ಸಿಂಧನೂರು : ಅಕ್ಟೋಬರ್ 05,2023
ಜನಪರ ಹೋರಾಟಗಾರ ಹೆಚ್.ಎನ್. ಬಡಿಗೇರ್ ಅವರು ಶ್ಯಾಮನೂರು ಶಿವಶಂಕ್ರಪ್ಪನವರ ಮುಖ್ಯಮಂತ್ರಿ ಸಿದ್ದರಾಮಯ್ಯನವ ನೇತೃತ್ವದ ಸರ್ಕಾರ ಲಿಂಗಾಯತ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆ ಎನ್ನುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ ಪ್ರಕಠಣೆಯನ್ನುಹೊರಡಿಸಿದ್ದಾರೆ.
ಪ್ರಕಠಣೆಯಲ್ಲಿ ತಿಳಿಸಿದಂತೆ:
ಕರ್ನಾಟಕ ರಾಜ್ಯದಲ್ಲಿ ಜಾತ್ಯಾತೀತ ಮುಖವಾಡಗಳು ತಾವೇ ಕಳಚಿ ಹೋಗುತ್ತಿವೆ ಹೃದಯದ ಅಂತರಾಳದಲ್ಲಿರುವ ಜಾತಿವಾದಿ ತತ್ವಗಳು ಸಹಜವಾಗಿ ಹೊರಗೆ ಬರುತ್ತಿವೆ.
ಕಾಂಗ್ರೆಸ್ ಪಕ್ಷದ ಮುಖಂಡರು ದೀರ್ಘಕಾಲದ ವರೆಗೆ ರಾಜಕೀಯ ಅನುಭವಗಳನ್ನು ಅನುಭವಿಸಿದ ಲಿಂಗಾಯತ್ ಸಮುದಾಯದ ರಾಜ್ಯ ಮುಖಂಡರಾದ ಶ್ಯಾಮ್ನೂರ್ ಶಿವಶಂಕರಪ್ಪನವರ ಹೇಳಿಕೆ.
ಈ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಲಿಂಗಾಯತರಿಗೆಬಹಳ ಅನ್ಯಾಯ ಮಾಡಿದೆ . ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗಿದೆ ಎಂದು ಹೇಳಿರುವ ಹೇಳಿಕೆ ಸತ್ಯಕ್ಕೆ ದೂರವಾದುದು.
ದೇಶಕ್ಕೆ ಸ್ವತಂತ್ರ ಬಂದಾಗಿನಿಂದ ಇಲ್ಲಿಯವರೆಗೆ ಕರ್ನಾಟಕದ ಯಾವ ಲಿಂಗಾಯತರಿಗೂ ಅನ್ಯಾಯವಾಗಿಲ್ಲ ಅವರು ಹೆಚ್ಚು ಕಾಲ ಈ ರಾಜ್ಯವನ್ನು ಆಳಿದ್ದಾರೆ.
ಈ ಕರ್ನಾಟಕ ರಾಜ್ಯದ ಹಳ್ಳಿಗಾಡಿನಿಂದ ಹಿಡಿದು ರಾಜ್ಯಧಾನಿಯವರಿಗೆ ಶಿಕ್ಷಣ ಸಂಸ್ಥೆಯಲ್ಲಿ ಇರಬಹುದು ಅಥವಾ ಸರ್ಕಾರದ ಕಾರ್ಯಾಂಗದಲ್ಲಿ ಇರಬಹುದು ನ್ಯಾಯಾಂಗದ ವ್ಯವಸ್ಥೆಯಲ್ಲಿ ಇರಬಹುದು ಅವರು ಮುಂಚೂಣಿಯಲ್ಲಿದ್ದಾರೆ .
ಮತ್ತು ಗ್ರಾಮೀಣ ಪ್ರದೇಶವನ್ನು ಒಳಗೊಂಡಂತೆ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಕೂಡ ಲಿಂಗಾಯತರು ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಎಲ್ಲದರಲ್ಲಿಯೂ ಕೂಡ ಲಿಂಗಾಯತ ಸಮಾಜ ಬಲಿಷ್ಠ ಸಮಾಜ.
ಆ ಸಮಾಜದ ನಡೆ ನುಡಿ ಆ ಸಮಾಜದ ಪರಿಶ್ರಮ ಮತ್ತು ಅವರ ನಡೆದಬಂದ ಹಾದಿ ಅವರ ಅಭಿವೃದ್ಧಿಗೆ ಮೂಲ ಕಾರಣವಾಗಿದೆ ಅದಕ್ಕೆ ನಮ್ಮದು ಯಾವ ತಕರಾರು ಇಲ್ಲ.
ಆದರೂ ಲಿಂಗಾಯತ ಸಮಾಜ ಮುಂದುವರಿದ ಸಮಾಜ ಆ ಸಮುದಾಯದಿಂದ ದುರ್ಬಲ
ಕೆಳವರ್ಗದ ಸಮುದಾಯಗಳಿಗೆ ಸಹಕಾರ ಆಗಬೇಕೆಂದು ಬಯಸುತ್ತೇವೆ ವಿನ
ಆ ಸಮುದಾಯವನ್ನು ಟೀಕೆ ಮಾಡಬೇಕೆನ್ನುವ ಉದ್ದೇಶ ನಮ್ಮದಲ್ಲ.
ಆದರೆ ಶಾಮನೂರ್ ಶಿವಶಂಕರಪ್ಪನವರ ಹೇಳಿಕೆ ಬಹಳ ಘೋರವಾದದ್ದು ಅನ್ಯಾಯವಾದದ್ದು ಬಹಳ ತಪ್ಪಾದ ಹೇಳಿಕೆ ಇಂಥ ಹೇಳಿಕೆಯನ್ನು ತೀವ್ರವಾಗಿ ಖಂಡಿಸಲೇ ಬೇಕಾಗುತ್ತದೆ.
ಯಾಕೆಂದರೆ ಜಾತ್ಯಾತೀತ ರಾಷ್ಟ್ರದಲ್ಲಿ ಒಂದು ಜಾತಿಯನ್ನು ಮುಂದಿಟ್ಟುಕೊಂಡು ಹೋಗುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ದಕ್ಕೆ ಯಾಗುತ್ತದೆ .
ಚುನಾವಣೆಯ ಸಂದರ್ಭದಲ್ಲಿ ಜಾತ್ಯಾತೀತ ವ್ಯಕ್ತಿಯಾಗಿ ಚುನಾವಣೆಯಲ್ಲಿ ಗೆದ್ದ ಮೇಲೆ ಜಾತಿವಾದಿಗಳಾಗುತ್ತೇವೆ ಎಂದರೆ ಇದು ಸಾಮಾಜಿಕ ನ್ಯಾಯವೇ ಶಾಮನೂರ್ ಶಿವಶಂಕರಪ್ಪನವರೇ.
ಕರ್ನಾಟಕ ರಾಜ್ಯದಲ್ಲಿ ಸಂವಿಧಾನ ರಚನೆಯಾಗಿ ಕಾನೂನುಗಳು ಜಾರಿ ಬಂದಾಗಿನಿಂದ ಇಲ್ಲಿಯವರೆಗೆ ಹಳ್ಳಿಗಾಡಿನಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿ ಉಳಿದಿದೆ.
ವಿಶೇಷವಾಗಿ ಅಸ್ಪೃಶ್ಯರಿಗೆ ಇವತ್ತಿಗೂ ಹಳ್ಳಿಗಾಡಿನಲ್ಲಿ ವಾಸ ಮಾಡಲು ಗೇಣು ಜಾಗವಿಲ್ಲದ ಜನ ಉಳಿಮೆ ಮಾಡಿ ಬದುಕಿನಂದರೆ ಅಡವಿಯಲ್ಲಿ ಒಂದು ಗುಂಟೆ ಭೂಮಿ ಇರಲಾರದ ಜನ ಇನ್ನು ಜೀವಂತವಾಗಿ ರಾಜ್ಯದಲ್ಲಿ ನರಳಾಡುತ್ತಿದ್ದಾರೆ .
ಕೆಲವು ಜನರಿಗೆ ರಾಜಕೀಯ ಎಂದರೆ ಗೊತ್ತಿಲ್ಲ ಅಧಿಕಾರ ಅಂದರೆ ಏನು ಎನ್ನುವುದು ಗೊತ್ತಿಲ್ಲ ಇಂಥ ಘೋರ ಅನ್ಯಾಯಕ್ಕೆ ಒಳಗಾದ ದುರ್ಬಲ ವರ್ಗದ ಜನರು ಕಣ್ಣುಮುಂದಿರುವಾಗ ರ
ಶಾಮನೂರ್ ಶಿವಶಂಕ್ರಪ್ಪನವರ ಹೇಳಿಕೆ ಸರಿಯೇ.
ಶಾಮನೂರ್ ಶಿವಶಂಕರಪ್ಪನ ಜಿಲ್ಲೆಯಲ್ಲಿ, ತಾಲೂಕಿನಲ್ಲಿ, ಅವರ ಗ್ರಾಮದಲ್ಲಿ. ಇಡೀ ರಾಜ್ಯದ ಮೂಲೆ ಮೂಲೆಯಲ್ಲಿ ಅಸ್ಪೃಶ್ಯತೆ,ಅಸಮಾನತೆ, ಹಿಂದುಳಿದ ವರ್ಗದವರ ಮೇಲಿನ ಶೋಷಣೆ ಕೂಡ ಜೀವಂತ ಇದೆ ಅನ್ಯಾಯವಾಗಿದ್ದು
ಈ ಜನರಿಗೆ.
ಅನೇಕ ಹಿಂದುಳಿದ ಜಾತಿಗಳು ಯಾವ ಅಧಿಕಾರವನ್ನು ಅನುಭವಿಸದೆ ಸರ್ಕಾರದ ಸೌಲತ್ತುಗಳನ್ನು ಕೂಡ ಸರಿಯಾದ ರೀತಿಯಲ್ಲಿ ಪಡೆದುಕೊಳ್ಳಲಿಕ್ಕೆ ಆಗದಂತ ಜನ ಇದ್ದಾರೆ ಇವರ ಬಗ್ಗೆ ಚಿಂತನೆ ಮಾಡಬೇಕಾಗಿತ್ತು ಶಾಮನೂರು ಶಿವಶಂಕ್ರಪ್ಪನವರು.
ಈ ಎಲ್ಲವನ್ನು ಬದಿಗೊತ್ತಿ ಕೇವಲ ಲಿಂಗಾಯತ ಜನಾಂಗಕ್ಕೆ ಅನ್ಯಾಯವಾಗಿದೆಂದು ಹೇಳುವ ಮಾತು ತಪ್ಪು.
ಆ ಕಾರಣಕ್ಕಾಗಿ ದಲಿತ ಹಿಂದುಳಿದ ಅಲ್ಪಸಂಖ್ಯಾತ ಎಲ್ಲ ದುರ್ಬಲ ವರ್ಗಗಳು ರಾಜ್ಯದಲ್ಲಿ ಎಚ್ಚೆತ್ತುಕೊಳ್ಳಬೇಕಾಗಿದೆ ರಾಜಕೀಯ ಅವಕಾಶದಿಂದ ವಂಚಿತರಾದ ಎಲ್ಲ ಹಿಂದುಳಿದ ವರ್ಗದ ಜನ ತಮ್ಮ ತಮ್ಮ ಜಾತಿ ವೈಯಕ್ತಿಕ ಹಿತಾಶಕ್ತಿಗಳನ್ನು ಬದಿಗಿಟ್ಟು ರಾಜ್ಯ ಅಧಿಕಾರವನ್ನು ಹಿಡಿಯಲು ಎಲ್ಲರು ಒಗ್ಗಟ್ಟಾಗಬೇಕಾಗಿದೆ ಮುಂದಿನ ಮುಖ್ಯಮಂತ್ರಿ ಪದವಿಗಾಗಿ ಎಸ್ ಸಿ ಎಸ್ ಟಿ ಜನ ಪೈಪೋಟಿ ಮಾಡಲೇಬೇಕು.
– ಹೆಚ್ಎನ್ ಬಡಿಗೇರ್
ಜಾತಿ ನಿರ್ಮೂಲ ಚಳುವಳಿಯ ರಾಜ್ಯ ಸಂಚಾಲಕ