ಗಣರಾಜ್ಯೋತ್ಸವ: ವಿಶೇಷ ಅತಿಥಿಗಳಾಗಿ ವಿಎಸ್‍ಕೆ ವಿವಿಯ ಉಪನ್ಯಾಸಕ ಡಿ.ಮಹೇಶ ಬಾಬು ಆಯ್ಕೆ

0
78

BP NEWS: ಬಳ್ಳಾರಿ: ಜನವರಿ.10:
ನವದೆಹಲಿಯಲ್ಲಿ ಇದೇ ಜ.26 ರಂದು ಜರುಗಲಿರುವ 75ನೇ ಗಣರಾಜ್ಯೋತ್ಸವಕ್ಕೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಯೋಗ ಅಧ್ಯಯನದ ಉಪನ್ಯಾಸಕರಾದ ಡಿ.ಮಹೇಶ ಬಾಬು ಅವರು ರಾಜ್ಯದಿಂದ ನಾಮ ನಿರ್ದೇಶನಗೊಂಡಿದ್ದಾರೆ.
ಅಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರ ಸಮ್ಮುಖದಲ್ಲಿ ರಾಜ್ಯದ ಪರವಾಗಿ ಯೋಗಾಸನಗಳ ಪ್ರದರ್ಶನದಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದಿಂದ ಒಟ್ಟು 18 ಜನ ಯೋಗ ತರಬೇತುದಾರರನ್ನು ರಾಜ್ಯ ಆಯುಷ್ ಇಲಾಖೆ ಆಯುಕ್ತರು ನಾಮ ನಿರ್ದೇಶನ ಮಾಡಿ ಪಟ್ಟಿಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿದ್ದಾರೆ. ಇವರೆಲ್ಲರಿಗೂ ವಿಶೇಷ ಅತಿಥಿಗಳಾಗಿ ಪರಿಗಣಿಸಿ ನವದೆಹಲಿಗೆ ಪ್ರಯಾಣಿಸಲು ಮತ್ತು ಗಣರಾಜ್ಯೋತ್ಸವದಲ್ಲಿ ರಾಜ್ಯದ ಪರವಾಗಿ ಪ್ರತಿನಿಧಿಸಲು ಶಿಫಾರಸ್ಸು ಮಾಡಲಾಗಿದೆ.
ಕಳೆದ ಎರಡು ವರ್ಷಗಳಿಂದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಯೋಗ ಡಿಪ್ಲೋಮಾ ಉಪನ್ಯಾಸಕರಾಗಿ ಡಿ.ಮಹೇಶ ಬಾಬು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಶ್ರೀಮತಿ ಡಾ.ಸುಜಾತ ಪಾಟೀಲ್ ಆಯ್ಕೆಗೆ ಜಿಲ್ಲಾ ಆಯುಷ್ ಅಧಿಕಾರಿ ಹಾಗೂ ವೈದ್ಯಾಧಿಕಾರಿಗಳಾದ ಡಾ.ಫಣೀಂದರ, ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಅನಂತ್ ಝಂಡೇಕರ್, ಕುಲಸಚಿವರಾದ ಎಸ್.ಎನ್.ರುದ್ರೇಶ್, ವಿಭಾಗದ ಮುಖ್ಯಸ್ಥರಾದ ಡಾ.ಸಾಹೇಬ ಅಲಿ ನಿರುಗುಡಿ, ಸಂಯೋಜಕರಾದ ಡಾ.ಶಶಿಧರ್ ಕೆಲ್ಲೂರ್, ಸಿಬ್ಬಂದಿ, ಆಪ್ತರು ಅಭಿನಂದನೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here