ಶ್ರೀರಾಮ ರಾಜು ಫೌಂಡೇಷನ್ ವತಿಯಿಂದ ಬೃಹತ್ ರಕ್ತದಾನ ಶಿಬಿರ

0
117

BP NEWS: ಬಳ್ಳಾರಿ: ಅಕ್ಟೋಬರ್.02:    ರಕ್ತದಾನ ಮಾಡುವುದರಿಂದ ಅಮೂಲ್ಯವಾದ ಜೀವಗಳನ್ನು ಉಳಿಸಲು ಸಾಧ್ಯವಾಗುತ್ತಿದೆ, ಮುಖ್ಯವಾಗಿ ಯುವ ಜನರು ರಕ್ತದಾನ ಮಾಡುವುದರ ಮೂಲಕ ಜೀವವನ್ನು ಉಳಿಸಲು ಸಹಕರಿಸಬೇಕೆಂದು ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣ ಎನ್ ಪ್ರತಾಪ್ ರೆಡ್ಡಿ ತಿಳಿಸಿದರು.

ಅವರು ಇಂದು ನಗರದ ಸಂಗನಕಲ್ಲು ರಸ್ತೆಯಲ್ಲಿನ ಕೆ.ಆರ್.ಎಸ್ ಕಲ್ಯಾಣ ಮಂಟಪದಲ್ಲಿ ಮಹಾತ್ಮ ಗಾಂಧಿಯವರ 154ನ್ ಜಯಂತಿಯ ಪ್ರಯುಕ್ತ ಶ್ರೀರಾಮರಾಜು ಫೌಂಡೇಷನ್ ಮತ್ತು ಸ್ವಾಮಿ ವಿವೇಕಾನಂದ ರಕ್ತ ನಿಧಿ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.

ರಕ್ತದಾನ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು, ಶೇಕಡ 80 ರಷ್ಟು ಹೃದಯಾಘಾತವನ್ನು ತಡೆಯುವುದು, ರಕ್ತದಲ್ಲಿ ಕೊಬ್ಬು ಕರಗಲು ಸಹಕಾರಿಯಾಗುವುದು, ವಿವೇಚನಶಕ್ತಿ ಮತ್ತು ಜ್ಞಾಪಕ ಶಕ್ತಿ ಹೆಚ್ಚಾಗುವುದು, ರಕ್ತದಾನ ಮಾಡುವುದರಿಂದ ದೇಹದಲ್ಲಿ ಯಾವುದೇ ಅಡ್ಡಪರಿಣಾಮಗಳಾಗುವುದಿಲ್ಲ ಬದಲಾಗಿ ದೇಹವನ್ನು ಚೈತನ್ಯದಿಂದ ಇಡುತ್ತದೆ ಎಂದು ಶ್ರೀರಾಮರಾಜು ಫೌಂಡೇಷನ್ ನ ಶ್ರೀರಾಮರಾಜು ತಿಳಿಸಿ,

ನಮ್ಮ ಪೌಂಡೇಷನ್ ವತಿಯಿಂದ ಕಳೆದ ಎರಡು ವರ್ಷಗಳಿಂದ ರಕ್ತದಾನ ಶಿಬಿರವನ್ನು ಏರ್ಪಡಿಸುತ್ತಿದ್ದು ರಕ್ತದಾನಿಗಳು ಮತ್ತು ಯುವಕರು ಅತ್ಯಂತ ಉತ್ಸಾಹದಿಂದ ಸ್ವಯಂಪ್ರೇರಿತವಾಗಿ ಬಂದು ರಕ್ತದಾನವನ್ನು ಮಾಡುತ್ತಿದ್ದಾರೆ. ಇದರಲ್ಲಿ ಮಹಿಳೆಯರು ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ಸಂತಸದ ವಿಷಯ ಎಂದರು. ಈ ರಕ್ತದಾನ ಶಿಬಿರಕ್ಕೆ ಪ್ರತ್ಯಕ್ಷ, ಪರೋಕ್ಷವಾಗಿ ಸಹಕಾರ ನೀಡಿದವರಿಗೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ತಿಳಿಸುತ್ತೇನೆಂದರು.


ಈ ಸಂದರ್ಭದಲ್ಲಿ ಅಸುಂಡಿ ವಂಡ್ರಿ, ಮಾಜಿ ಪಾಲಿಕೆ ಸದಸ್ಯ ಕೆ.ಎಸ್ ಅಶೋಕ್, ಹನುಮಂತ, ಮಾಜಿ ಮೇಯರ್ ರಾಜೇಶ್ವರಿ ಸುಬ್ಬರಾಯುಡು, ಗುಡ್ಲು ರವಿ, ಗಡ್ಡಂ ತಿಮ್ಮಪ್ಪ, ಗೋವರ್ಧನ್ ಚಿತ್ತಾರ, ಲಕ್ಷ್ಮಿ ಸೇರಿದಂತೆ ಹಲವಾರು ಜನರಿದ್ದರು.

LEAVE A REPLY

Please enter your comment!
Please enter your name here