BP News Karnatka ಬಳ್ಳಾರಿ ಅ.26 :
ಬಳ್ಳಾರಿಯ ಮಾಜಿ ಸಂಸದರು ಹಾಗೂ ಹೈ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಎನ್ ವೈ ಹನುಮಂತಪ್ಪ(ನ್ಯಾಯಾಂಗ) ಮತ್ತು ಬಳ್ಳಾರಿಯ ಬಯಲಾಟ ಮತ್ತು ರಂಗಭೂಮಿ ಕಲಾವಿದೆ ಸುಜಾತಮ್ಮ(ರಂಗಭೂಮಿ) ಅವರಿಗೆ 2023 ನೇ ಸಾಲಿನ ರಾಜ್ಯ ಮಟ್ಟದ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಿಸಿದೆ.
ಬಳ್ಳಾರಿಯ ಹಿರಿಯ ಅನುಭವಿಗಳಾದ ಶ್ರೀ ಎನ್ ವೈನು ಹನುಮಂತಪ್ಪನವರಿಗೂ ಹಾಗೂ ಹಿರಿಯ ಬಯಲಾಟ ಕಲಾವಿದೆ ಸುಜಾತಮ್ಮ ಅವರಿಗೆ ಈ ಗೌರವ ಸಂದಿರುವುದು ಸಂತಸ ತಂದಿದೆ ಎಂದು ಶ್ರೀ ಎಸ್ ಆರ್ ಎಂ ಗ್ರೂಪ್ ನ ಅಧ್ಯಕ್ಷರಾದ ಕೆ.ಆರ್.ಮಧು ಅವರು ಮಾಧ್ಯಮಕ್ಕೆ ತಿಳಿಸಿದರು.