BP NEWS: ಬಳ್ಳಾರಿ: ಆಗಸ್ಟ್.15 :
ಬಳ್ಳಾರಿ ನಗರದ ವಕ್ಫ್ ಬೋರ್ಡ್ ಕಚೇರಿಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಅಧ್ಯಕ್ಷರಾದ ಹುಮಯೂನ್ ಖಾನ್ ಅವರು ಧ್ವಜಾರೋಹಣವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರು, ನಾವೆಲ್ಲಾ ಜಾತಿ ಮತ ಭೇದವನ್ನು ಮರೆತು, ನಮ್ಮ ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದಂತಹ ಗಾಂಧೀಜಿ, ಅಂಬೇಡ್ಕರ್ ಹಾಗೂ ಅಬೂ ಕಲಾಂ ಆಜಾದ್ ಅಂತಹ ಹಲವಾರು ಮಹಾನ್ ವ್ಯಕ್ತಿಗಳು ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ. ಅವರನ್ನೆಲ್ಲಾ ಈ ಸಂಧರ್ಭದಲ್ಲಿ ನಾವೆಲ್ಲ ಸ್ಮರಿಸಲೇಬೆಕಾಗಿದೆ.
ಅವರ ತ್ಯಾಗದ ಪ್ರತಿಫಲವೇ ಇಂದು ನಾವು 77ನೇ ಸ್ವತಂತ್ರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ.
ನಾವೆಲ್ಲ ಒಂದೇ ಭಾರತೀಯರು ಎಂಬ ವ್ಯಾಕ್ಯದೊಂದಿಗೆ ಸಮೃದ್ದ ಭಾರತ ದೇಶ ಕಟ್ಟೋಣ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ವಕ್ಫ್ ಬೋರ್ಡ್ ಆಡಳಿತ ಮಂಡಳಿಯ ಉಪಾಧ್ಯಕ್ಷರು, ಕಣೆಕಲ್ ಮಬೂಸಾಬ್, ಖಾಜಾ, ಸಂಡೂರು ನಜಿರ್ ಅಹಮದ್ ಹಾಗೂ ಸದಸ್ಯರು, ಆಡಳಿತ ಅಧಿಕಾರಿ ಉಮೇರ್ ಹಾಗೂ ಎಲ್ಲಾ ಮಸೀದಿ ಮುತುವಲ್ಲಿಗಳು ಹಾಗೂ ಇಲಾಖೆಯ ಎಲ್ಲಾ ಸಿಬ್ಬಂದಿ ಉಪಸ್ಥಿತರಿದ್ದರು.