BP NEWS: ಬಳ್ಳಾರಿ: ಆಗಸ್ಟ್.06: ಸಂಡೂರಿನ ತಾಲೂಕಿನ ಮೆಟ್ರಿಕಿ ಗ್ರಾಮ ಪಂಚಾಯಿತಿ ಎರಡನೇ ಸುತ್ತಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ಜರುಗಿತು ಅಧ್ಯಕ್ಷರ ಮತ್ತು ಉಪಾಧ್ಯಕ್ಷರು ಆವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೆಟ್ರಿಕಿ ಪಂಚಾಯಿತಿಯ ಅಧ್ಯಕ್ಷರ ಪರಿಶಿಷ್ಟ ಜಾತಿಯ ಬಂದಿದ್ದು, ಪಂಚಾಯಿತಿಯಲ್ಲಿ ಸದಸ್ಯರ ಸಂಖ್ಯೆ ಕೇವಲ ಒಂದೇ ಇದ್ದು ಅದಕ್ಕಾಗಿ ಯಾರು ಪೈಪೋಟಿ ಇಲ್ಲದೆ ಆ ವಿರೋಧವಾಗಿ ಪಂಚಾಯಿತಿಗೆ ಅವರೇ ಅಧ್ಯಕ್ಷರಾಗಿ ನೇಮಗೊಂಡಿದ್ದಾರೆ.
ಎಂ ಬಸಾಪುರ ಗ್ರಾಮದ ವರಲಕ್ಷ್ಮಿ ರುದ್ರಪ್ಪನವರು ಕೇವಲ 26 ವರ್ಷ ವಯಸ್ಸು. ಇಂಥ ಚಿಕ್ಕ ವಯಸ್ಸಿಗೆ ಅಧ್ಯಕ್ಷ ಸ್ಥಾನ ಹೊಂದಿದ ಮೆಟ್ರಿಕಿ ಪಂಚಾಯಿತಿ ಇದೆ ಮೊದಲು.
ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ದುರ್ಗಮ್ಮ ಸಿದ್ದಲಿಂಗಪ್ಪನವರು ಕೂಡ ಎಂ ಬಸಾಪುರ ಗ್ರಾಮದವರು. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನ ಎಂ ಬಸಾಪುರ ಗ್ರಾಮದ ಮಡಲಿಗೆ ಬಿದ್ದಿತು. ಮುಖಂಡರುಗಳಾದ ತಿಪ್ಪೇಸ್ವಾಮಿ, ಹೊಸಗೆರಪ್ಪ, ರಾಜಶೇಖರ್, ಸದಾಶಿವ, ಲಚ್ಚು ನಾಯಕ, ಹನುಮಂತಪ್ಪ ,ಶೇಖರಪ್ಪ, ಲಿಂಗರೆಡ್ಡಿ ಮುಂತಾದವರು ಇದ್ದರು. ಹಾಗೆಯೇ ಪಂಚಾಯಿತಿಯ ಹಾಲಿ ಸದಸ್ಯರು ಮಾಜಿ ಸದಸ್ಯರು ಸುತ್ತಮುತ್ತಲಿನ ಊರಿನ ಮುಖಂಡರುಗಳು ಭಾಗವಹಿಸಿದ್ದರು.