ಬಳ್ಳಾರಿಯಲ್ಲಿ ನಡೆದ ಅಂತರ್‍ರಾಜ್ಯ ಎನ್‍ಸಿಸಿ ಸ್ಪರ್ಧೆ

0
73

BP NEWS: ಬಳ್ಳಾರಿ: ಅಕ್ಟೋಬರ್.19:
ಕರ್ನಾಟಕ ಮತ್ತು ಗೋವಾ ಅಂತರ ರಾಜ್ಯ ರಾಷ್ಟ್ರೀಯ ಕೆಡೆಟ್ ಕಾಪ್ರ್ಸ್ (ಎನ್‍ಸಿಸಿ) ಅಂತರ ಗುಂಪು ಸ್ಪರ್ಧೆಯು ಸಂಡೂರು ತಾಲ್ಲೂಕಿನ ತೋರಣಗಲ್ಲು ಪಟ್ಟಣದ ಸೇನಾ ತರಬೇತಿ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು.
ಕರ್ನಾಟಕ ಮತ್ತು ಗೋವಾದ ಎಲ್ಲಾ ಜಿಲ್ಲೆಗಳಿಂದ ಸುಮಾರು 520 ಕೆಡೆಟ್‍ಗಳು ಉಪಸ್ಥಿತರಿದ್ದರು. ಆಯ್ಕೆಯಾದ ಕೆಡೆಟ್‍ಗಳು 2024ರ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಉಭಯ ರಾಜ್ಯಗಳನ್ನು ಪ್ರತಿನಿಧಿಸಲಿದ್ದಾರೆ ಹಾಗೂ ಇದೇ ಮೊದಲ ಬಾರಿ 26 ಜನವರಿ 2024 ರಂದು ದೆಹಲಿಯಲ್ಲಿ ಕರ್ತವ್ಯ ಪಥದಲ್ಲಿ ಮಹಿಳಾ ತಂಡವು ಪಥಸಂಚಲನ ನಡೆಸುತ್ತಿದ್ದು, ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಎನ್‍ಸಿಸಿ ಬಾಲಕಿಯರ ಕೆಡೆಟ್‍ಗಳಿಗೆ ಪ್ರತಿಷ್ಠಿತ ಅವಕಾಶ ಇದಾಗಿದೆ.


ಕರ್ತವ್ಯ ಪಥದ ಭಾಗವಾಗಿ ಮತ್ತು ದೆಹಲಿಯಲ್ಲಿ ನಡೆಯಲಿರುವ ಪ್ರಧಾನ ಮಂತ್ರಿ ರ್ಯಾಲಿಯಲ್ಲಿ ಭಾಗವಹಿಸಲು ಸಹ ಅವಕಾಶವಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಆಯ್ಕೆ ಶಿಬಿರ ನಡೆದಿದೆ ಎಂದು ಎನ್‍ಸಿಸಿ ಗುಂಪಿನ ಪ್ರಧಾನ ಕಚೇರಿಯ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here