ವಿಜಯ್ ರಾಘವೇಂದ್ರ ಪತ್ನಿ ಸ್ಪಂದನ ನಿಧನ.

0
392

BP NEWS: ಬೆಂಗಳೂರು: ಆಗಸ್ಟ್.07: ಸ್ಯಾಂಡಲ್‌ವುಡ್ ನಟ ವಿಜಯ್‌ ರಾಘವೇಂದ್ರ ಪತ್ನಿ ಸ್ಪಂದನ ಅವರು ನಿಧನರಾಗಿದ್ದಾರೆ. ಇಂದು ಹೃದಯಾಘಾತದಿಂದ ಸ್ಪಂದನ ಇಹಲೋಕ ತ್ಯಜಿಸಿದ್ದಾರೆ.

ವಿಜಯ್‌ ಪತ್ನಿ ಸ್ಪಂದನ ಅವರು ಇತ್ತೀಚಿಗೆ ಬ್ಯಾಂಕಾಕ್‌ ಪ್ರವಾಸಕ್ಕೆ ತೆರಳಿದ್ದಾಗ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅಪ್ಪು ನಿಧನದ ಶಾಕ್‌ನಿಂದ ಹೊರ ಬಂದಾಗಲೇ ಮತ್ತೊಂದು ಆಘಾತಕಾರಿ ವಿಚಾರ ಕುಟುಂಬಕ್ಕೆ ಶಾಕ್‌ ನೀಡಿದೆ. ಲೋ ಬಿಪಿ ಮತ್ತು ಹೃದಯಾಘಾತದಿಂದ ವಿಜಯ್‌ ಪತ್ನಿ ಸ್ಪಂದನ ವಿಧಿವಶರಾಗಿದ್ದಾರೆ.

ನಾಳೆ ಬೆಂಗಳೂರಿಗೆ ವಿಜಯ್‌ ಪತ್ನಿ ಪಾರ್ಥಿವ ಶರೀರ ಬರುವ ಸಾಧ್ಯತೆಯಿದ್ದು, ವಿಧಿ ವಿಧಾನ ಕಾರ್ಯವೆಲ್ಲ ಬೆಂಗಳೂರಿನಲ್ಲಿ ಜರುಗಲಿದೆ. ನಿವೃತ್ತ ಅಸಿಸ್ಟೆಂಟ್‌ ಪೊಲೀಸ್‌ ಆಫೀಸರ್‌ ಬಿ.ಕೆ ಶಿವರಾಮ್‌ ಅವರ ಪುತ್ರಿ ಸ್ಪಂದನ ಅವರು ವಿಜಯ್‌ ಹಲವು ವರ್ಷಗಳಿಂದ ಪ್ರೀತಿಸಿ, 2007ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದರು. ಈ ಜೋಡಿಗೆ ಒಬ್ಬ ಮಗನಿದ್ದಾನೆ.

ಸ್ಪಂದನಾಗೆ ಆಗಿದ್ದೇನು?

* ಕುಟುಂಬದ ಜೊತೆ ಬ್ಯಾಂಕಾಕ್‌ಗೆ ತೆರಳಿದ್ದ ಸ್ಪಂದನಾ

* ನಿನ್ನೆ ತಡ ರಾತ್ರಿ ಹೃದಯಾಘಾತ

* ತಕ್ಷಣ ಆಸ್ಪತ್ರೆಗೆ ದಾಖಲು, ಮುಂದುವರೆದ ಚಿಕಿತ್ಸೆ

* ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವು

*ಪತ್ನಿ ಸಾವಿನಿಂದ ದಿಕ್ಕೆಟ್ಟ ವಿಜಯರಾಘವೇಂದ್ರ

* ಮಗಳ ಸಾವಿನಿಂದ ಕಂಗೆಟ್ಟಿರುವ ಶಿವರಾಂ

ಕುಟುಂಬಸ್ಥರು

* ನಾಳೆ ಬೆಂಗಳೂರಿಗೆ ಪಾರ್ಥೀವ ಶರೀರ

* ನಟ ವಿಜಯರಾಘವೇಂದ್ರ ಕುಟುಂಬದ ಬೆನ್ನಿಗೆ ನಿಂತ ಸ್ಯಾಂಡಲ್‌ವುಡ್

 

LEAVE A REPLY

Please enter your comment!
Please enter your name here