ಬಳ್ಳಾರಿ Oct 18 : BP news Karanataka
ನಗರದ ಆದಿ ದೇವತೆ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ಶ್ರೀ ಎಸ್ ಆರ್ ಎಂ ಸೇವಾ ಸಮಿತಿವತಿಯಿಂದ ಉಚಿತ ಬಟ್ಟೆಬ್ಯಾಗ್ ಗಳನ್ನು ವಿತರಣೆ ಮಾಡಲಾಯಿತು.
ಎಸ್ ಆರ್ ಎಂ ಸಂಸ್ಥೆಯ ಅದ್ಯಕ್ಷ ರಾದ ಕೆ.ಆರ್ ಮಧು ಅವರು ಮಾತನಾಡಿ, ಪ್ಲಾಸ್ಟಿಕ್ ಮುಕ್ತ ಬಳ್ಳಾರಿ ನಮ್ಮ ಕನಸು ಅದಕ್ಕಾಗಿ ನಮ್ಮ ಪುಟ್ಟ ಪ್ರಯತ್ನ ಇದಾಗಿದೆ. ಸುಮಾರು 5000 ಬಟ್ಟೆ ಬ್ಯಾಗ್‌ಗಳನ್ನು ಹಂಚಿತ್ತಿದ್ದೇವೆ. ಆದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ ಎಂದು ಜನತೆಗೆ ಮನವಿ ಮಾಡಿಕೊಂಡರು.
ಈ ಸಂಧರ್ಬದಲ್ಲಿ ನಗರದ ಪ್ರತಿಷ್ಠಿತ ಇಡಾಲಿಯ ಆಸ್ಪತ್ರೆಯ ಅಡ್ಮಿನಿಸ್ಟೇಟರ್ ಆದ ಕೆ.ಸುರೇಶ್ ಅವರು ಮಾತನಾಡಿ, ಎಸ್ ಆರ್ ಎಂ ಫೌಂಢೆಷನ್ ಅವರ ಕಾರದಯ ಶ್ಲಾಘನೀಯ, ಅರೋಗ್ಯದ ದೃಷ್ಠಿಯಿಂದ ಪ್ಲಾಸ್ಟಿಕ್ ಬಳಕೆ ಕಡಿಮೆ ಅನಿವಾರ್ಯ ವಾಗಿದೆ ಎಂದರು.
ಬಹುಮುಖಿ ಎಂಟರ್ ಪ್ರೈಸಸ್ ಯಂಗ್ ಎಂಟರ್ಪ್ರೈನರ್ ಸಾಯಿ ಮೇಘನಾ ರಾಮ್ ಮಾತಾಡಿ, 5000 ಬಟ್ಟೆ ಬ್ಯಾಗ್ ಗಳನ್ನು ನಮ್ಮ ಸಂಸ್ಥೆಯಿಂದ ಖರೀದಿ ಮಾಡುವುದರ ಮೂಲಕ ಪ್ಲಾಸ್ಟಿಕ್ ಮುಕ್ತ ಬಳ್ಳಾರಿಗೆ ಬೆಂಲಿಸಿದ್ದು ಸ್ವಾಗತಾರ್ಹ ಎಂದರು.