ನೂತನ ಶಾಲೆಯನ್ನು ಪ್ರಾರಂಭಿಸುವಂತೆ ಆರ್ಯ ವೈಶ್ಯ ಅಸೋಸಿಯನ್ ವತಿಯಿಂದ ದಿಢೀರ್ ನಿರ್ಧಾರ

0
494

Sept 05 ಬಳ್ಳಾರಿ: BP News Karnataka.

Bisiloorpaost kananda Daily. 

ಸುಮಾರು ದಿನಗಳಿಂದ ಗೊಂದಲದ ಗೂಡಾಗಿದ್ದ ವಾಸವಿ ಶಾಲೆಯ ಸಮಸ್ಯೆ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ.

ಬಳ್ಳಾರಿಯ ಶ್ರೀ ವಾಸವಿ ಎಜುಕೇಷನ್ ಟ್ರಸ್ಟ್ ಮತ್ತು ಆರ್ಯ ವೈಶ್ಯ ಅಸೋಷೊಯೇಶನ್ ನಡುವೆ ನಡೆಯುತ್ತಿರುವ ಕಾನೂನು ಹೋರಾಟ ಮತ್ತು ಮುಸುಕಿನ ಗುದ್ದಾಟ ಈಗ ಬಟಾ ಬಯಲಾಗಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಶಾಲೆಯಲ್ಲಿನ ವಿದ್ಯಾರ್ಥಿಗಳು ಮತ್ತು ಪಾಲಕರು ಇದರಿಂದ ಅಕ್ಷರಶಃ ಗೊಂದಲದಲ್ಲಿದ್ದಾರೆ.
ಇನ್‍ಫ್ಯಾಂಟ್ರಿ ರಸ್ತೆಯಲ್ಲಿರುವ ಸರ್ವೇ ನಂ. 522/ಬಿ ಯ 2.08 ಎಕರೆ ಜಾಗ (ವಾಸವಿ ಶಾಲೆಯಿರುವ ಜಾಗ) ಆರ್ಯ ವೈಶ್ಯ ಅಸೋಷಿನೇಶನ್ ಗೆ ಸಂಬಂಧಿಸಿದ್ದಾಗಿದ್ದು, 30 ವರ್ಷ ಲೀಜ್ ಗೆ ಶ್ರೀ ವಾಸವಿ ಎಜುಕೇಷನ್ ಟ್ರಸ್ಟ್ ಗೆ ನೀಡಿದೆ. ಅದರ ಅವಧಿ 2016 ಕ್ಕೆ ಪೂರ್ಣಗೊಂಡಿದೆ. ನಮ್ಮ ನಿಬಂಧನೆಗಳನ್ನು ಒಪ್ಪಿ, 2.08 ಎಕ್ಕರೆ ಜಾಗದಲ್ಲಿ ಡಯಾಲಿಸಿಸ್ ಕೇಂದ್ರ ಮತ್ತು ಫಿಜಿಯೋ ಥೆರಪಿ ಕೇಂದ್ರವನ್ನು ಪ್ರಾರಂಭಿಸಲು ಸಹಕರಿಸದಿದ್ದರೆ, ಮುಂದೆ ಹೋಗುವುದಾರೆ ನಾವು ಬೆಂಬಲಿಸುತ್ತೇವೆ. ಇಲ್ಲವಾದಲ್ಲಿ ವಾಸವಿ ಶಾಲೆಯವರಿಗೆ ಜಾಗದ ಯಾವುದೇ ಮರು ನವೀಕರಣ ಮಾಡದೇ ನಾವೇ ಶಾಲೆಯನ್ನು ನಡೆಸುತ್ತೇವೆ ಎಂದು ಅರ್ಯ ವೈಶ್ಯ ಅಸೋಶಿಯೇಷನ್         ಪ್ರಧಾನ ಕಾರ್ಯದರ್ಶಿ ಸೊಂತ ಗಿರಿಧರ ಪ್ರಕಟಣೆ ಹೊರಡಿಸಿದ್ದರು.

ಅದರ ಬೆನ್ನಲ್ಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು(ಡಿಡಿಪಿಐ) ಕೂಡ ಏಳು ದಿನಗಳ ಗಡುವನ್ನು ನೀಡಿ, ಸೂಕ್ತ ದಾಖಲಾತಿಗಳನ್ನು ಇಲಾಖೆಗೆ ನೀಡದಿದ್ದರೆ, ಶಾಲೆಯ ನೋಂದಣಿಯನ್ನು ತಿರಸ್ಕರಿಸಲಾಗುತ್ತದೆ. ಮಕ್ಕಳ ಭವಿಷ್ಯಕ್ಕೇನಾದರೂ ತೊಂದರೆ ಆದರೆ ನೀವೇ ಜ್ವವಬ್ದಾರರು ಎಂದು ವಾಸವಿ ಶಾಲೆಗೆ ಎಚ್ಚರಿಕೆಯ ನೋಟೀಸ್‍ನ್ನು ನೀಡಿದ್ದರು. ಡಿಡಿಪಿಐ ಯ ಈ ನೋಟೀಸ್ ವಾಸವಿ ಶಾಲೆಗೆ ಬಹಳದೊಡ್ಡ ಹಿನ್ನಡೆಯಾಗಿತ್ತು.

ಆರ್ಯ ವೈಶ್ಯ ಅಸೋಶಿಯೇಷನ್ ಈಗ ತಾವೇ ಖುದ್ದಾಗಿ ಸುಸಜ್ಜಿತ ಉತ್ಕøಷ್ಟ ಮಟ್ಟದ ಶಾಲೆಯನ್ನು ಪ್ರಾರಂಭಿಸಲು ಸಾರ್ಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಪತ್ರ ಬರೆದಿದೆ. ಇದರಿಂದ ಶ್ರೀ ವಾಸವಿ ಎಜುಕೇಷನ್ ಟ್ರಸ್ಟ್ ನವರಿಗೆ ನುಂಗಲಾದ ತುತ್ತಾಗಿದೆ.

ಟ್ರಸ್ಟ್ ನ ಅಧ್ಯಕ್ಷರ ರಾಜಿನಾಮೆ..?

ಈ ಗೊಂದಲವನ್ನು ನೋಡಿ ಪ್ರಧಾನ ಕಾರ್ಯದರ್ಶಿಗಳ ಏಕಪಕ್ಷೀಯ ನಿರ್ಧಾರಕ್ಕೆ ಬೇಸತ್ತು ಶ್ರೀ ವಾಸವಿ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷರಾದ ಅಗಡಿ ಪ್ರಸಾದ್ ಅವರು ರಾಜಿನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ. ನೂತನ ಅಧ್ಯಕ್ಷಗಿರಿಗೆ ಯಾರೂ ಮುಂದೆ ಬಾರದಿರುವುದು ಅಚ್ಚರಿಗೆ ಕಾರಣವಾಗಿದೆ.

ಮನವಿ ಪತ್ರದಲ್ಲಿ ಏನಿದೆ.?

  • ಆರ್ಯ ವೈಶ್ಯ ಅಸೋಶಿಯೇಷನ್ ನವರು ಸದ್ಯ ವಾಸವಿ ಶಾಲೆಯಿರುವ ಜಾಗದಲ್ಲಿ ನೂತನವಗಿ 1ನೇ ತರಗತಿಯಿಂದ 5 ನೇ ತರಗತಿಯವರೆಗೆ ಮತ್ತು 06 ರಿಂದ 10 ನೇ ವರೆಗೆ ಹೊಸ ಶಾಲೆಯನ್ನು ಪ್ರಾರಂಭಿಸಲು ನಿರ್ಧದರಿಸಿದ್ದಾರೆ.
  • ನಂ 522/ಬಿ,ಇನ್ ಫೆಂಟ್ರಿ ರಸ್ತೆಯಲ್ಲಿರುವ ವಾಸವಿ ಶಾಲೆ 2.08 ಎಕರೆ ಪ್ರದೇಶದಲ್ಲಿದೆ
    ಮುಖ್ಯವಾಗಿ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲೆಯನ್ನು ಪ್ರಾರಂಭಿಸಲಾಗುವುದು.
  • ನಾವು ಆಸ್ತಿಯ ROR ಪ್ರತಿಯನ್ನು ಲಗತ್ತಿಸುತ್ತಿದ್ದೇವೆ ಮತ್ತು ಜಿಲ್ಲಾಧಿಕಾರಿ ಗಳಿಂದಪಡೆದ ಅನುಮತಿಯನ್ನು ಸಹ ಲಗತ್ತಿಸುತ್ತಿದ್ದಾರೆ.
  • ಏಕಕಾಲದಲ್ಲಿ ನಾವು ಬಡ ರೋಗಿಗಳ ಅನುಕೂಲಕ್ಕಾಗಿ ಪ್ರತ್ಯೇಕವಾಗಿ 2.08 ಎಕರೆ ಪ್ರದೇಶದಲ್ಲಿ ಡಯಾಲಿಸಿಸ್ ಕೇಂದ್ರ ಮತ್ತು ಫಿಸಿಯೋಥೆರಪಿ ಕೇಂದ್ರವನ್ನು ನಿರ್ಮಿಸುತ್ತೇವೆ.

ಶಾಲೆಯನ್ನು ಆದಷ್ಟು ಬೇಗ ಆರಂಭಿಸಲು ಸಹಕಾರದ ನಿರೀಕ್ಷಿಸಿದ್ದಾರೆ.

LEAVE A REPLY

Please enter your comment!
Please enter your name here