ಗ್ರಾಪಂ ಅಧ್ಯಕ್ಷರಿಗೆ ಸಮಾಗಮ ಕಾರ್ಯಕ್ರಮ ಅಭಿವೃದ್ಧಿ ಕುರಿತು ಚಿಂತನೆ ಕಾರ್ಯಗಾರ

0
84

BP NEWS: ಬಳ್ಳಾರಿ: ಆಗಸ್ಟ್.18:
ನಗರದ ಜಿಲ್ಲಾ ಪಂಚಾಯತ್‍ನ ಅಬ್ದುಲ್ ನಜೀರ್ ಸಭಾಂಗಣದಲ್ಲಿ ಗುರುವಾರದಂದು ಜಿಲ್ಲೆಯ ಎಲ್ಲಾ ಗ್ರಾಮಪಂಚಾಯಿತಿ ಅಧ್ಯಕ್ಷರು ಹಾಗೂ 2 ನೇ ಅವಧಿಗೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರುಗಳಿಗೆ ಸಮಾಗಮ ಕಾರ್ಯಕ್ರಮದಡಿ ‘ಅಭಿವೃದ್ಧಿ ಕುರಿತು ಚಿಂತನೆ ಕಾರ್ಯಗಾರ’ವು ನಡೆಯಿತು.
ಸಮಾಗಮ ಕಾರ್ಯಕ್ರಮ “ಅಭಿವೃದ್ಧಿ ಕುರಿತು ಚಿಂತನೆ ಕಾರ್ಯಗಾರ”ಕ್ಕೆ ಜಿಲ್ಲಾ ಪಂಚಾಯತ್‍ನ ಉಪ ಕಾರ್ಯದರ್ಶಿ ಗಿರಿಜಾ ಶಂಕರ್ ಹಾಗೂ ಗಣ್ಯರು ಸೇರಿ ಉದ್ಘಾಟಿಸಿದರು.
ಬಳ್ಳಾರಿ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಅವರು ಉಪನ್ಯಾಸ ನೀಡಿ, ಗ್ರಾಮದ ಸರ್ವತೋಮುಖ ಅಭಿವೃದ್ಧಿಯು ಗ್ರಾಮ ಮಟ್ಟದಿಂದಲೇ ಆಗಬೇಕು. ಇದಕ್ಕೆ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಗುರುತಿಸುವಂತಹ ಅಭಿವೃದ್ಧಿ ಕಾರ್ಯಗಳು ಪ್ರತಿಯೊಂದು ಗ್ರಾಮ ಪಂಚಾಯತಿಗಳಲ್ಲಿ ನಡೆಯಬೇಕು ಎಂದರು.
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ಆರ್.ಕೆ ಬಸವರಾಜ್ ಅವರು ಮಾತನಾಡಿ, ಗ್ರಾಮ ಪಂಚಾಯತಿಯ ಸ್ವರೂಪ ಹಾಗೂ ಮಹಾತ್ಮ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಬಹುದಾದಂತಹ ಕಾಮಗಾರಿಗಳ ಕುರಿತು ವಿಷಯ ಮಂಡನೆ ಮಾಡಿದರು.


ಪಂಚಾಯತ್‍ರಾಜ್ ಯೋಜನೆಯ ಸಹಾಯಕ ನಿರ್ದೇಶಕ ಮಹಮ್ಮದ್ ಗೌಸ್‍ರಿಸಲ್ದಾರ್ ಅವರು, ಗ್ರಾಮ ಪಂಚಾಯತಿಯ ಉಗಮ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‍ರಾಜ್ ಅಧಿನಿಯಮ-1993ರ ಅಧ್ಯಾಯ-4, ಗ್ರಾಮ ಪಂಚಾಯತಿ 58 ರಿಂದ 110ರವರೆಗಿನ ಪ್ರಕರಣ ಕಾರ್ಯಗಳ ಬಗ್ಗೆ ತಿಳಿಸಿದರು.
ಕಾರ್ಯಾಗಾರದಲ್ಲಿ ಬಳ್ಳಾರಿಯ 25 ಗ್ರಾಮ ಪಂಚಾಯತಿಗೆ 2ನೇ ಅವಧಿಗೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರುಗಳಿಗೆ ಮಹಾತ್ಮಗಾಂಧಿ ನರೇಗಾ ಯೋಜನೆ ಮತ್ತು ಇತರೆ ಯೋಜನೆಗಳ ಕುರಿತು ಸಂವಾದ ಕಾರ್ಯಕ್ರಮ ಹಾಗೂ ತಾಲೂಕಿನಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನ ಮಾಡಿದ ಕಾಮಗಾರಿಗಳನ್ನು ವಿಡೀಯೋ ಮೂಲಕ ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಜಿಪಂನ ಮುಖ್ಯ ಯೋಜನಾಧಿಕಾರಿ ಚಂದ್ರಶೇಖರ್‍ಗುಡಿ, ಮುಖ್ಯ ಲೆಕ್ಕಾಧಿಕಾರಿ ವಿನೋದ್‍ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ವಿಜಯ್‍ಕುಮಾರ್, ಪಂಚಾಯತ್‍ರಾಜ್‍ನ ವ್ಯವಸ್ಥಾಪಕ ಬಚ್ಚಲಪ್ಪ ಸೇರಿದಂತೆ ತಾಲ್ಲೂಕಿನ ಎಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ತಾಲ್ಲೂಕು ಪಂಚಾಯತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here