BP NEWS: ಬಳ್ಳಾರಿ: ನವೆಂಬರ್.13:
ಕರ್ನಾಟಕ ಎಂದು ಮರುನಾಮಕರಣವಾಗಿ 50 ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ನಿರ್ದೇಶನದಂತೆ, ಇಡೀ ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ ಸಂಸ್ಕøತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಮತ್ತು ಯುವ ಜನತೆಯಲ್ಲಿ ಕನ್ನಡ – ಕನ್ನಡಿಗ – ಕರ್ನಾಟಕದ ಅರಿವು ಮೂಡಿಸುವ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದರ ಅಂಗವಾಗಿ ಕರ್ನಾಟಕ ಸಂಭ್ರಮ-50ರ ಅಂಗವಾಗಿ ಜ್ಯೋತಿ ರಥಯಾತ್ರೆಯು ರಾಜ್ಯಾದಾದ್ಯಂತ ಸಂಚರಿಸಲಿದೆ. ಇದೇ ನವೆಂಬರ್ 14ರಂದು ಜಿಲ್ಲೆಗೆ ಆಗಮಿಸಲಿದ್ದು, ಆದ್ದೂರಿ ಸ್ವಾಗತಕ್ಕೆ ಜಿಲ್ಲಾಡಳಿತವು ಸಜ್ಜು ಮಾಡಿಕೊಂಡಿದೆ.
ರಥಯಾತ್ರೆ ಸಂಚಾರ ವಿವರ:
ನ.14ರಂದು ಕೂಡ್ಲಿಗಿಯಿಂದ ಸಂಡೂರು ತಾಲ್ಲೂಕಿಗೆ ಬೆಳಿಗ್ಗೆ 09ಗಂಟೆಗೆ ಆಗಮಿಸಲಿದೆ. ಅಲ್ಲಿಂದ ಹೊರಟು ನ.16ರಂದು ಸಂಡೂರಿನಿಂದ ಬಳ್ಳಾರಿಗೆ ಬೆಳಿಗ್ಗೆ 9ಗಂಟೆಗೆ ಆಗಮಿಸಲಿದೆ. ನಂತರ ನ.18ರಂದು ಬಳ್ಳಾರಿಯಿಂದ ಕುರುಗೋಡು ತಾಲ್ಲೂಕಿಗೆ ಬೆಳಿಗ್ಗೆ 9ಗಂಟೆಗೆ ಆಗಮಿಸಲಿದೆ. ಬಳಿಕ ನ.20ರಂದು ಕುರುಗೋಡುನಿಂದ ಕಂಪ್ಲಿಗೆ ಬೆಳಿಗ್ಗೆ ತಲುಪಲಿದೆ. ನ.22ರಂದು ಕಂಪ್ಲಿಯಿಂದ ಅಲ್ಲಿಂದ ಹೊರಟು ಸಿರುಗುಪ್ಪ ತಾಲ್ಲೂಕಿಗೆ ಬೆಳಿಗ್ಗೆ 9 ಗಂಟೆಗೆ ಆಗಮಿಸಲಿದೆ. ಕೊನೆಯಲ್ಲಿ ನ.24ರಂದು ಸಿರುಗುಪ್ಪದಿಂದ ಗಂಗಾವತಿಗೆ ಹೊರಡಲಿದೆ.
ನ.14ರಿಂದ 24ರವರೆಗೆ ವಿವಿಧ ತಾಲ್ಲೂಕುಗಳಲ್ಲಿ ಅದ್ದೂರಿ ಸ್ವಾಗತ:
ನ.14ರಂದು ಸಂಡೂರು ತಾಲ್ಲೂಕಿಗೆ ಆಗಮನ:
ಸಂಡೂರು ತಾಲ್ಲೂಕಿಗೆ ಬೆಳಿಗ್ಗೆ 09ಗಂಟೆಗೆ ಆಗಮಿಸಲಿದ್ದು, ಅಂದು ಅಲ್ಲಿನ ಶಾಸಕರು, ತಹಶೀಲ್ದಾರರು ಸೂಕ್ತ ಶಿಷ್ಟಾಚಾರದೊಂದಿಗೆ ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆಯನ್ನು ಗಡಿಭಾಗವಾದ ಬಂಡ್ರಿ ಗ್ರಾಮದಲ್ಲಿ ಸ್ವಾಗತಿಸುವರು ಹಾಗೂ ಮಾರ್ಗ ಮಧ್ಯದಲ್ಲಿ ಬರುವ ಎಲ್ಲಾ ಹೋಬಳಿ ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಗೌರವಯುತವಾಗಿ ಬರಮಾಡಿಕೊಳ್ಳಲಿದ್ದಾರೆ. ನ.15ರಂದು ರಥಯಾತ್ರೆಯನ್ನು ಸಂಡೂರು ತಾಲ್ಲೂಕಿನಲ್ಲಿ ಕಾಯ್ದಿರಿಸಿಕೊಂಡು ವಿವಿಧ ಕಲಾ ತಂಡಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಮತ್ತು ವೇದಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವರು. ನ.16ರಂದು ಸಂಡೂರು ತಾಲ್ಲೂಕಿನ ಗಡಿಭಾಗದ ಮುಕ್ತಾಯದವರೆಗೂ ಸಂಚರಿಸಿ ಬೀಳ್ಕೊಡಲಿದ್ದಾರೆ
ನ.16ರಂದು ಬಳ್ಳಾರಿಗೆ ಆಗಮನ. ಸಂಡೂರು ತಾಲೂಕಿನ ತೋರಣಗಲ್ಲು, ಕುಡಿತಿನಿ ಮಾರ್ಗವಾಗಿ ಗಡಿಭಾಗವಾದ ಅಲ್ಲಿಪುರಕ್ಕೆ ಆಗಮಿಸಿದಾಗ ಶ್ರೀ ಮಹಾದೇವ ತಾತನವರ ದೇವಸ್ಥಾನದಿಂದ ರಥಯಾತ್ರೆಯನ್ನು ಶಿಷ್ಟಾಚಾರದನ್ವಯ ಮತ್ತು ಗೌರವಗಳೊಂದಿಗೆ ಸ್ವಾಗತಿಸಲಾಗುವುದು. ಈ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು, ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ವಿಜೃಂಭಣೆಯಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಲಿದೆ. ನ.17ರಂದು ನಗರದ ರಾಘವ ಕಲಾಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ಹಾಗೂ ಇತರೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.
ನ.18ರಂದು ಕುರುಗೋಡಿಗೆ ಆಗಮನ:
ಬಳ್ಳಾರಿ ನಗರದ ಹವಂಭಾವಿ ಮಾರ್ಗವಾಗಿ ತಾಲ್ಲೂಕಿನ ಸೋಮಸಮುದ್ರ ಗ್ರಾಮದ ಮೂಲಕ ಕುರುಗೋಡಿಗೆ ಆಗಮಿಸಿದಾಗ ರಥಯಾತ್ರೆಯನ್ನು ಸರ್ಕಾರದ ಗೌರವಗಳೊಂದಿಗೆ ಸ್ವಾಗತಿಸಲಾಗುವುದು ಹಾಗೂ ಮಾರ್ಗ ಮಧ್ಯದಲ್ಲಿ ಬರುವ ಎಲ್ಲಾ ಪಂಚಾಯತಿ, ಹೋಬಳಿ ಹಾಗೂ ಗ್ರಾಮಗಳಲ್ಲಿ ಗೌರವಯುತವಾಗಿ ಬರಮಾಡಿಕೊಳ್ಳಲಾಗುವುದು. ಕುರುಗೋಡು ತಾಲ್ಲೂಕಿನ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು, ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ಸ್ವಾಗತಿಸುವರು. ನ.19ರಂದು ವೇದಿಕೆ ಕಾರ್ಯಕ್ರಮ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವರು.
ನ.20ರಂದು ಕಂಪ್ಲಿಗೆ ಆಗಮನ:
ಕುರುಗೋಡು ತಾಲ್ಲೂಕಿನ ಸೋಮಲಾಪುರ ಹಾಗೂ ಕಲ್ಲುಕಂಭ ಗ್ರಾಮದ ಮೂಲಕ ಕಂಪ್ಲಿ ತಾಲ್ಲೂಕಿಗೆ ಆಗಮಿಸಿದಾಗ ರಥಯಾತ್ರೆಯನ್ನು ಸರ್ಕಾರದ ಗೌರವಗಳೊಂದಿಗೆ ಸ್ವಾಗತಿಸಲಾಗುವುದು ಹಾಗೂ ಮಾರ್ಗ ಮಧ್ಯದಲ್ಲಿ ಬರುವ ಎಲ್ಲಾ ಪಂಚಾಯತಿ, ಹೋಬಳಿ ಹಾಗೂ ಗ್ರಾಮಗಳಲ್ಲಿ ಗೌರವಯುತವಾಗಿ ಬರಮಾಡಿಕೊಳ್ಳಲಾಗುವುದು. ಕಂಪ್ಲಿ ತಾಲ್ಲೂಕಿನ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು, ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ಸ್ವಾಗತಿಸುವರು. ನ.21ರಂದು ವೇದಿಕೆ ಕಾರ್ಯಕ್ರಮ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವರು.
ನ.22ರಂದು ಸಿರುಗುಪ್ಪಗೆ ಆಗಮನ:
ಕಂಪ್ಲಿ ತಾಲ್ಲೂಕಿನ ಬೆಳಗೋಡು ಮಾರ್ಗವಾಗಿ ಗಡಿಭಾಗದ ಗ್ರಾಮಕ್ಕೆ ಆಗಮಿಸುವ ರಥಯಾತ್ರೆಯನ್ನು ಸರ್ಕಾರದ ಶಿಷ್ಟಾಚಾರ ಮತ್ತು ಗೌರವಗಳೊಂದಿಗೆ ಸ್ವಾಗತಿಸಲಾಗುವುದು. ಮಧ್ಯದಲ್ಲಿ ಬರುವ ಮಾಟಸೂಗೂರು, ನಡವಿ ಮತ್ತು ತೆಕ್ಕಲಕೋಟೆ, ಹಳೇಕೋಟೆ ಮಾರ್ಗವಾಗಿ ಬರುವ ಎಲ್ಲಾ ಹೋಬಳಿ ಹಾಗೂ ಗ್ರಾಮ ಪಂಚಾಯತಿಗಳಲ್ಲಿ ಬರಮಾಡಿಕೊಳ್ಳುವುದು. ಈ ಸಂದರ್ಭದಲ್ಲಿ ಸಿರುಗುಪ್ಪ ತಾಲ್ಲೂಕಿನ ಕನ್ನಡಪರ ಸಂಘಟನೆಗಳು, ಪದಾಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು, ಕಲಾ ತಂಡಗಳೊಂದಿಗೆ ಮೆರವಣಿಗೆ ಮೂಲಕ ಸ್ವಾಗತಿಸುವರು. ನ.23ರಂದು ವೇದಿಕೆ ಕಾರ್ಯಕ್ರಮ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವರು.
ನ.24ರಂದು ಬೆಳಿಗ್ಗೆ 09 ಗಂಟೆಗೆ ಸಿರುಗುಪ್ಪ ತಾಲ್ಲೂಕಿನ ಗಡಿಭಾಗದವರೆಗೆ ಬೀಳ್ಕೊಡಲಾಗುವುದು.
ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥಯಾತ್ರೆಯು ಜಿಲ್ಲೆಯಲ್ಲಿ ವಿವಿಧೆಡೆ ಆಗಮಿಸಿದಾಗ ಆದ್ದೂರಿಯಾಗಿ ಸ್ವಾಗತಿಸುವುದು ಮತ್ತು ರಥಯಾತ್ರೆ ಸಂಚಾರ ಯಶಸ್ವಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.