ಕಷ್ಟ ನುಂಗಿ ಸುಖವ ಹಂಚಿದವರು ಅಪ್ಪ” ಹಸಿವ ನುಂಗಿ ಹೊಟ್ಟೆ ತುಂಬಿಸಿದವಳು ಅಮ್ಮ” ಅಪ್ಪನ ರಾಜಕುಮಾರಿ ಮಗಳು”

0
255

 ಕಷ್ಟ ನುಂಗಿ ಸುಖವ ಹಂಚಿದವರು ಅಪ್ಪ” ಹಸಿವ ನುಂಗಿ ಹೊಟ್ಟೆ ತುಂಬಿಸಿದವಳು ಅಮ್ಮ”
ಅಪ್ಪನ ರಾಜಕುಮಾರಿ ಮಗಳು”

ಸಿಂಧನೂರಿನ ಗ್ರಾಮೀಣ ಪ್ರತಿಭೆ ಚೈತ್ರಾ ಪಾಂಡುರಂಗ ಮಾಂಡ್ರೆ

ಅಂದು ಬಿಸಿಲು ಆಗಲೇ ನೆತ್ತಿಗೇರಿತ್ತು. ಸಾಗುವ ದಾರಿ ಇನ್ನೂ ದೂರ ಇತ್ತು. ಯುವಕನಿಗೆ ಸುಮಾರು 27 ವರ್ಷ ವಯಸ್ಸಿರಬಹುದು, ಮದುವೆಯಾಗಿತ್ತು .ಹೆಂಡತಿ ಮೊದಲನೆಯ ಮಗುವಿನ ಹೆರಿಗೆಗೆ ಇನ್ನೇನು ಮೂರು ತಿಂಗಳು ಉಳಿದಿತ್ತು. ಶಿಕ್ಷಕ ವೃತ್ತಿಯ ಶಿಕ್ಷಣ ಪಡೆದಿದ್ದರೂ ನೌಕರಿ ಇನ್ನೂ ಸಿಕ್ಕಿರಲಿಲ್ಲ. ತಂದೆ ಆಗುತ್ತಿದ್ದೇನೆ ಎಂಬ ಮನಸ್ಸಿನ ಸಂತಸ ಒಂದೆಡೆಯಾದರೆ ಮಧ್ಯಮ ವರ್ಗದ ವೃತ್ತಿ ಇಲ್ಲದೆ ಸಂಸಾರ ನೌಕೆ ನಡೆಸುವದು ಅಷ್ಟೇ ಕಷ್ಟ ಸಾಧ್ಯವಾಗಿತ್ತು. ಹಳ್ಳಿಯಲ್ಲಂತೂ ಉದ್ಯೋಗ ದೊರೆಯುವುದಿಲ್ಲ ನಮ್ಮ ಮುಂದಿನ ಜೀವನ ಹೇಗೆ ? ಹಳ್ಳಿಯನ್ನು ಬಿಟ್ಟು ಪಟ್ಟಣಕ್ಕೆ ಹೊರಟರೆ ಉದ್ಯೋಗ ದೊರೆತಿತು ಎಂಬ ಭರವಸೆಯಿಂದ ಸಾಗಿತ್ತು ಅಂದಿನ ಪ್ರಯಾಣ.
ಹೆಂಡತಿ ಗರ್ಭಿಣಿಯಾಗಿದ್ದರು ಅಂದು ಮೋಟಾರು ಗಾಡಿ ಬರದೇ ಇದ್ದಿದ್ದರಿಂದ ಅನಿವಾರ್ಯವಾಗಿಯೇ ಬಿಸಿಲಿನಲ್ಲಿ ಆಸೆಗಳನ್ನು ಹೊತ್ತು ಆ ದಂಪತಿ ಇಬ್ಬರೂ ಗುರಿ ಮುಟ್ಟುವ ಊರನ್ನು ಸಮೀಪಿಸುತ್ತಲೇ ಸಾಗಿದ್ದರು. ಆ ಊರಿಗೆ (ಕುಂದಗೋಳ ತಾಲೂಕ ಗೌಡಗೇರಿ) ಆಗ ಇರುವುದೇ ಎರಡೇ ಬಸ್ಸು ಒಂದು ಮುಂಜಾನೆ ಇನ್ನೊಂದು ರಾತ್ರಿ ಇಂಥ ಪರಿಸ್ಥಿತಿಯಲ್ಲಿ ಅವರಿಬ್ಬರ ಮನಸ್ಥಿತಿಯನ್ನು ಅರ್ಥೈಸಿಕೊಳ್ಳುವ ಹೊಸ ಜೀವವೊಂದು ಎಲ್ಲ ಭಾವನೆಗಳನ್ನು ದಾರಿ ಉದ್ದಕ್ಕೂಅನುಭವಿಸುತ್ತಿತ್ತು.
ತಲುಪುವ ಊರು ಬಂದಾಗ ಆಗಲೇ ಸಂಜೆ ಹೊತ್ತು ಏರಿತ್ತು ರಾತ್ರಿಯಲ್ಲಿ ಕಳೆಯುವದು ಎಲ್ಲಿ ಎಂಬ ಚಿಂತೆಯಲ್ಲಿದ್ದಾಗ ಅಕ್ಕನ ಮನೆಗೆ ಹೋಗಿ ಅತಿಥಿಯಾಗಿ ಇದ್ದಬಿಟ್ಟರಾಯಿತು ಎಂಬ ಸಣ್ಣ ಆಲೋಚನೆಯೂ ಅಂದಿನ ಆಸೆಗೆ ಸುಖಾಂತ್ಯವಾಗಿತ್ತು.

ಉದ್ಯೋಗ ಅರಸಿ ಬಂದ ಅತಿಥಿ

ಅಕ್ಕನ ಮನೆಯಲ್ಲಿ ಸೇರಿದಾಗ ಅತಿಥಿಗಳಾಗಿದ್ದರು ಮನಸ್ಸಿನಲ್ಲಿ ಮಾತ್ರ ಉದ್ಯೋಗ ಅರಸಿ ಬಂದ ಆಸೆ ಇತ್ತು. ಅಕ್ಕನ ಊರು ಗದಗ ಪಟ್ಟಣವಾಗಿದ್ದರಿಂದ ಅಲ್ಲಿ ಉದ್ಯೋಗಕ್ಕೆ ಏನೂ ಕೊರತೆ ಇರಲಿಲ್ಲ. ಕಲಿತ ವಿದ್ಯೆ ಎಂದೂ ಕೈ ಬಿಡುವುದಿಲ್ಲ ಎಂಬ ಬಲವಾದ ಬುದ್ಧಿವಾದದ ತಾಯಿ ಮಾತು ಯಾವಾಗಲೂ ನೆನಪಿಗೆ ಬರುತ್ತಿತ್ತು ಯುವಕ ಬುದ್ಧಿವಂತಿಕೆಯಲ್ಲಿ ತುಂಬಾ ಜಾಣನಿದ್ದ. ಮೃದು ಸ್ವಭಾವವಿದ್ದರೂ ದೂರ ದೃಷ್ಟಿಯ ಯಶಸ್ಸು ಕಾಣುವ ಬಗೆಯನ್ನು ಆಗಲೇ ಕಂಡುಕೊಂಡಿದ್ದರು.ಹಾಗೂ ಹೀಗೂ ಮಾಡಿ ಅದೇ ಪಟ್ಟಣದಲ್ಲಿ ಕೇವಲ 2,000 ಸಂಬಳಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕ ವೃತ್ತಿ ಆರಂಭವಾಯಿತು. ಸಣ್ಣ ಬಾಡಿಗೆ ಮನೆಯಲ್ಲಿದ್ದು ಜೀವನವನ್ನು ಹೇಗೆ ಮುಂದ ವರಿಸಬೇಕೆಂದು ರೂಪುರೇಷವನ್ನು ಸಿದ್ಧಪಡಿಸಿ ಮನಸ್ಸಿನಲ್ಲಿಯೇ ದೃಢವಾದ ಅಚಲವಾದ ಗುರಿಯನ್ನು ಇಟ್ಟುಕೊಂಡು ಜೀವನದ ಬಂಡಿ ಸಾಗಿತ್ತು. ಹೆಂಡತಿಯು ತವರು ಮನೆಗೆ ಹೋಗಿದ್ದರು ಅಷ್ಟು ಇಷ್ಟು ಕಷ್ಟ ಪಟ್ಟು ಶಿಕ್ಷಕ ವೃತ್ತಿ ಮಂದಗತಿಯಲ್ಲಿ ಸಾಗುತ್ತಿತ್ತು. ಅಷ್ಟರಲ್ಲಿಯೇ ಶುಭ ಸಂದೇಶವೊಂದು ಬಂತು. ಜೀವನಕ್ಕೆ ಹೊಸ ಉತ್ಸಾಹ ತುಂಬುವಂತ ಹೆಣ್ಣು ಮಗುವಿನ ಜನನದ ಸುದ್ದಿ ಮನಸ್ಸಿನಲ್ಲಿ ದೀಪಾವಳಿ ಹಬ್ಬದ ವಾತಾವರಣವಾಯಿತು. ಮಗುವಿನ ಮುಖವನ್ನು ನೋಡಲು ಹೋಗುವಷ್ಟು ಸಾಮರ್ಥ್ಯ ಇರದೆ ಇದ್ದರೂ ಮಗುವಿನ ಜನನ ವಸಂತ ಕಾಲದ ಚೈತ್ರದಂತೆ ಚಿಗುರಿತ್ತು.
ಇದೇನಿದು ಇಷ್ಟೊಂದು  ಕಥೆಯನ್ನು ಯಾಕೆ ಹೇಳುತ್ತಿದ್ದಾರೆ ಎನ್ನುವ ಭಾವ ನಿಮ್ಮಲ್ಲಿ ಈಗಾಗಲೇ ಮೂಡಿರಬಹುದು ಈ ಲೇಖನದ ಮುಖ್ಯ  ಘಟ್ಟವೇ ಇದು.

ಹೆಣ್ಣು ಮಗುವಿನ ಜನನ ಪೋಷಕರ ಮನದಲ್ಲಿ ಹಬ್ಬದ ವಾತಾವರಣ

ಇಂದು ಆ ಹೆಣ್ಣ ಮಗು ಬೆಳೆದು ದೊಡ್ಡವಳಾಗಿ ತಂದೆಯ ಆಸೆಯನ್ನು ಅವರ ಇಚ್ಛೆಯಂತೆ ವಿದ್ಯಾಭ್ಯಾಸವನ್ನು  ಮಾಡಿ ಜರ್ಮನ್  ದೇಶದಲ್ಲಿ ವೃತ್ತಿಗೆ ಆಯ್ಕೆ ಹೊಂದಿ ಬೃಹತ್ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಹೋಗುತ್ತಿರುವದು ಆ ವ್ಯಕ್ತಿಗೆ ಅತ್ಯಂತ ಸಂತಸದ ಕ್ಷಣ ಇದಾಗಿದೆ. ಇದೆಲ್ಲಾ ಪಾಂಡುರಂಗ ರಾಮಚಂದ್ರ   ಮಾಂಡ್ರೆ ರವರ ಯಶಸ್ಸಿನ ಕಥೆ ಅವರ ಮಗಳ ಮೂಲಕ ಹೆಮ್ಮೆಪಡುವ ಚೈತ್ರಾ  ಮಾಂಡ್ರೆ ರವರ ಸಾಧನೆ ಮಾದರಿಯಾಗಿದೆ.
ಅಂದು ಕಷ್ಟಕಾಲದಲ್ಲಿ ಜನಿಸಿದ ಮಗುವೆ ಚೈತ್ರಾ ಮಾಂಡ್ರೆ. ಅವರ ತಾಯಿ ಗಾಯಿತ್ರಿ. ಗದಗಪಟ್ಟಣದಲ್ಲಿ ವೃತ್ತಿ ಹೊಂದಾಣಿಕೆಯಾಗದಿದ್ದರಿಂದ ಹೆಂಡತಿಯಾದ ಗಾಯತ್ರಿಗೆ ಪೋಸ್ಟ್ ಮನ್ ಹುದ್ದೆ ದೊರೆತಿದ್ದು ಯೋಗ ಯೋಗವೇ ಸರಿ. ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ  ಗೊನವಾಟ್ಲ ಎಂಬ ಗ್ರಾಮದಲ್ಲಿ  ವೃತ್ತಿಜೀವನ ಪ್ರಾರಂಭವಾಯಿತು. ಮಗಳ ವಿದ್ಯಾಭ್ಯಾಸಕ್ಕೆ ಏನು ಮಾಡುವುದು ಎನ್ನುವಂತ ಚಿಂತೆ ದಂಪತಿಯಲ್ಲಿ ಬಲವಾಗಿ ಮೂಡಿತ್ತು ಆದರೂ ಕಷ್ಟಪಟ್ಟು ಗೊನವಾಟ್ಲದಿಂದ ಲಿಂಗಸೂರಿನ ಕ್ಯಾಂಬ್ರಿಜ್ಜ್ ಶಾಲೆಗೆ ಒಂದನೇ ತರಗತಿಗೆ ದಾಖಲೆ ಮಾಡಬೇಕಾಯಿತು. ಅಷ್ಟೊತ್ತಿಗಾಗಲೇ  ಪಾಂಡುರಂಗರವರು ತಮ್ಮ ಗದಗಪಟ್ಟಣದ ಶಾಲೆ ವೃತ್ತಿಯನ್ನು ತೊರೆದು.ತಹಸಿಲ್ದಾರ್ ಆಫೀಸಿನಲ್ಲಿ ಇದ್ದು, ಇಂದು ನಿವೃತ್ತಿ  ಹೊಂದಿರುವ ಬಸಪ್ಪ ಮಾಂಡ್ರೆ ತಾತನವರ ಪ್ರೀತಿ ವರವಾಗಿ ಪರಿಣಿಸಿತು.

ವಿದ್ಯಾರ್ಥಿ ಸಾಧನೆಯಲ್ಲಿ ಗುರುಗಳ ಮಾರ್ಗದರ್ಶನ ಬಹು ಮುಖ್ಯ

ಶಿಕ್ಷಕರಾದ ಆನಂದ ಮಾಂಡ್ರೆ ಇವರ ಸತತ ಅಕ್ಕರೆಯ ಶಿಕ್ಷಣದ ಮಾರ್ಗದರ್ಶನ ಚೈತ್ರಾ ಚೆನ್ನಾಗಿ ಅಧ್ಯಮಾಡಿಕೊಂಡಳು ಅಲ್ಲಿಯ ಪ್ರಾಂಶುಪಾಲರಾದ ವಿಷ್ಣುವರ್ಧನ ರೆಡ್ಡಿ,ಬಸವರಾಜ . ಜ್ಞಾನೇಶ್ವರ ಹಂಚಾಟೆ. ಉಪನ್ಯಾಸಕರ ಸಮರ್ಥವಾದ ಮಾರ್ಗದರ್ಶನದಿಂದ ಪ್ರಥಮ ದರ್ಜೆಯಲ್ಲಿ ಪಲಿತಾಂಶವನ್ನು ಪಡೆದು ಧಾರವಾಡದ ಶ್ರೀ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿಗೆ ಆಯ್ಕೆ ಹೊಂದಿದಳು. ತಂತ್ರಜ್ಞಾನದಲ್ಲಿ ವಿಶೇಷ ಆಸಕ್ತಿ ಬರುವುಂತೆ ಮಾಡಿದ್ದು. ಬಿಸಿಲೂರು ಪೊಸ್ಟ ಪತ್ರಿಕೆ ಪ್ರಧಾನ ಸಂಪಾದಕ ಶ್ರೀ ಅರುಣ ಭೂಪಾಲ್ ಮಾರ್ಗದರ್ಶನ ಅಪಾರವಾಗಿತ್ತು.
ಅಲ್ಲಿಂದ ನಿರಂತರವಾಗಿ ಬಹಳ ಶ್ರದ್ಧೆಯಿಂದ ಇಂಜಿನಿಯರಿಂಗ್ ವಿಷಯಗಳನ್ನು ಅರ್ಥ ಮಾಡಿಕೊಂಡು ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದಳು. ನಂತರ ಬೆಂಗಳೂರಿನಲ್ಲಿ ತರಬೇತಿ ವೃತ್ತಿಯನ್ನು ಆರಂಭಿಸಿ ಇಂದು ಜರ್ಮನ್ ದೇಶದ ಬೃಹತ್ ಕಂಪನಿಯೊಂದಕ್ಕೆ ಆಯ್ಕೆ ಹೊಂದಿ ವರ್ಷಕ್ಕೆ 42 ಲಕ್ಷ ಸಂಬಳ ಪಡೆಯುವ ಈ ಸಾಧನೆ ತಂದೆ ತಾಯಿಗಳಿಗೆ ಹೇಳತೀರದ ಸಂತಸ. ತಾಯಿ ಪೋಸ್ಟ್ ಮ್ಯಾನ್ ಹಾಗಿದ್ದರೂ ಮಕ್ಕಳಿಗೆ ಓದಲು ಏನನ್ನು ಕಡಿಮೆ ಮಾಡದೆ ಅವರ ಕಲ್ಯಾಣಕ್ಕೆ ಶ್ರಮಿಸಿದ್ದು ಈಗ ಅವರ ಆಸೆ ಈಡೇರಿದೆ.
ವಿದೇಶಕ್ಕೆ ತೆರಳುವದರಲ್ಲಿ ಬೆಂಗಳೂರಿನ ವಿನೋದ ಮಾಳದಕರ . ಮನೋಜ ಹಂಚಾಟೆ. ಗಣೇಶ ಮಾಂಡ್ರೆ ರವರ ಮಾರ್ಗದರ್ಶನ ಪಡೆದು ಇಂದು ಸಾಧನೆ ಮಾಡಿದ್ದಾಳೆ.

ನಾಡಿನ ಸಂಸ್ಕೃತಿ ಬಹು ಮುಖ್ಯ

ಪ್ರಾಮಾಣಿಕವಾಗಿ ಓದುವ ಮಕ್ಕಳಿಗೆ ಅವರ ವಿದ್ಯಾಭ್ಯಾಸದ ಜೊತೆಗೆ ನಾಡಿನ ಸಂಸ್ಕೃತಿ, ಹಬ್ಬ ಹರಿದಿನಗಳ ಮಹತ್ವ ಹಿರಿಯರಲ್ಲಿ ಗೌರವ ಕೊಡುವ ಭಾವ ಇವೆಲ್ಲವನ್ನು ಪಾಂಡುರಂಗ ತಮ್ಮ ಮಗಳಿಗೆ ಕಲಿಸಿಕೊಟ್ಟಿದ್ದಾರೆ. ಚೈತ್ರಾ ಮಾಂಡ್ರೆ ಇಂದು ನಾಡು ಹೆಮ್ಮೆಪಡುವ ಇಂಜಿನಿಯರಾಗಿ ತಮ್ಮ ವೃತ್ತಿ ಜೀವನಕ್ಕಾಗಿ ದೂರದ ಜರ್ಮನ್ ದೇಶಕ್ಕೆ ಹೋಗುತ್ತಿರುವದು ತಂದೆ ಪಾಂಡುರಂಗರವರಿಗೆ  ತಮ್ಮ ಮಕ್ಕಳು ಸಾಧಿಸಿದ್ದು ಇಂದು ಅನೇಕರಿಗೆ ಮಾದರಿಯಾಗಿದೆ.
ಸತತ ಪ್ರಯತ್ನದಿಂದ ಎಲ್ಲವನ್ನು ಸಾಧಿಸಬಹುದು ಎಂಬುದಕ್ಕೆ ಚೈತ್ರಾಳ ಸಾಧನೆ ತುಂಬಾ ಮಹತ್ವದ್ದು. ಚೈತ್ರಾಳ ಸಾಧನೆ ಹಿಂದೆ ಅವಳ ತಮ್ಮನಾದ ವಿನ ಯನ ಸಾಧನೆಯೂ ಕೂಡ ಅಷ್ಟೇ ಮಹತ್ವದ್ದಾಗಿದೆ. ಕಳೆದ ವರ್ಷ ವಿನಯ್ ಸಿಂಧನೂರಿನಿಂದ ಜರ್ಮನಿಗೆ ಹೋಗಿ ವೃತ್ತಿಯನ್ನು ಆರಂಭಿಸಿದ್ದ ಈಗ ಅಕ್ಕನಿಗೆ ಮಾರ್ಗದರ್ಶನ ಮಾಡಿ ತನ್ನ ಅಕ್ಕನಿಗಾಗಿ ಶ್ರಮಿಸಿದ್ದಾನೆ. ಇಂದು ಅಕ್ಕ ಮತ್ತು ತಮ್ಮ ಒಂದೇ ಬೃಹತ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ವೃತ್ತಿ ಜೀವನ ಸಾಧಿಸುವುದು ಅಪರೂಪದ ವಿಷಯವಾಗಿದೆ. ಇದನ್ನೆಲ್ಲವನ್ನು ಕಂಡ ತಂದೆ ತಾಯಿಗಳು ತಮ್ಮ ಮಕ್ಕಳನ್ನು ಬೆಳಗುವ ದೀಪದಂತೆ ಕಾಣುತ್ತಿದ್ದಾರೆ. ಚೈತ್ರಾಳಿಗೆ ಶುಭವಾಗಲಿ.

LEAVE A REPLY

Please enter your comment!
Please enter your name here