BP NEWS: ರಾಯಚೂರು: ಆಗಸ್ಟ್.15:
ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ ಸಿಂಧನೂರು ತಾಲೂಕ ಕಲಾವಿದರ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸಲು ವಿವಿಧ ಕ್ಷೇತ್ರದ ಜನಪದ ಕಲಾವಿದರಿಂದ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಇವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಭಾಗವಹಿಸಿದಂತ ನಾರಾಯಣಪ್ಪ ಮಾಡಸಿರುವಾರ ತತ್ವಪದ ಗಾಯಕರು ಮಾಜಿ ಅಕಾಡೆಮಿ ಸದಸ್ಯರು, ಒಕ್ಕೂಟದ ಜಿಲ್ಲಾ ಗೌರವ ಅಧ್ಯಕ್ಷರು, ಅಮರೇಶ್ ಹಸ್ಮಕಲ್ ಕೇಂದ್ರ ಸಹ ಕಾರ್ಯದರ್ಶಿಗಳು, ಚಿನ್ನಪ್ಪ ಯಾಗಲಪರ್ವಿ ಜಿಲ್ಲಾ ಸಂಚಾಲಕರು, ಹನುಮಂತ ಭಜಂತ್ರಿ ತಾಲೂಕ ಅಧ್ಯಕ್ಷರು ಸಿಂಧನೂರು, ಉಮಾಪತಿ ಕನ್ನಾರಿ ತಾಲೂಕ ಪ್ರಧಾನ ಕಾರ್ಯದರ್ಶಿಗಳು, ಜಂಬಣ್ಣ ನಾಗಲಾಪುರ ಸಂಘಟನೆ ಕಾರ್ಯದರ್ಶಿಗಳು, ಗುಂಡಪ್ಪ ಯಾಪಲಪರ್ವಿ ಸದಸ್ಯರು ಸೇರಿದಂತೆ ಸಿಂಧನೂರು ತಾಲೂಕಿನ ಎಲ್ಲಾ ಕ್ಷೇತ್ರದ ಕಲಾವಿದರು ಭಾಗವಹಿಸಿ ಶಾಸಕರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.