ಅಂಗನವಾಡಿ ಕಾರ್ಯಕರ್ತೆಯರ ಸಹಾಯಕಿಯರ ಫೆಡರೇಷನ್ ವತಿಯಿಂದ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಪ್ರತಿಭಟನೆ

0
426

Bp News ಬಳ್ಳಾರಿ ಸೆ. 15,2023 :
ಇಂದು ಬಳ್ಳಾರಿಯ ಡಿಸಿ‌ ಕಛೇರಿ ಮುಂದೆ ಅಂಗನವಾಡಿ ಕಾರ್ಯಕರ್ತೆಯರ ಸಹಾಯಕಿಯರ ಫೆಡರೇಷನ್ ವತಿಯಿಂದ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಕಳೆದ 48 ವರ್ಷಗಳಿಂದ ಶೂನ್ಯದಿಂದ 6 ವರ್ಷ ವಯೋಮಾನದ ಮಕ್ಕಳಿಗಾಗಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಯ ಮೂಲಕ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಆರೋಗ್ಯ, ಲಾಲನೆ-ಪಾಲನೆ, ಪೌಷ್ಠಿಕ ಆಹಾರ, ಶಾಲಾ ಪೂರ್ವ ಶಿಕ್ಷಣ ಇತ್ಯಾದಿ ಸೇವೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಇದೀಗ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಎಲ್ಲಿ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆಯೋ ಅದೇ ಪ್ರದೇಶಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು, ಶಾಲಾ ಪೂರ್ವ ತರಗತಿಗಳನ್ನು ಪ್ರಾರಂಭಿಸಲು ಮುಂದಾಗಿರುವುದು ಅಂಗನವಾಡಿ ಕೇಂದ್ರಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಆರನೇ ಗ್ಯಾರಂಟಿ ಜಾರಿಗೊಳಿಸಿ:

‌    ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ನಾಯಕಿ ಶ್ರೀಮತಿ ಪ್ರಿಯಾಂಕ ಗಾಂಧಿಯವರು ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಅಂಗನವಾಡಿ ಸಂಘಟನೆಯ ನಾಯಕರೊಂದಿಗೆ ಸಮಾಲೋಚಿಸಿ ಗೌರವ ಧನವನ್ನು ಕಾರ್ಯಕರ್ತೆಯರಿಗೆ 15 ಸಾವಿರ, ಸಹಾಯಕಿಯರಿಗೆ 10 ಸಾವಿರ ಹೆಚ್ಚಿಸುವ ಹಾಗೂ ನಿವೃತ್ತರಿಗೆ ಇಡುಗಂಟು 3 ಲಕ್ಷ ರೂಪಾಯಿ ನೀಡುವ ಭರವಸೆಯನ್ನು ಸರ್ಕಾರದ ನೇ ಗ್ಯಾರಂಟಿಯಾಗಿ ಘೋಷಿಸಿದ್ದು ಇದನ್ನುರಾಜ್ಯ ಸರ್ಕಾರ ಕೂಡಲೇ ಘೋಷಿಸಿರುವ ಭರವಸೆಯನ್ನು ಈಡೇರಿಸಲು ಕ್ರಮ ವಹಿಸಬೇಕೆಂದು ಒತ್ತಾಯಿಸುತ್ತೇವೆ.

 

ಬೇಡಿಕೆಗಳು :

1. ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ, ಸಹಾಯಕಿಯರಿಗೆ 10 ಸಾವಿರ ರೂಪಾಯಿ ಗೌರವಧನ ಹೆಚ್ಚಿಸುವ ಮತ್ತು ನಿವೃತ್ತರಿಗೆ 3 ಲಕ್ಷ ಇಡಿಗಂಟು ನೀಡುವ ಭರವಸೆಯ 6ನೇ ಗ್ಯಾರಂಟಿಯನ್ನು ಜಾರಿಗೊಳಿಸಬೇಕು.

2. ಅಂಗನವಾಡಿ ವ್ಯವಸ್ಥೆಗೆ ವಿರುದ್ಧವಾಗಿ ಹಾಗೂ ಪರ್ಯಾಯವಾಗಿ ಶಿಶುಪಾಲನಾ ಕೇಂದ್ರಗಳು ಮತ್ತು ಪೂರ್ವ ಪ್ರಾಥಮಿಕ ತರಗತಿಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಹೊರಡಿಸಿರುವ ಆದೇಶಗಳನ್ನು ವಾಪಸ್ಸು ಪಡೆದು ಅಂಗನವಾಡಿ ಕೇಂದ್ರಗಳಲ್ಲಿಯೇ ಶಾಲಾ ಪೂರ್ವ ತರಗತಿಗಳನ್ನು (ಎಲ್‌ ಕೆಜಿ ಯುಕೆಜಿ) ನಡೆಸಲು ವಿಶೇಷ ಸವಲತ್ತುಗಳನ್ನು ಒದಗಿಸಬೇಕು.

3. ಗ್ರಾಚ್ಯುಟಿ ಪಡೆಯಲು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಅರ್ಹರು ಎಂಬುದಾಗಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ರಾಜ್ಯದಲ್ಲಿ | ಜಾರಿಗೊಳಿಸಲು ಈವರೆಗೆ ನಿವೃತ್ತರಾದ ಎಲ್ಲರಿಗೂ ಗ್ರಾಚ್ಯುಟಿ ಸೌಲಭ್ಯ ನೀಡಲು ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕು.

4. ಸ್ವಯಂ ನಿವೃತ್ತಿ ಯೋಜನೆ ಜಾರಿಗೆ ತರಲಾಗಿದ್ದು, ಈ ಯೋಜನೆಯಲ್ಲಿ ಕಾರ್ಯಕರ್ತೆಯರಿಗೆ 50 ಸಾವಿರ ರೂಪಾಯಿ ಮತ್ತು 30 ಸಾವಿರ ರೂಪಾಯಿ ನೀಡುವ ಆದೇಶವಿದ್ದು, ಇದನ್ನು ಕಾರ್ಯಕರ್ತೆ ಮತ್ತು ಸಹಾಯಕಿಯರ ಬಾಕಿ ಇರುವ ಸೇವೆಗೆ ಗೌರವಧನದೊಂದಿಗೆ ಪಾವತಿ ಮಾಡಬೇಕು.

5. ಸಹಾಯಕಿಯರ ಹುದ್ದೆಗೆ ನೇಮಕಾತಿ ಮಾಡುವ ವಿಚಾರದಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಮಾಡಿದವರನ್ನು ಸಹಾಯಕಿ ಹುದ್ದೆಗೆ ನೇಮಕ ಮಾಡಬಾರದು.

6. ಖಾಲಿ ಇರುವ ಸಹಾಯಕಿಯರ ಹುದ್ದೆಗೆ ಕೇವಲ ಎಸ್.ಎಸ್.ಎಲ್.ಸಿ. ಪಾಸಾದವರಿಗೆ ಮಾತ್ರ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಕಡಿಮೆ ಓದಿದ ಮಹಿಳೆಯರಿಗೆ ಅನ್ಯಾಯವಾಗುತ್ತದೆ.

7. ಈಗಿರುವ ಸಹಾಯಕಿಯರ ಖಾಲಿ ಹುದ್ದೆಗಳನ್ನು ಕೂಡಲೇ ನೇಮಕ ಮಾಡಬೇಕು.

ಈ ಮೇಲಿನ ಬೇಡಿಕೆಗಳಿಗೆ ಈಡೇರಿಸುವಂತೆ ಒತ್ತಾಯಿಸಿ ಹಾಗೂ “ಅಂಗನವಾಡಿ ಕೇಂದ್ರಗಳನ್ನು ಉಳಿಸಿ-ಅಂಗನವಾಡಿ ವ್ಯವಸ್ಥೆಗಳನ್ನು ಬಲಗೊಳಿಸಿ” ಎಂಬ ಘೋಷಣೆಯೊಂದಿಗೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಮೂಲಕ ತಮ್ಮ ಗಮನ ಸೆಳೆಯುತ್ತಿದ್ದು ದಯಮಾಡಿ ಬಗೆಹರಿಸಬೇಕೆಂದು ಒತ್ತಾಯಿಸುತ್ತೇವೆ.
ಎಂದು ಶ್ರೀಮತಿ‌ ಅರ್ಕಾಣಿ, ಜಿಲ್ಲಾಧ್ಯಕ್ಷರು ಮಾಧ್ಯಮಕ್ಕೆ ತಿಳಿಸಿದರು.

ಈ‌ ಸಂಧರ್ಬಧಲ್ಲಿ  ಫೆಡರೇಷನ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈ. ಮಂಗಮ್ಮ,
ಸೇರಿದಂತೆ ಶ್ರೀಮತಿ ಪಿ.ಡಿ.ಮೀನಾಕುಮಾರಿ, ಶ್ರೀಮತಿ ಇಂದಿರಾ, ಶ್ರೀಮತಿ ಸ್ವರೂಪರಾಣಿ, ಶ್ರೀಮತಿ ನಾಗರತ್ನಮ್ಮ, ಸೌಭಾಗ್ಯ, ಶ್ರೀಮತಿ, ಕವಿತ, ಶ್ರೀಮತಿ ಬಿ.ಕೆ.ಶಾರದಾ, ಶ್ರೀಮತಿ ಎರಮ್ಮ, ಶ್ರೀಮತಿ ಶಿವಗಂಗಮ್ಮ, ಶ್ರೀಮತಿ ರತ್ನಮ್ಮ, ಶ್ರೀಮತಿ ಪಿ.ಕಲಾವತಿ, ಶ್ರೀಮತಿ ಮಂಗಳಗೌರಿ, ಶ್ರೀಮತಿ ಪಿ.ಸತ್ಯಸಾವಿತ್ರಿ, ಕು. ಪದ್ಮಾವತಿ, ಶ್ರೀಮತಿ ಸುನೀತಾ, ಶ್ರೀಮತಿ ಜಗದೀಶ್ವರಿ, ಶ್ರೀಮತಿ .ಪುಷ್ಪಾವತಿ, ಶ್ರೀಮತಿ ಜಮೇಲಾ, ಶ್ರೀಮತಿ ಕೊಂಡಮ್ಮ, ಶ್ರೀಮತಿ ಈರಮ್ಮ ಹಿರೇಮಠ, ಶ್ರೀಮತಿ ಜ್ಯೋತಿ, ಶ್ರೀಮತಿ ಗಂಗಮ್ಮ, ಶ್ರೀಮತಿ ಮಾರ್ಗರೇಟ್‌, ಶ್ರೀಮತಿ ಮಮತಾ, ಶ್ರೀಮತಿ ಈರಮ್ಮ, ಶ್ರೀಮತಿ ರೇಣುಕ ಸೇರಿದಂತೆ‌ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here