ನಗರದಲ್ಲಿ ಅಮೃತ ಕಳಸ ಯಾತ್ರೆ ರಾಮಜನ್ಮ ಭೂಮಿಗೆ ಇಟ್ಟಿಗೆ ಕಳಿಸಿತ್ತು ಈಗ ಬಳ್ಳಾರಿಯಿಂದ ಮಣ್ಣು ದೆಹಲಿಗೆ

0
57

BP NEWS: ಬಳ್ಳಾರಿ: ಅಕ್ಟೋಬರ್.17:
ಭಾರತ ಸರ್ಕಾರ, ನೆಹರು ಯುವ ಕೇಂದ್ರ ಬಳ್ಳಾರಿ. ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಹಾಗೂ ಬಳ್ಳಾರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಮಹಾನಗರ ಪಾಲಿಕೆ. ಕೇಂದ್ರ ಮಂತ್ರಾಲಯದ ಆದೇಶದಂತೆ 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನನ್ನಮಣ್ಣು ನನ್ನದೇಶ ಕಾರ್ಯಕ್ರಮವನ್ನು ಇಂದು ನಗರದ ಬಿಡಿಎಎ ಸಭಾಂಗಣದಲ್ಲಿ ನೆಹರು ಯುವ ಕೇಂದ್ರದಲ್ಲಿ ಮಂಗಳವಾರದಂದ ಆಯೋಜಿಸಲಾಗಿತ್ತು.
ಎಲ್ಲರಿಗೂ ದೇಶ ಪ್ರೇಮ ಎಂಬುದು ಮುಖ್ಯ. ನಮ್ಮ ದೇಶ ನಮ್ಮಮಣ್ಣ ಎಂಬ ಹೆಮ್ಮೆ ಎಲ್ಲರಲ್ಲೂ ಇರಬೇಕು ಎಂದು ಮಹಾನಗರ ಪಾಲಿಕೆಯ ಉಪಮೇಯರ್ ಜಾನಕಿ ಅವರು ಹೇಳಿದರು.
ಗ್ರಾಮ ಪಂಚಾಯ್ತಿ, ನಗರದ ವಿವಿಧ ವಾರ್ಡ್‍ಗಳಿಂದ ಸಂಗ್ರಹಿಸದ ಮಣ್ಣಿನ ಕುಂಡಗಳನ್ನು ಇಲ್ಲಿನ ಡಿಸಿ ಕಚೇರಿ ಮುಂಭಾಗದ ಗಾಂಧೀಜಿ ಅವರ ಪ್ರತಿಮೆ ಬಳಿಯಿಂದ ಮೆರವಣಿಗೆ ಮೂಲಕ ಬಿಡಿಎಎ ಸಭಾಂಗಣಕ್ಕೆ ತಂದು ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಈಗ ದೆಹಲಿಯಲ್ಲಿ ನಮ್ಮದೇಶದ ಎಲ್ಕಡೆಯ ಮಣ್ಣನ್ನು ಸಂಗ್ರಹಿಸಿ ದೇಶ ಭಕ್ತಿಯ ಉದ್ಯಾನವನ ನಿರ್ಮಾಣಕ್ಕೆ ಬಳ್ಳಾರಿಯ ಮಣ್ಣು ತೆಗೆದುಕೊಂಡು ಹೋಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಸಮಾರಂಭದಲ್ಲಿ ಎಲ್ಕಡೆಯಿಂದ ತಂದ ಮಣ್ಣನ್ನು ಒಂದ ಗಡಗಿಯ ಕಳಸದಲ್ಲಿ ಸೇರಿಸಿ ಅದನ್ನು ರಾಷ್ಟ್ರದ ರಾಜಧಾನಿ ದೆಹಲಿ ತಲುಪಿಸಲು. ನೆಹರು ಯುವ ಕೇಂದ್ರದ ಅಧಿಕಾರಿಗೆ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಜುಬೇರ್ ಅವರು ಹಸ್ತಾಂತರಿಸಿದರು.

ನಂತರ ಅವರು ಮಾತನಾಡಿ, ನಾವು ನಮ್ಮ ಮಣ್ಣಿನ ಸಂಸ್ಕøತಿಯೊಂದಿಗೆ ಈ ದೇಶದ ಋಣ ತೀರಿಸುವ ನಿಟ್ಟಿನಲ್ಲಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಕಾರ್ಯಕ್ರಮವನ್ನು ಮೇಯರ್ ತ್ರಿವೇಣಿ ಉದ್ಘಾಟಿಸಿದರು. ತಾಲೂಕು ಪಂಚಾಯ್ತಿಯ ಈಓ ಮಡಗಿನ ಬಸಪ್ಪ ಮಾತನಾಡಿ, ಪ್ರಧಾನಿಯವರ ಆಶಯದಂತೆ ನಾವು ತಾಲೂಕಿನ ಪ್ರತಿ ಗ್ರಾಮದ ಮನೆ ಮನೆಗಳಿಗೆ ತೆರಳಿ ಮಣ್ಣು ಮತ್ತು ಧಾನ್ಯ ಸಂಗ್ರಹಿಸಿ ಈಗ ಅವನ್ನು ರಾಷ್ಟ್ರದ ರಾಜಧಾನಿಗೆ ಕಳಿಸುತ್ತುದ್ದೇವೆ ಇದು ದೇಶ ಭಕ್ತಿಯ ಪ್ರತೀಕ ಎಂದರು.
ಸಮಾರಂಭದಲ್ಲಿ ಪಾಲಿಕೆಯ ಸದಸ್ಯ ಹನುಮಂತ.ಕೆ, ಗುಡಿಗಂಟಿ ಹನುಮಂತ, ಸುರೇಖ ಮಲ್ಲನಗೌಡ, ಮಹಾನಗರ ಆಯುಕ್ತರು ಕಲೀಲ್ ಸಾಬ್, ನೆಹರು ಯುವ ಕೇಂದ್ರದ ಅಧಿಕಾರಿ ಮಾಂಟು ಪತ್ತಾರ್ ಮೊದಲಾದವರು ಇದ್ದರು.

LEAVE A REPLY

Please enter your comment!
Please enter your name here