BP NEWS: ಬಳ್ಳಾರಿ: ಸೆಪ್ಟೆಂಬರ್.28:
ಅ.02ರಂದು ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ ಅಂಗವಾಗಿ ದೇಶದೆಲ್ಲೆಡೆ “ಸ್ವಚ್ಛತೆಯೇ ಸೇವೆ” ಅಭಿಯಾನದಡಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಜಿಲ್ಲಾಡಳಿತ, ಬಳ್ಳಾರಿ ಮಹಾನಗರ ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ನಗರದಲ್ಲಿ ಸೆ.29ರಿಂದ ಸ್ವಚ್ಛತಾ “ಶ್ರಮಾದಾನ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್ ಸಾಬ್ ಅವರು ತಿಳಿಸಿದ್ದಾರೆ.
ಸೆ.29ರಂದು ಬೆಳಿಗ್ಗೆ 07 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯ ಆವರಣ(ನೂತನ ಜಿಲ್ಲಾಡಳಿತ ಭವನದ ಎದುರುಗಡೆ), ಸೆ.30ರಂದು ಬೆಳಿಗ್ಗೆ 07 ಗಂಟೆಗೆ ಕೊಳಗಲ್ ರಸ್ತೆಯ ವಿದ್ಯಾನಗರ ಸರ್ಕಲ್ ನಿಂದ ಏರ್ ಪೋರ್ಟ್ ವರೆಗೆ ಮತ್ತು ಅ.01ರಂದು ಬೆಳಿಗ್ಗೆ 07 ಗಂಟೆಗೆ ಟ್ಯಾಂಕ್ ಬಂಡ್ ರಸ್ತೆಯ ರಂಗ ಮಂದಿರದಿಂದ ಎ.ಪಿ.ಎಂ.ಸಿ ವೃತ್ತದವರೆಗೆ ಹಮ್ಮಿಕೊಳ್ಳಲಾಗಿದ್ದು, ಈ ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು, ಸ್ವಸಹಾಯ ಸಂಘ ಸಂಸ್ಥೆಗಳು, ಸರ್ಕಾರೇತರ ಸಂಘ ಸಂಸ್ಥೆಗಳು ಭಾಗವಹಿಸಿ ಶ್ರಮಾದಾನ ಮಾಡಿ ನಗರವನ್ನು ಸ್ವಚ್ಛವಾಗಿಡಲು ತಾವೂ ಕೈಜೋಡಿಸಬೇಕು ಎಂದು ಕೋರಿದ್ದಾರೆ.