕಲ್ ಟ್ರಸ್ಟ್ ವತಿಯಿಂದ ಕನ್ನಡ ಗೀತೆಗಳು, 7.55 ರಿಂದ 8.05 ರ ವರೆಗೆ ಸಂಡೂರಿನ ರಶ್ಮಿ ಮೆಲೋಡಿಸ್ ವತಿಯಿಂದ ಗೀತ ಗಾಯನ, 8.05 ರಿಂದ 8.20ರ ವರೆಗೆ ಆದಿತ್ಯ ಕುಮಾರ್ ಸಂಗಡಿಗರಿಂದ ಡ್ರಮ್ ಮ್ಯೂಜಿಕಲ್, 8.20 ರಿಂದ 10.30ರ ವರೆಗೆ ಬೆಂಗಳೂರಿನ ಅಮೋಘವರ್ಷ ಸಂಗಡಿಗರಿಂದ ರಸಮಂಜರಿ ಕಾರ್ಯಕ್ರಮಗಳು ನಡೆಯಲಿವೆ.
ಸಂಡೂರು ಪಟ್ಟಣದ ಎಲ್ಲಾ ಪುರಸಭೆ ಸದಸ್ಯರು ಹಾಗೂ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಸರ್ವ ಸಮಾಜ ಜನಾಂಗದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ಸಂಡೂರು ತಾಲ್ಲೂಕಿನ ರೈತಪರ ಸಂಘಟನೆ, ಕನ್ನಡ ಪರ ಸಂಘಟನೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ತಾಲ್ಲೂಕಿನ ಎಲ್ಲಾ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here