ಶಿಕ್ಷಕರ ದಿನಾಚರಣೆಯಂದು ಗಮನಸೆಳೆದ ಗಾಯನ ಕಾರ್ಯಕ್ರಮ.

0
107

BP NEWS: ಬಳ್ಳಾರಿ: ಸೆಪ್ಟೆಂಬರ್.06:  ಶಿಕ್ಷಕರ ದಿನಾಚರಣೆ ಪ್ರಯುಕ್ತ ದಿನಾಂಕ 5- 9- 2023 ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಸಂಡೂರಿನ ಆದರ್ಶ ಕಲ್ಯಾಣ ಮಂಟಪದಲ್ಲಿ  ಸಾಕ್ಷರತಾ ಮತ್ತು ಶಾಲಾ ಶಿಕ್ಷಣ ಇಲಾಖೆ,  ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಸಂಡೂರು ಇವರ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಂಗೀತ ಶಿಕ್ಷಕರಾದ ವಿಜಯಕುಮಾರ್ ಸಂಗೀತ ತಂಡದೊಂದಿಗೆ ನಾಡಗೀತೆ, ರೈತಗೀತೆಯನ್ನು ಪ್ರಸ್ತುತ ಪಡಿಸಿದರು.

ಶಿಕ್ಷಕಿಯಾದ ಗೀತಾ ಅವರು, ತಬಲದಲ್ಲಿ ಕುಮಾರಸ್ವಾಮಿ,  ಶಶಿಕಲಾ,  ಶ್ರೀರಾಮ್,  ಡಿ ಜಿ ತಿರುಮಲ, ಅವರನ್ನು ಒಳಗೊಂಡ ತಂಡದವರು ಸುಶ್ರಾವ್ಯವಾಗಿ ಹಾಡಿ ನೆರೆದಿದ್ದ ಜನರ, ಶಿಕ್ಷಕರ ಗಮನ ಸೆಳೆದರು,  ಸುಮಾರು 30 ಶಿಕ್ಷಕರು ರಚಿಸಿದ ಕವನಗಳ ಸ್ಪಂದಸಿರಿ ಕವನ ಸಂಕಲನ ಪುಸ್ತಕ ಬಿಡುಗಡೆಗೊಳಿಸುತ್ತ ಅದರಲ್ಲಿರುವ 10 ಕವನ ಸಂಕಲಗಳನ್ನು ಆಯ್ಕೆ ಮಾಡಿಕೊಂಡು ರಾಗ ಸಂಯೋಜನೆ ಮಾಡಿ ಗಾಯನ ಪ್ರದರ್ಶನವನ್ನು ನೀಡಲಾಯಿತು. ಗಾಯನ ಕಾರ್ಯಕ್ರಮ ನೀಡಿದ ಎಲ್ಲರಿಗೂ ಸಂಡೂರಿನ ಶಾಸಕರಾದ ಈ ತುಕಾರಾಂ ಅವರು ಎಲ್ಲಾ ಸಂಗೀತ ಶಿಕ್ಷಕರಿಗೆ ವೇದಿಕೆ ಮೇಲೆ ಸನ್ಮಾನಿಸಿ ಗೌರವಿಸಿದರು. ಇದೆ ಸಂದರ್ಭದಲ್ಲಿ ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಮ.ನಿ. ಪ್ರ. ಪ್ರಭು ಮಹಾಸ್ವಾಮಿಗಳು ವಿರಕ್ತ ಮಠ ಸಂಡೂರ ಇವರು ವಹಿಸಿ ಕೊಂಡಿದ್ದರು.

ಉಪನ್ಯಾಸ ಕಾರ್ಯಕ್ರಮವನ್ನು ಡಾ.ಬಿ.ಬಿ ಪೋಲಿಸ್ ಪಾಟೀಲ್ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಅವರು ಪ್ರಸ್ತುತ ಪಡಿಸಿದರು.  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ.ಐ.ಆರ್ ಅಕ್ಕಿ ಸರ್ ಹಾಗೂ ಬಸವರಾಜ್ ಸರ್ ಅವರಿಗೆ ಸಂಗೀತ ಶಿಕ್ಷಕರ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು ತಿಳಿಸಲಾಯಿತು.

LEAVE A REPLY

Please enter your comment!
Please enter your name here